ಫೆಲಸ್ತೀನ್ ಮೇಲೆ ಇಸ್ರೇಲ್ ಸೇನೆ ಕ್ರೌರ್ಯ ನಡೆಸುತ್ತಿರುವ ವರದಿಗಳ ನಡುವೆ, ಯುದ್ಧಪೀಡಿತ ಗಾಜಾಕ್ಕೆ ಸಂಬಂಧಿಸಿದ ಚಿತ್ರಗಳು ಎಂಬ ಉಲ್ಲೇಖದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸಂದರ್ಭದಲ್ಲಿ, ಯುದ್ಧಭೂಮಿಯಲ್ಲಿ ಸಹಾಯಕಳಾಗಿ ಮಗುವನ್ನು ಹಿಡಿದುಕೊಂಡಿರುವ ಮಹಿಳೆ ಮತ್ತು ಮಕ್ಕಳು ಸಂಕಷ್ಟದಲ್ಲಿರುವ ಫೋಟೋವನ್ನು ನೈಜ ಚಿತ್ರ ಎಂದು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
“ಅಂತ್ಯದಿನದಂದು ಫೆಲಸ್ತೀನಿನ ಮಕ್ಕಳು, ಸಹೋದರಿಯರು, ತಾಯಂದಿರು ಮತ್ತು ಸಹೋದರರು ನಿಮ್ಮ ಕೈ ಹಿಡಿದು ದೇವರಲ್ಲಿ ಶಕ್ತಿಶಾಲಿಗಳು ನಮ್ಮನ್ನು ತೊರೆದಾಗ ಇವರು ನಮ್ಮನ್ನು ಬೆಂಬಲಿಸಿದರು ಎಂದು ಹೇಳುವಂತಹ ಕೆಲಸವನ್ನು ಮಾಡುತ್ತಿರಿ” ಎಂಬ ಹೇಳಿಕೆಯೊಂದಿಗೆ ಫೇಸ್ಬುಕ್ನಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್ಚೆಕ್
ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಈ ಫೋಟೋವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದು, ಮಕ್ಕಳ ಕೈಕಾಲುಗಳ ಸಂರಚನೆಯಲ್ಲಿ ವ್ಯತ್ಯಾಸಗಳಿರುವುದನ್ನು ಗಮನಿಸಿದೆ. ಈ ನ್ಯೂನತೆಗಳು ಕೃತಕ ತಂತ್ರಜ್ಞಾನ ಬಳಸಿ ಫೋಟೋಗಳನ್ನು ತಯಾರಿಸಿದಾಗ ಮಾತ್ರ ಕಂಡು ಬರುವುದರಿಂದ ಈ ಚಿತ್ರವನ್ನು AI ನಿಂದ ರಚಿಸಲಾಗಿದೆ ಎಂದು ದೃಢೀಕರಿಸಿದೆ.

ಇದರ ಆಧಾರದ ಮೇಲೆ, AI- ರಚಿತ ಚಿತ್ರಗಳನ್ನು ಪರಿಶೀಲಿಸುವ ಸಾಧನ ಹೈವ್ ಮಾಡರೇಶನ್ಗೆ ವೈರಲ್ ಫೋಟೋವನ್ನುಅಪ್ಲೋಡ್ ಮಾಡುವ ಮೂಲಕ ಈ ವೈರಲ್ ಚಿತ್ರವು 92.4 ಪ್ರತಿಶತ AI- ರಚಿತ ಎಂಬುದನ್ನು ಕಂಡುಕೊಂಡಿದೆ.

ಇದಲ್ಲದೇ, ಈ ಫೋಟೋವನ್ನು ಮತ್ತೊಂದು AI ಕಾನ್ಸೆಪ್ಟ್ ಟೆಸ್ಟಿಂಗ್ ಟೂಲ್ ‘AI Image Detector.org’ ನಲ್ಲಿ ಅಪ್ಲೋಡ್ ಮಾಡಿದ್ದೇವೆ. ಇಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಫೋಟೋವನ್ನು 97.61 ಪ್ರತಿಶತ AI ನಿಂದ ರಚಿಸಲಾಗಿದೆ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಫೋಟೋ ನೈಜ ಚಿತ್ರವಲ್ಲ ಬದಲಿಗೆ ಇದು ಗಾಜಾದಲ್ಲಿನ ಪರಿಸ್ಥಿತಿಯನ್ನು ಆಧರಿಸಿದ ಸಾಂಕೇತಿಕ ಬಿಂಬಿಸುವ ಚಿತ್ರವಾಗಿದೆ, ಇದನ್ನು ಕೃತಕ ಬುದ್ಧಿಮತ್ತೆ ಅಂದರೆ AI ಮೂಲಕ ರಚಿಸಲಾಗಿದೆ.
ಇದನ್ನು ಓದಿದ್ದೀರಾ? : Fact Check | ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

