Fact Check: ಹೈದರಾಬಾದ್ ಶ್ರೀಮಂತ ಹಿಂದೂ ಮತ್ತು ಬಡ ಮುಸ್ಲಿಂ ಪ್ರದೇಶಗಳಾಗಿ ವಿಭಜನೆಯಾಗಿದೆ ಎಂದು ಹಂಚಿಕೊಳ್ಳುತ್ತಿರುವ ಪೋಟೋ ನಕಲಿ
ಇತ್ತೀಚೆಗೆ ಹಿಂದೂ-ಮುಸ್ಲಿಂ ಧರ್ಮಿಯರ ನಡುವೆ ದ್ವೇಷ ಬಿತ್ತುವ ಸಲುವಾಗಿ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಇದರ ಭಾಗವಾಗಿ ಅನೇಕ ಸುಳ್ಳು ಪ್ರತಿಪಾದನೆಗಳ ಪೋಸ್ಟರ್‌ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪ್ರತೀದಿನ ಹರಿಬಿಡುತ್ತಿದ್ದಾರೆ. ಅದರ ಭಾಗವಾಗಿ ಈಗ, ಹೈದರಾಬಾದ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಪ್ರದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಎರಡು ಚಿತ್ರಗಳ ಮೂಲಕ ತೋರಿಸುವುದಾಗಿ ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ, ಕೊಳಗೇರಿ ಮುಸ್ಲಿಂ ಸಮುದಾಯದವರು ವಾಸಿಸುವ ಜಾಗವಾಗಿದೆ ಮತ್ತು ಬಹುಮಹಡಿಗಳನ್ನು ತೋರಿಸುವ ಪ್ರದೇಶ ಹಿಂದೂಗಳು ವಾಸಿಸುವ…
