ಮುಸ್ಲಿಮರ ಹೆಸರಿನಲ್ಲಿ ರಾಮ ಮಂದಿರ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ಹಿಂದೂ ಯುವಕರನ್ನು ಬಂಧಿಸಲಾಗಿದೆ ಎಂಬ ಸುದ್ಧಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಚಾಮರಾಜನಗರದಲ್ಲಿ ಭಾಗವಧ್ವಜ ಸುಟ್ಟು ಹಿಂದೂ ಮುಸ್ಲಿಂ ಗಲಭೆ ನಡೆಸಲು ಸಂಚು ರೂಪಿಸಿದ್ದ ಮೂವರು ಹಿಂದೂಗಳನ್ನು ಬಂದಿಸಲಾಗಿದ ಎಂಬ ಪತ್ರಿಕೆಯ ತುಣುಕನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದು ಕನ್ನಡ ಫ್ಯಾಕ್ಟ್ಚೆಕ್ ತಂಡವನ್ನು ಕೇಳಿಕೊಂಡಿದ್ದಾರೆ.


ಫ್ಯಾಕ್ಟ್ ಚೆಕ್:
ರಾಮ ಮಂದಿರ ಸ್ವೋಟಿಸುವುದಾಗಿ ಬೆದರಿಕೆ ನೀಡಿದ ಕುರಿತು ನಾವು ಅಂತರ್ಜಾಲದಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ವರದಿಗಳು ಲಭ್ಯವಾಗಿದ್ದು. 4 ಜನವರಿ 2025 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ “ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್ಟಿಎಫ್ ಎಡಿಜಿ ಅಮಿತಾಭ್ ಯಶ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಬಳಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಇಬ್ಬರನ್ನು ಬಂಧಿಸಿದೆ. ಆರೋಪಿಗಳನ್ನು ಗೊಂಡಾ ಜಿಲ್ಲೆಯ ನಿವಾಸಿಗಳಾದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಅವರು ಬೆದರಿಕೆ ಸಂದೇಶಗಳನ್ನು ಕಳುಹಿಸಲು ನಕಲಿ ಇಮೇಲ್ ವಿಳಾಸಗಳನ್ನು ರಚಿಸಿದ್ದಾರೆ.
ಎಸ್ಟಿಎಫ್ ಪ್ರಕಾರ, “ಸಿಂಗ್ ಮತ್ತು ಮಿಶ್ರಾ ಅವರು ಬಿಜೆಪಿ ಮುಖಂಡ ದೇವೇಂದ್ರ ತಿವಾರಿಯವರ ಸೂಚನೆಯ ಮೇರೆಗೆ ಇದನ್ನು ಮಾಡಿದ್ದಾರೆ, ಮುಸ್ಲಿಂ ಹೆಸರಿನಲ್ಲಿ ಬೆದರಿಕೆ ನೀಡಲು ಸೂಚಿಸಿದ್ದಾರೆ. ಇದು ಅವರಿಗೆ “ರಾಜಕೀಯ ಲಾಭ” ಪಡೆಯಲು ಸಹಾಯ ಮಾಡುತ್ತದೆ ಎಂದು ಅವರಿಗೆ ತಿಳಿಸಿದ್ದರು. ಸಿಂಗ್ ಮತ್ತು ಮಿಶ್ರಾ ಇಬ್ಬರೂ ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ.

ಈ ಕುರಿತಂತೆ ಹಲವಾರು ವರದಿಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇನ್ನೂ ಎರಡನೇ ಚಿತ್ರಕ್ಕೆ ಸಂಬಂಧಿಸದಂತೆ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಈ ಕುರಿತಂತೆ ಮಾಧ್ಯಮದ ವರದಿಗಳು ಲಭ್ಯವಾಗಿದ್ದು, 2017ರ ಸೆ.13ರ ಮಧ್ಯರಾತ್ರಿ ದೇವಾಲಯದ ಧ್ವಜವನ್ನು ತೆಗೆದು ಬೈಕ್ ಮೇಲಿಟ್ಟು ಬೆಂಕಿ ಹಚ್ಚಿ ಕೋಮು-ಗಲಭೆಗೆ ಹುನ್ನಾರ ನಡೆಸಿದ ಮೂವರನ್ನು ಚಾಮರಾಜನಗರದ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪಟ್ಟಣಕ್ಕೆ ಸೇರಿದ ಗಾಳಿಪುರ ಬಡಾವಣೆಯ ನಾಯಕರ ಬೀದಿಯಲ್ಲಿರುವ ಗಣೇಶ ದೇವಾಲಯದ ಮೇಲೆ ಹಾರಾಡುತ್ತಿದ್ದ ಕೇಸರಿ ಧ್ವಜವನ್ನು ತೆಗೆದು ಬೈಕ್ ಮೇಲಿಟ್ಟು ಸುಟ್ಟು ಹಿಂದೂ-ಮುಸ್ಲಿಮರ ನಡುವೆ ಗಲಭೆ ನಡೆಸಲು ಸಂಚು ರೂಪಿಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.” ಎಂದು ವರದಿಗಳು ತಿಳಿಸಿವೆ.
ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಳಿಪುರ ಬಡಾವಣೆಯ ಪ್ರಕಾಶ್, ಮಂಜು ಮತ್ತು ಬಂಗಾರ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಗಾಳಿಪುರ ಬಡಾವಣೆಯಲ್ಲಿ ಮುಸ್ಲಿಮರ ಕಾಟ ಅಧಿಕವಾಗಿದ್ದು, ಅದನ್ನು ನಿಯಂತ್ರಣ ಮಾಡುವ ಸಲುವಾಗಿ ಈ ರೀತಿ ನಡೆದುಕೊಂಡಿರುವುದಾಗಿ ಬಂಧಿತರು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.

ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಅವರ ಕುಟುಂಬದವರು ಮತ್ತು ಗ್ರಾಮಸ್ಥರು ಪೋಲಿಸರು ಅಮಾಯಕರ ಮೇಲೆ ಒತ್ತಡ ತಂದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಪ್ರತಿಭಟನೆ ನಡೆಸಿದ್ದಾರೆ ಎಂದು ಪ್ರಜಾವಾಣಿ ತನ್ನ ವರದಿಯಲ್ಲಿ ತಿಳಿಸಿದೆ.

ಆದ್ದರಿಂದ ಈ ಎರಡು ಪ್ರತ್ಯೇಕ ಪ್ರಕರಣಗಳು ನಿಜವಾಗಿದ್ದು, ಮುಸ್ಲಿಮರ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಕೆಲವು ಸಂಘಪರಿವಾರದ(ಬಿಜೆಪಿಯ) ಕಾರ್ಯಕರ್ತರು ಪ್ರಯತ್ನಿಸಿ ಕೊನೆಗೆ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾರೆ. ಚಾಮರಾಜನಗರದಲ್ಲಿ ಭಾಗವಾಧ್ವಜ ಸುಟ್ಟ ಪ್ರಕರಣ 2017ರಲ್ಲಿ ನಡೆದ ಘಟನೆಯಾಗಿದ್ದು, ಇತ್ತೀಚಿನದ್ದಲ್ಲ.
ಇದನ್ನು ಓದಿ: ಪ್ರಯಾಗ್ರಾಜ್ನ ಮಹಾ ಕುಂಭಮೇಳಕ್ಕಾಗಿ ಡ್ರೋನ್ ಶೋ ತಯಾರಿ ಎಂದು ಅಮೆರಿಕದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

