
ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರವಾದರು ಎಂಬುದು ಸುಳ್ಳು
ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂಬ ಹೆಸರಿನಲ್ಲಿ ವಿಡಿಯೋವೊಂದು ಕಳೆದ 15 ದಿನಗಳಿಂದ ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾವಿರಾರು ಜನರು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುವುದು ಕಾಣುತ್ತದೆ. ವಿಡಿಯೋದಲ್ಲಿ ಇಂಗ್ಲೆಂಡ್ ದೇಶದ ಭಾವುಟ ಮತ್ತು ರಥವೊಂದು ಇರುವುದು ಕಂಡುಬರುತ್ತದೆ. ಅದರ ಆಧಾರದಲ್ಲಿ ಹುಡುಕಿದಾಗ 2022ರ ಸೆಪ್ಟಂಬರ್ನಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಅಪ್ಲೋಡ್ ಆಗಿವೆ. ಕೊಂಕಣಿ ಟಿವಿ…