ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂಬ ಹೆಸರಿನಲ್ಲಿ ವಿಡಿಯೋವೊಂದು ಕಳೆದ 15 ದಿನಗಳಿಂದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾವಿರಾರು ಜನರು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುವುದು ಕಾಣುತ್ತದೆ.
ವಿಡಿಯೋದಲ್ಲಿ ಇಂಗ್ಲೆಂಡ್ ದೇಶದ ಭಾವುಟ ಮತ್ತು ರಥವೊಂದು ಇರುವುದು ಕಂಡುಬರುತ್ತದೆ. ಅದರ ಆಧಾರದಲ್ಲಿ ಹುಡುಕಿದಾಗ 2022ರ ಸೆಪ್ಟಂಬರ್‌ನಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಅಪ್‌ಲೋಡ್ ಆಗಿವೆ. ಕೊಂಕಣಿ ಟಿವಿ ಎಂಬ ಯೂಟ್ಯೂಬ್ ಚಾನೆಲ್‌ನ ವಿಡಿಯೋ ವಿವರಣೆಯಲ್ಲಿ ‘ಲಂಡನ್ ರಥಯಾತ್ರೆ 2022’ ಎಂದು ಬರೆಯಲಾಗಿದೆ.
ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾದ ಯಾವುದೇ ವರದಿಗಳಿಲ್ಲ. ಹಾಗಾಗಿ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರವಾದರು ಎಂಬುದು ಸುಳ್ಳು.
ವಿಧಾನಸೌಧದಲ್ಲಿ ಅರಿಶಿನ ಕುಂಕುಮ ಬಳಸಬಾರದೆಂಬ ನಿಯಮ ಹೊಸದಲ್ಲ: ಬಿಜೆಪಿ ಸರ್ಕಾರವೂ ಹೊರಡಿಸಿತ್ತು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.