Fact Check : ಇಬ್ಬರು ಸೈನಿಕರನ್ನ ಬೆಂಕಿ ಹಚ್ಚಿ ಕೊಂದಿರುವ ವಿಡಿಯೋಗೂ ಹಮಾಸ್‌-ಇಸ್ರೇಲ್‌ ಯುದ್ಧಕ್ಕೂ ಸಂಬಂಧವಿಲ್ಲ

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ ಸದ್ಯದ ಮಟ್ಟಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಇದರ ನಡುವೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಈ ಯುದ್ಧದ ಕುರಿತು ವ್ಯಾಪಕವಾಗಿ ಹಬ್ಬುತ್ತಿವೆ.

ಅದೇ ರೀತಿಯಾಗಿ “ಹಮಾಸ್ ಜಿಹಾದಿ ಭಯೋತ್ಪಾದಕರು ಇಸ್ರೇಲಿ ಸೈನಿಕರು ಮತ್ತು ಅಲ್ಲಿನ ಸಾರ್ವಜನಿಕರೊಂದಿಗೆ ಯಾವ ರೀತಿಯ ಅಮಾನವೀಯತೆಯನ್ನು ದಾಟುತ್ತಿದ್ದಾರೆ? ಜಗತ್ತಿನಾದ್ಯಂತ ಮುಸ್ಲಿಮರು ಈ ಜಿಹಾದಿಗಳೊಂದಿಗೆ ನಿಂತಿದ್ದಾರೆ.”

“ಒಬ್ಬನೇ ಒಬ್ಬ ಮುಸಲ್ಮಾನನೂ ಹಮಾಸ್‌ನ ಕ್ರಮಗಳನ್ನು ತಪ್ಪು ಎಂದು ಖಂಡಿಸಲಿಲ್ಲ” ಎಂದು ಇಬ್ಬರು ಇಸ್ರೇಲಿ ಸೈನಿಕರಿಗೆ ಹಮಾಸ್‌ ಬಂಡುಕೋರರು ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಅರ್ಥದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

Fact Check : ಈ ವಿಡಿಯೋ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ, ಈ ಘಟನೆಯ ಬಗ್ಗೆ 23 ಡಿಸೆಂಬರ್‌ 2016ರಲ್ಲಿ ಇಂಡಿಯಾ ಟಿವಿ ಸೇರಿದಂತೆ ಜಗತ್ತಿನ ಹಲವು ಮಾಧ್ಯಮಗಳು ವರದಿ ಮಾಡಿದ್ದವು, ಈ ವಿಡಿಯೋ ಉತ್ತರ ಸಿರಿಯಾದ ಅಲ್-ಬಾಬ್ ಪಟ್ಟಣದಲ್ಲಿ ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಿರುವಾಗ ಸೆರೆಹಿಡಿಯಲ್ಪಟ್ಟ ಇಬ್ಬರು ಸೈನಿಕರನ್ನು ಐಸಿಸ್‌ ಉಗ್ರರು ಜೀವಂತವಾಗಿ ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದೆ.

ಹಾಗಾಗಿ ಈ ವಿಡಿಯೋಗೂ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೂ ಯಾವುದೇ ರೀತಿಯಾದ ಸಂಬಂಧ ಇಲ್ಲ.


ಇದನ್ನೂ ಓದಿ : ವಿಧಾನಸೌಧದಲ್ಲಿ ಅರಿಶಿನ ಕುಂಕುಮ ಬಳಸಬಾರದೆಂಬ ನಿಯಮ ಹೊಸದಲ್ಲ: ಬಿಜೆಪಿ ಸರ್ಕಾರವೂ ಹೊರಡಿಸಿತ್ತು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *