Fact Check: ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ ಎಂಬುದು ಸುಳ್ಳು

ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ. ರೋನಾಲ್ಡೋ ಸ್ಟಾನ್ಡ್ ವಿತ್ ಪ್ಯಾಲಸ್ಟೈನ್ ಎಂಬ ಹೇಳಿಕೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.


ಫ್ಯಾಕ್ಟ್‌ಚೆಕ್: ಇದು 2016ರ ಸಿರಿಯಾದ ಹಳೆಯ ವಿಡಿಯೋ ಆಗಿದ್ದು, ಫುಟ್ಬಾಲ್ ಆಟಗಾರ ರೊನಾಲ್ಡೋ ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ಸಂದರ್ಭದಲ್ಲಿ “ಇದು ಸಿರಿಯಾ ಮಕ್ಕಳಿಗಾಗಿ. ನೀವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಾನು ತುಂಬಾ ಪ್ರಸಿದ್ಧ ಆಟಗಾರ, ಆದರೆ ನೀವು ನಿಜವಾದ ಹೀರೋಗಳು. ನಿಮ್ಮ ಭರವಸೆಯನ್ನು ಕಳೆದುಕೊಳ್ಳಬೇಡಿ. ಜಗತ್ತು ನಿಮ್ಮೊಂದಿಗಿದೆ, ನಾವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ. ನಾನು ನಿಮ್ಮೊಂದಿಗೆ ಇದ್ದೇನೆ.” ಎಂದು ಸಿರಿಯಾದ ಮಕ್ಕಳ ಪರವಾಗಿ ಸಂದೇಶ ರವಾನಿಸಿದ್ದರು. ಇತ್ತೀಚೆಗೆ ಅವರು ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಪರವಾಗಿ ಯಾವುದೇ ಟ್ವಿಟರ್(‍X)  ಸೇರಿದಂತೆ ಯಾವ ಸಾಮಾಜಿಕ ಜಾಲತಾಣದ ಖಾತೆಯಿಂದಲೂ  ಪ್ರತಿಕ್ರಿಯೆ ನೀಡಿಲ್ಲ.

ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ಹಿಂದಿನ ಕೆಲವು ವರ್ಷಗಳ ಹಿಂದೆಯಷ್ಟೆ ಸಿರಿಯಾ ದೇಶ ಆಂತರಿಕ ಯುದ್ಧಕ್ಕೆ ಸಾಕ್ಷಿಯಾಗಿತ್ತು. ಮತ್ತು ಲಕ್ಷಾಂತರ ಜನ ನಿರಾಶ್ರೀತರಾಗಿದ್ದರು. ಅದರ ಬೆನ್ನಲ್ಲೆ ಸಂಭವಿಸಿದ ಭೂಕಂಪನದಿಂದ ಸಿರಿಯಾದ ಜನತೆ ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದರು. ಆ ಸಂದರ್ಭದಲ್ಲಿ ರೊನಾಲ್ಡೋ ಈ ವಿಡಿಯೋ ಮಾಡಿ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದರು. ಆದ್ದರಿಂದ ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಮತ್ತು ಹೇಳಿಕೆ ಸುಳ್ಳು.


ಇದನ್ನು ಓದಿ: ದೇಶದಲ್ಲೇ ಮೊದಲು NIT, IIT, IIIT, IIM ಮತ್ತು AIIMS ಗಳನ್ನು ನಿರ್ಮಿಸಿದ್ದು ಬಿಜೆಪಿ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *