Fact Check: ಪ್ಲಾಸ್ಟಿಕ್‌ನಿಂದ ಗೋಧಿ ತಯಾರಿಸಲಾಗುತ್ತಿದೆ ಎಂಬುದು ಸುಳ್ಳು

ಪ್ಲಾಸ್ಟಿಕ್‌ನಿಂದ ಗೋಧಿ ಮಾಡುವ ಜಾಲವೊಂದು ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಕೊಳ್ಳುವ ಮೊದಲು ಎಚ್ಚರವಹಿಸಿರಿ. ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಈ ವೀಡಿಯೊ ಸ್ಮಾರ್ಟೆಸ್ಟ್ ವರ್ಕರ್ಸ್ ಎಂಬ ಯೂಟ್ಯೂಬ್‌ ಖಾತೆಯೊಂದರಲ್ಲಿ ಸೆಪ್ಟೆಂಬರ್ 24, 2023ರಲ್ಲಿ “ಪ್ಲಾಸ್ಟಿಕ್‌ನ ಹೊಸ ಉದ್ದೇಶ: ಮರುಬಳಕೆ ಪ್ರಮಾಣವನ್ನು ಅನಾವರಣಗೊಳಿಸುವುದು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. “ಆಟೋಮೊಬೈಲ್ ಉದ್ಯಮಗಳಿಗೆ ಮರುಬಳಕೆಯ ಪ್ಲಾಸ್ಟಿಕ್ ಕಣಗಳನ್ನು ಹೇಗೆ ತಯಾರಿಸಲಾಗುತ್ತದೆ” ಎಂಬ ವಿಡಿಯೋ ವಿವರಣೆ ಪ್ರಕಟಿಸಿದೆ. ವೀಡಿಯೊದಲ್ಲಿ ಬಳಸಲಾದ ಉಪಕರಣಗಳು ಪ್ಲಾಸ್ಟಿಕ್ ಗ್ರಾನ್ಯುಲೇಟರ್(granulator) ತಯಾರಿಸುವವು ಆಗಿವೆ. ಮರುಬಳಕೆ ಮಾಡಿದ ಪ್ಲಾಸ್ಟಿಕ್ ಉಂಡೆಗಳನ್ನು ಉತ್ಪಾದಿಸಲು ಕಾರ್ಖಾನೆಯು ಮರುಬಳಕೆ ಮಾಡಿದ ಪ್ಲಾಸ್ಟಿಕ್ ಅನ್ನು ಪ್ಲಾಸ್ಟಿಕ್ ಪೆಲೆಟ್ಜೈಜರ್(pelletizer)ಗೆ ಹಾಕುತ್ತದೆ. ಈ ಕಣಗಳು ಮತ್ತೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲು ಅರೆ-ಸಿದ್ಧಪಡಿಸಿದ ಕಚ್ಚಾ ವಸ್ತುಗಳಾಗುತ್ತದೆ.

ಕೈಗಾರಿಕೆಗಳಲ್ಲಿ ಪ್ಲಾಸ್ಟಿಕ್ ಮರುಬಳಕೆ ಪ್ರಕ್ರಿಯೆಯನ್ನು ಮತ್ತು ಅವುಗಳಿಗೆ ಬಳಸುವ ಯಂತ್ರೋಪಕರಣಗಳನ್ನು ತೋರಿಸುವ ಅನೇಕ ರೀತಿಯ ವಿಡಿಯೋಗಳು ಯೂಟೂಬ್‌ನಲ್ಲಿ ಲಭ್ಯವಿವೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದ್ದರಿಂದ ಪ್ಲಾಸ್ಟಿಕ್‌ನಿಂದ ಗೋಧಿ ತಯಾರಿಸಲಾಗುತ್ತಿದೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ಇಬ್ಬರು ಸೈನಿಕರನ್ನ ಬೆಂಕಿ ಹಚ್ಚಿ ಕೊಂದಿರುವ ವಿಡಿಯೋಗೂ ಹಮಾಸ್‌-ಇಸ್ರೇಲ್‌ ಯುದ್ಧಕ್ಕೂ ಸಂಬಂಧವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *