ದೇಶದಲ್ಲೇ ಮೊದಲು NIT, IIT, IIIT, IIM ಮತ್ತು AIIMS ಗಳನ್ನು ನಿರ್ಮಿಸಿದ್ದು ಬಿಜೆಪಿ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ

ದೇಶದ ಪ್ರತೀಷ್ಟಿತ ಶಿಕ್ಷಣ ಸಂಸ್ಥೆಗಳಾದ NIT, IIT, IIIT, IIM ಮತ್ತು AIIMS ಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದು ಕೇಂದ್ರ ಗೃಹಸಚಿವರಾದ ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂಬ ಭಾಷಣದ ತುಣುಕೊಂದು ವೈರಲ್ ಆಗುತ್ತಿದೆ. ಇದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

“ಅಮಿತ್ ಶಾ ಜೀ, ನೀವು 1964 ರಲ್ಲಿ ಜನಿಸಿದ್ದೀರಿ, ಆದರೆ ನೀವು ಸುಳ್ಳಿನ ಪ್ರತಿರೂಪವಾಗಿದ್ದೀರಿ, ಇದು ನೀವು ಯೋಚಿಸುವುದಕ್ಕಿಂತ ಸ್ವಲ್ಪ ಹೆಚ್ಚಾಗಿದೆ! ಇದು ಪಂಡಿತ್ ನೆಹರೂ ಅವರ ದೂರದೃಷ್ಟಿಯಾಗಿತ್ತು – ಈ ದೇಶದ ಮೊದಲ ಐಐಟಿಗಳು, ಐಐಎಂಗಳು, ಏಮ್ಸ್, ಎನ್ಐಟಿಗಳನ್ನು ನೀವು ಜನಿಸುವ ಮೊದಲೇ ನಿರ್ಮಿಸಲಾಗಿದೆ.  1951 ಮೊದಲ ಐಐಟಿ ಖರಗ್ಪುರ,  1956 ಮೊದಲ ಏಮ್ಸ್ ದೆಹಲಿ, 1959 ಮೊದಲ ಎನ್ಐಟಿ ವಾರಂಗಲ್, 1961 ಮೊದಲ ಐಐಎಂ ಕೋಲ್ಕತಾ… ನೆಹರೂ ನಿಮ್ಮಂತೆ ಕ್ಷುಲ್ಲಕ ರಾಜಕೀಯ ಮಾಡಲಿಲ್ಲ, ಅವರು ರಾಷ್ಟ್ರವನ್ನು ನಿರ್ಮಿಸುತ್ತಿದ್ದರು. ನೀವು ಸಹ ಪ್ರಯತ್ನಿಸಿ – ಸುಳ್ಳುಗಳನ್ನು ಹರಡುವ ವಾಟ್ಸಾಪ್ ವಿಶ್ವವಿದ್ಯಾಲಯದ ಜೊತೆಗೆ.” ಎಂಬ ಹೇಳಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಇದು ಗೃಹ ಮಂತ್ರಿಗಳಾದ ಅಮಿತ್ ಶಾರವರು ಅಕ್ಟೋಬರ್ 16, 2023 ರಲ್ಲಿ ಚತ್ತಿಸ್‌ಘಡದ ರಾಜನಂದಗಾಂವ್‌ನಲ್ಲಿ ನಡೆದ ಪರಿವರ್ತನ ಸಂಕಲ್ಪ ಮಹಾಸಭಾ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ಇದಾಗಿದ್ದು. ಭಾಷಣದಲ್ಲಿ ದೇಶದ ಪ್ರತೀಷ್ಟಿತ ಶಿಕ್ಷಣ ಸಂಸ್ಥೆಗಳಾದ NIT, IIT, IIIT, IIM ಮತ್ತು AIIMS ಗಳನ್ನು ಶಾ ಅವರು ಛತ್ತೀಸ್ಗಢದಲ್ಲಿ ಈ ಸಂಸ್ಥೆಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಇಡೀ ದೇಶದ ಬಗ್ಗೆ ಅಲ್ಲ. ಗೃಹ ಸಚಿವ ಅಮಿತ್ ಶಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಕ್ಲಿಪ್‌ನ ದೀರ್ಘ ಆವೃತ್ತಿಯನ್ನು ಇಲ್ಲಿ ನೋಡಬಹುದು.

ವೀಡಿಯೊದ ವೈರಲ್ ಬಿಟ್ ಮೇಲಿನ ವೀಡಿಯೊದಲ್ಲಿ 11:04 ನಿಮಿಷದದಿಂದ ಪ್ರಾರಂಭವಾಗುತ್ತದೆ. ಇದಕ್ಕೂ ಮೊದಲು, 9:18 ನಿಮಿಷಗಳ ಗಡಿಯಲ್ಲಿ, ಗೃಹ ಸಚಿವರು ಛತ್ತೀಸ್ಗಢಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಜನಸಮೂಹದಲ್ಲಿ ನೆರೆದಿದ್ದ ಮತದಾರರಿಗೆ ಮನವಿ ಮಾಡುವುದನ್ನು ಕೇಳಬಹುದು. ವೀಡಿಯೊದ 9:46 ನಿಮಿಷದಿಂದ, ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿಯ 15 ವರ್ಷಗಳ ಅಧಿಕಾರಾವಧಿಯಲ್ಲಿ ನಡೆದ ಬೆಳವಣಿಗೆಗಳನ್ನು ಪಟ್ಟಿ ಮಾಡುತ್ತಾರೆ. (ಬಿಜೆಪಿ ನಾಯಕ ರಮಣ್ ಸಿಂಗ್ 2003ರಿಂದ 2018ರವರೆಗೆ ಛತ್ತೀಸ್ ಗಢದ ಮುಖ್ಯಮಂತ್ರಿಯಾಗಿದ್ದರು.)

ಹಲವರು ಅಮಿತ್ ಶಾರವರ ಹೇಳಿಕೆಯ ತುಣುಕನ್ನು ತಪ್ಪಾಗಿ ತಿರುಚಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇಡೀ ದೇಶದಲ್ಲಿಯೇ NIT, IIT, IIIT ಗಳಂತಹ ಪ್ರತಿಷ್ಟೀತ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂಬುದು ಸುಳ್ಳು.


ಇದನ್ನು: Fact Check: ಮಕ್ಕಳ ನಿರ್ಲಕ್ಷ್ಯಕ್ಕೆ ನೊಂದ ಕರ್ನಲ್‌ ಹಾಗೂ ಅವರ ಪತ್ನಿ ಆತ್ಮಹತ್ಯೆ ಎಂಬುದು ಕಾಲ್ಪನಿಕ ಕಥೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *