ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಪೋಸ್ಟ್‌ಗಳು ಇದೀಗ ಇಂತಹದ್ದೆ ಒಂದು ಪೋಸ್ಟ್ ವೈರಲ್ ಆಗಿದ್ದು ಆ ವೈರಲ್ ಪೋಸ್ಟ್‌ನ ಸತ್ಯ ಬಹಿರಂಗಗೊಂಡಿದೆ.. ಸಾಕಷ್ಟು ಮಂದಿ ತಮ್ಮ ಪೋಸ್ಟ್‌ಗಳಿಗೆ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್‌ಗಳು ಬರಬೇಕು ಎಂಬ ಕಾರಣಕ್ಕೆ, ಕೆಲವು ಸುಳ್ಳು ಸುದ್ದಿಗಳನ್ನ ಹರಿಬಿಡ್ತಾರೆ. ಇದೀಗ ಇದೇ ರೀತಿಯಾದ ಒಂದು ಪೋಸ್ಟ್ ಕಳೆದ 5 ವರ್ಷಗಳಿಂದ ಬೇರೆ ಬೇರೆ ಕತೆಗಳೊಂದಿಗೆ ಶೇರ್ ಆಗುತ್ತಿದೆ.
ಆ ಪೋಸ್ಟ್‌ನಲ್ಲಿ ಒಂದು “ಮಕ್ಕಳು ತಮ್ಮನ್ನ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ನಿವೃತ್ತ ಕರ್ನಲ್ ಹಾಗೂ ಅವರ ಪತ್ನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಲಾರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಪೋಸ್ಟ್‌ಗೆ ಬೇರೆ ಬೇರೆ ಕತೆಗಳೊಂದಿಗೆ ಹಂಚಿಕೊಂಡಿರುವ ಕುರಿತು ಕೂಡ ವರದಿ ಆಗಿದೆ.
Fact Check : ಇದೇ ಪೋಸ್ಟ್ ಹಲವು ಬೇರೆ ಬೇರೆ ಕಥೆಗಳೊಂದಿಗೆ 2018 ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೈರಲ್ ಚಿತ್ರದಲ್ಲಿ ಕಂಡುಬರುವ ಮೃತ ದಂಪತಿಗಳು ಮಧ್ಯಪ್ರದೇಶದ ಪುರಾಣಖೇಡಿಯ ಛೋಟೆಲಾಲ್ ಶರ್ಮಾ (90) ಮತ್ತು ಅವರ ಪತ್ನಿ ಗಂಗಾದೇವಿ (87) ಎಂದು ಆಜ್‌ತಕ್ ವರದಿ ಹೇಳಿದೆ. ಛೋಟೇಲಾಲ್ ಕರ್ನಲ್ ಆಗಿರಲಿಲ್ಲ. ಸೆಪ್ಟೆಂಬರ್ 03, 2018 ರಂದು ಮುಂಜಾನೆ 4 ಗಂಟೆಗೆ ಛೋಟೆಲಾಲ್ ನಿಧನರಾದಾಗ, ಆಘಾತವನ್ನು ಸಹಿಸಲಾರದೆ ಅವರ ಪತ್ನಿ ಅದೇ ಸಂಜೆ ನಿಧನರಾದರು. ಇಬ್ಬರನ್ನೂ ಒಂದೇ ಚಿತೆಯ ಮೇಲೆ ಸಂಸ್ಕಾರ ಮಾಡಲಾಯಿತು ಎಂದು ಹಲವು ವರದಿಗಳು ಹೇಳಿವೆ.
ಹಾಗಾಗಿ ಮಕ್ಕಳು ನೋಡಿಕೊಂಡಿಲ್ಲ ಎಂದು ನೀವೃತ್ತ ಕರ್ನಲ್ ಹಾಗೂ ಅವರ ಪತ್ನಿ ಗುಂಡು ಹೊಡೆದುಕೊಂಡು ಸಾವನ್ನಪಿದ್ದಾರೆ ಹಾಗೂ ಇತರೆ ಕತೆಗಳನ್ನ ಈ ಫೋಟೋಗೆ ತಳುಕು ಹಾಕವ ಸುಳ್ಳು ಸುದ್ದಿಗಳನ್ನ ನಂಬಬೇಡಿ
ವಿಡಿಯೋ ನೋಡಿ ; ಮಕ್ಕಳ ನಿರ್ಲಕ್ಷ್ಯಕ್ಕೆ ನೊಂದ ಕರ್ನಲ್ ಹಾಗೂ ಅವರ ಪತ್ನಿ ಆತ್ಮಹತ್ಯೆ ಎಂಬುದು ಕಾಲ್ಪನಿಕ ಕಥೆ
ಇದನ್ನು ಓದಿ: ಇಸ್ರೇಲ್‌ನಲ್ಲಿ ಬಂದೂಕುಧಾರಿ ವ್ಯಕ್ತಿ ಭಾರತೀಯ ಮಹಿಳೆಯರನ್ನು ಕೊಂದಿದ್ದಾನೆ ಎಂಬುದು ಸುಳ್ಳು ಸುದ್ದಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.