ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಈ ಯುದ್ಧದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಕೂಡ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಈ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುವುದನ್ನು ಪತ್ತೆ ಹಚ್ಚುವುದು ಸಾಕಷ್ಟು ಮಂದಿಗೆ ಸವಾಲಿನ ಕೆಲಸವಾಗಿದೆ.
ಇದರ ನಡುವೆ ಇಂತಹದ್ದೇ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಈ ಸುಳ್ಳು ಸುದ್ದಿಯನ್ನು ಭಾರತದ ಕೆಲ ಪಕ್ಷಗಳು ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳುತ್ತಿವೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್‌ನಲ್ಲಿ ಶನಿವಾರ ಹಮಾಸ್‌ನಿಂದ 17 ಭಾರತೀಯರನ್ನು ಅಪಹರಿಸಲಾಗಿದೆ. ಈ ಪೈಕಿ 10 ಮಂದಿಯನ್ನು ಕೊಲ್ಲಲಾಗಿದೆ. ಈ ಕುರಿತು ಮಾತನಾಡಲು ಇಂಡಿಯಾ ಮೈತ್ರಿಕೂಟದ ಯಾರೊಬ್ಬರಿಗೂ ಧೈರ್ಯವಿಲ್ಲ.” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ
Fact Check ; ಫೋಟೋದಲ್ಲಿ ಉಲ್ಲೇಖಿಸಲಾದ 17 ಹೆಸರುಗಳ ಪಟ್ಟಿಯು ನೇಪಾಳಿ ಪ್ರಜೆಗಳೆ ಹೊರತು ಭಾರತೀಯ ನಾಗರಿಕರಲ್ಲ ಎಂದು ಬೂಮ್ ಲೈವ್ ವರದಿ ಮಾಡಿದೆ. ದಾಳಿಯ ಸಮಯದಲ್ಲಿ ಕೊಲ್ಲಲ್ಪಟ್ಟ ನೇಪಾಳಿ ವಿದ್ಯಾರ್ಥಿಗಳ ಗುರುತನ್ನು ಇಸ್ರೇಲ್ ದೃಢಪಡಿಸಿದೆ ಎಂದು ಕಠ್ಮಂಡು ಪೋಸ್ಟ್ ಅಕ್ಟೋಬರ್ 17, 2023 ರಂದು ವರದಿ ಮಾಡಿದೆ.
ಹಾಗಾಗಿ ಈಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ 17 ಮಂದಿ ಭಾರತೀಯರು ಅಪಹರಿಸಲ್ಪಟ್ಟಿದ್ದಾರೆ ಹಾಗೂ ಅದರಲ್ಲಿ 10 ಮಂದಿ ಭಾರತೀಯರು ಕೊಲ್ಲಲ್ಪಟ್ಟಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ.
ಇದನ್ನು ಓದಿ: ಕಾಂಗ್ರೆಸ್ ಸರ್ಕಾರ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.