ಕಾಂಗ್ರೆಸ್ ಸರ್ಕಾರ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂಬುದು ಸುಳ್ಳು

ಮೈಸೂರಿನ ಸಾಂಸ್ಕೃತಿಕ ದಸರಾ ಹಬ್ಬಕ್ಕೆ ದೀಪಾಲಂಕಾರ ಮಾಡಿದ ಖಾನ್ ಗ್ರೆಸ್ ಸರ್ಕಾರ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಹೇಳಿಕೆಯ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌: ಇದು 2021ರ ಮೈಸೂರು ದಸರಾದ ಲೈಟಿಂಗ್ ಆಗಿದ್ದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಈ ರೀತಿಯ ಸ್ವಾಗತ ಕಮಾನನ್ನು ನಿರ್ಮಿಸಿತ್ತು. ಇದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿಸಿದ ಲೈಟಿಂಗ್ ಆಗಿದ್ದು, ಯೂಟೂಬ್ ನಲ್ಲಿ ಸಹ ಇದರ ವಿಡಿಯೋಗಳನ್ನು ನೋಡಬಹುದಾಗಿದೆ. ಅನೇಕ ಯೂಟೂಬರ್‌ಗಳು, ಸುದ್ದಿ ಮಾದ್ಯಮಗಳು  ‘ಮೈಸೂರು ದಸರ ಲೈಟಿಂಗ್ಸ್ 2021’ ಎಂಬ ಶಿರ್ಷಿಕೆಯಡಿಯಲ್ಲಿ ಮಾಡಿದ ವಿಡಿಯೋಗಳು ಯೂಟೂಬ್‌ನಲ್ಲಿ ಇದ್ದು, ಅದರಲ್ಲಿ ಹರಿಬಿಡಲಾಗಿರುವ ಗುಂಬಾಜ್ ಮಾದರಿಯ ಕಮಾನನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆದ್ದರಿಂದ ಕಾಂಗ್ರೆಸ್ ಸರ್ಕಾರ ಮೈಸೂರಿನ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂದು ಹಲವರು ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯದ ಕುರಿತಿರುವ ದ್ವೇಷದ ಕಾರಣಕ್ಕಾಗಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ.


ಇದನ್ನು ಓದಿ: ಇಸ್ರೇಲ್‌ನಲ್ಲಿ ಬಂದೂಕುಧಾರಿ ವ್ಯಕ್ತಿ ಭಾರತೀಯ ಮಹಿಳೆಯರನ್ನು ಕೊಂದಿದ್ದಾನೆ ಎಂಬುದು ಸುಳ್ಳು ಸುದ್ದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *