Fact Check : ಇಸ್ರೇಲಿ ನಾಗರಿಕರಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಹಮಾಸ್ ಒತ್ತಾಯಿಸುತ್ತಿದೆ ಎಂಬುದು ಸುಳ್ಳು

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ  ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಇದೇ ಸಂದರ್ಭದಲ್ಲಿ ಈ ಯುದ್ಧದ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನ ಹರಡಲಾಗುತ್ತಿದೆ. ಈ ಸುದಿಗಳು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಇಂತಹದ್ದೇ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅದ್ರಲ್ಲೂ ಪ್ರಮುಖವಾಗಿ ಫೋಟೋ ಮತ್ತು ವಿಡಿಯೋಗಳಿಗೆ ಬೇರೆ ಬೇರೆ ತಲೆಬರಹಗಳನ್ನು ಹಾಕಿ ಸುಳ್ಳು ಸುದ್ದಿಯನ್ನು ಹರಿ ಬಿಡಲಾಗಿದೆ. ಇದೇ ರೀತಿಯಾಗಿ “ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಒತ್ತೆಯಾಳುಗಳನ್ನು ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಲು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಜನರ ಗುಂಪೊಂದು ರಸ್ತೆಯಲ್ಲಿ ಮೊಣಕಾಲುಗಳ ಮೇಲೆ ಮಲಗಿ ಇಸ್ರೇಲಿ ಧ್ವಜದೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ” ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.

Fact Check ; ಇನ್ನು ಈ ವಿಡಿಯೋ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಇದು 2020ರ ಪೋಸ್ಟ್‌ ಎಂದು ತಿಳಿದುಬಂದಿದೆ.  2020ರಲ್ಲಿ COVID-19 ನಿಂದ ರಕ್ಷಿಸಲು ಬೀದಿಗಳಲ್ಲಿ ಜನರು ಪ್ರಾರ್ಥೀಸುವ ವೀಡಿಯೊ ಇದಾಗಿದ್ದು, ಇದೇ ವಿಡಿಯೋವನ್ನು ಬಳಸಿಕೊಂಡಿರುವ ಕೆಲ ಕಿಡಿಗೇಡಿಗಳು, ಇದನ್ನು ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೆ ತಳಕು ಹಾಕಿದ್ದಾರೆ.

ಒಟ್ಟಾರೆಯಾಗಿ ಈ ವಿಡಿಯೋ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ಸುಳ್ಳು ವಿಡಿಯೋ ನಿಮ್ಮ ಗಮನಕ್ಕೆ ಬಂದಲ್ಲಿ ಇದನ್ನು ಶೇರ್‌ ಮಾಡಬೇಡಿ ಹಾಗೂ ಇಂತಹ ಸುದ್ದಿಗಳ ಬಗ್ಗೆ ಎಚ್ಚರದಿಂದಿರಿ.


ಇದನ್ನೂ ಓದಿ ; ದೇಶದಲ್ಲೇ ಮೊದಲು NIT, IIT, IIIT, IIM ಮತ್ತು AIIMS ಗಳನ್ನು ನಿರ್ಮಿಸಿದ್ದು ಬಿಜೆಪಿ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *