Fact Check | “ಹಿಂದೂವಿನಂತೆ ನಟಿಸಿ ಹಿಂದೂ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ವ್ಯಕ್ತಿ ಪೊಲೀಸ್ ವಶಕ್ಕೆ” ಎಂಬ ವಿಡಿಯೋ ಕಿರುಚಿತ್ರದ್ದು
ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಅದರಲ್ಲಿ ನೀಲಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಮನೆಯಿಂದ ಓಡಿಹೋಗಲು ಯತ್ನಿಸುತ್ತಾನೆ. ಆದರೆ, ಪೊಲೀಸರು ಆತನ ಕಾಲರ್ ಹಿಡಿದು ಸೋಫಾದ ಮೇಲೆ ಕೂರಿಸುತ್ತಾರೆ. ವೀಡಿಯೊದಲ್ಲಿ ಪೊಲೀಸರ ಜೊತೆಗೆ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಮತ್ತು ನೀಲಿ ಕುರ್ತಾ ಧರಿಸಿದ ಮಹಿಳೆಯೂ ಕಾಣಿಸುತ್ತಾರೆ. ಹಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿದ್ದಾರೆ….
