ಉತ್ತರಪ್ರದೇಶದ ಇಟಾಹ್ ಪೊಲೀಸರನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಪೊಲೀಸರು ಡಾ. ಬಿ.ಆರ್ ಅಂಬೇಡ್ಕರ್ರವರ ಚಿತ್ರವಿರುವ ಬೋರ್ಡ್ವೊಂದನ್ನು ಒರೆಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, “ದೊದಲ್ಪುರ ಗ್ರಾಮದ ಫಲಕದ ಮೇಲಿದ್ದ ಅಂಬೇಡ್ಕರ್ರವರ ಸಂದೇಶವನ್ನು ಅಳಿಸಿ ಅವಮಾನ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದನ್ನು ಕಾಣಬಹುದು.
ಫೇಸ್ಬುಕ್ನಲ್ಲಿ ರಶ್ಮಿಕಾ ಎಂಬವರು ಈ ಚಿತ್ರವನ್ನು ಜನವರಿ 12 ರಂದು ಪೋಸ್ಟ್ ಮಾಡಿದ್ದಾರೆ ( ಆರ್ಕೈವ್ ಲಿಂಕ್ ) ಮತ್ತು “ಇಟಾಹ್, ದೊದಲ್ಪುರ ಗ್ರಾಮದ ಫಲಕದಲ್ಲಿದ್ದ “ನಿಮ್ಮ ಕಾಲಿಗೆ ಬೂಟುಗಳಿಲ್ಲದಿರಬಹುದು, ಆದರೆ ನಿಮ್ಮ ಕೈಯಲ್ಲಿ ಪುಸ್ತಕ ಇರಬೇಕು” ಎಂಬ ಡಾ.ಬಿ.ಆರ್ ಅಂಬೇಡ್ಕರ್ರವರ ಸಂದೇಶವನ್ನು ಪೊಲೀಸ್ ಸಿಬ್ಬಂದಿ ಅಳಿಸಿ ಹಾಕಿದ್ದಾರೆ” ಎಂದು ಹಂಚಿಕೊಂಡಿದ್ದಾರೆ.
‘@AASHU_NSUI’ ಎಂಬ ಎಕ್ಸ್ ಬಳಕೆದಾರರು “ಇಟಾಹ್ನ ದೊದಲ್ಪುರ ಗ್ರಾಮದಲ್ಲಿ ಬೋರ್ಡ್ನಲ್ಲಿ, ‘ನಿಮ್ಮ ಕಾಲಿಗೆ ಬೂಟುಗಳಿಲ್ಲದಿರಬಹುದು, ಆದರೆ ನಿಮ್ಮ ಕೈಯಲ್ಲಿ ಪುಸ್ತಕ ಇರಬೇಕು’ ಎಂದು ಬರೆದಿದ್ದಾರೆ. ಈ ಬರಹವನ್ನು ಅಳಿಸಲಾಗುತ್ತಿದೆ. ಬಾಬಾ ಸಾಹೇಬರ ವಿಚಾರಗಳಿಗೆ ಇಷ್ಟೊಂದು ದ್ವೇಷ ಯಾಕೆ?” ಎಂದು ಪ್ರಶ್ನಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
👉🏾 दोदलपुर गांव में लगे बोर्ड में लिखा था "तुम्हारे पैरों में जूते भले ही न हों लेकिन हाथों में किताब जरूर होनी चाहिए" इस लेख को मिटाते पुलिस कर्मी।
बाबा साहब के विचारों से इतनी घृणा ? pic.twitter.com/vn7ZBsGZQk— Aashutosh Chouksey (Aashu) (@AASHU_NSUI) January 12, 2025
ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು ನಿಜವೇ ಎಂಬುದನ್ನು ಇಲ್ಲಿ ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಮೊದಲು Etah ಪೋಲಿಸ್ ಠಾಣೆಯ X ಹ್ಯಾಂಡಲ್ ಅನ್ನು ಸ್ಕ್ಯಾನ್ ಮಾಡಿದ್ದು, ಅದರ ಪ್ರತ್ಯುತ್ತರ ವಿಭಾಗದಲ್ಲಿ ನಾವು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಕೆಲವು ಎಕ್ಸ್-ಬಳಕೆದಾರರು ಈ ಹೇಳಿಕೆಯೊಂದಿಗೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಇಟಾಹ್ ಪೊಲೀಸರು ಡಿಸೆಂಬರ್ 21ರಂದು ಹೇಳಿಕೆ ಬಿಡುಗಡೆ ಮಾಡಿದ್ದರು. “ಕೆಲವು ಕಿಡಿಗೇಡಿಗಳು ಬೋರ್ಡ್ಗೆ ಬಣ್ಣ ಬಳಿದಿದ್ದರು, ನಂತರ ಪೊಲೀಸರು ಗ್ರಾಮದ ಗಣ್ಯರೊಂದಿಗೆ ಮಾತನಾಡಿ ಬೋರ್ಡ್ ಸ್ವಚ್ಛಗೊಳಿಸಿದ್ದಾರೆ. ಇಂತಹ ದಾರಿ ತಪ್ಪಿಸುವ ಪೋಸ್ಟ್ ಗಳನ್ನು ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
दि०21.12.24 को अज्ञात लोगों द्वारा बोर्ड पर रंग लगा दिया गया था, तत् समय स्थानीय पुलिस द्वारा गांव के संभ्रांत व्यक्तियों से बातचीत कर उनकी मौजूदगी में रंग को हटा कर बोर्ड को साफ किया गया था। जिम्मेदार बने, कृपया अपुष्ट,तथ्यहीन व भ्रामक पोस्ट न करे। pic.twitter.com/P6HJX8HOSE
— Etah Police (@Etahpolice) January 12, 2025
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿಕೊಂಡು ಎಕ್ಸ್ನಲ್ಲಿ ಸರ್ಚ್ ಮಾಡಿದಾಗ, @nirbhay6036 ಎಂಬ ಎಕ್ಸ್ ಬಳಕೆದಾರರ ಪೋಸ್ಟ್ ಲಭಿಸಿದ್ದು, “ದೊದಲ್ಪುರ ಗ್ರಾಮದಲ್ಲಿ ಅಳವಡಿಸಿದ್ದ ಅಂಬೇಡ್ಕರ್ ಅವರ ಸಂದೇಶವಿದ್ದ ಬೋರ್ಡ್ ಮೇಲೆ ಕೆಲವರು ಕಪ್ಪು ಮಸಿ ಅಥವಾ ಕಪ್ಪಾದ ಎಣ್ಣೆ ಸುರಿದಿದ್ದರು. ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದರು ತದನಂತರ ಪೊಲೀಸರು ಫಲಕವನ್ನು ಸ್ವಚ್ಛಗೊಳಿಸಿದರು. ಜೈ ಭೀಮ್ ಜೈ ಸಂವಿಧಾನ ” ಎಂದು ಬರೆದುಕೊಂಡಿದ್ದಾರೆ.
जनपद एटा के दोदलपुर गांव में लगे बोर्ड में लिखा था
तुम्हारे पैरो में जूते भले न हो , हाथो में किताब जरूर हो
जिसे कुछ सामंतवादी उपद्रवियों ने जला काला तेल पोत दिया था !
ग्रामीणों ने पुलिस को सूचित किया , मौके पर पुलिस पहुँच कर बोर्ड की सफ़ाई की !
!! जय भीम , जय संविधान !! pic.twitter.com/svo2ztgAJ0
— NIRBHAY SINGH YADAV (@nirbhay6036) January 12, 2025
ಪೊಲೀಸರು ಬೋರ್ಡ್ ಅನ್ನು ಸ್ವಚ್ಛಗೊಳಿಸಿದ ನಂತರದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಆಧಾರದ ಮೇಲೆ ನಾವು ಹುಡುಕಾಟ ನಡೆಸಿದಾಗ, ಡಿಸೆಂಬರ್ 21 ರಂದು ANB NEWS ನ X ಹ್ಯಾಂಡಲ್ನ ಪೋಸ್ಟ್ ಲಭ್ಯವಾಗಿದೆ. ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಡಾ.ಅಂಬೇಡ್ಕರ್ ಅವರ ಚಿತ್ರವಿರುವ ಬೋರ್ಡಿನ ಮೇಲೆ ಬರೆದಿರುವ ಹೇಳಿಕೆ ಬಣ್ಣದಿಂದ ಕೂಡಿರುವುದನ್ನು ಕಾಣಬಹುದು. ಸಕಿಟ್ ಪೊಲೀಸ್ ಠಾಣೆ ವ್ಯಾಪ್ತಿಯ ದೊದಲ್ಪುರ ಗ್ರಾಮದಲ್ಲಿ ಕಿಡಿಗೇಡಿಗಳು ಬೋರ್ಡ್ಗೆ ಬಣ್ಣ ಬಳಿದಿದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶಗೊಂಡಿದ್ದರು.
एटा में अंबेडकर के तस्वीर लगे बोर्ड पर अराजक तत्वों ने पोता कलर,
सूचना पर एकत्रित हुए ग्रामीणों में भारी आक्रोश,मौके पर पहुंची पुलिस ग्रामीणों समझाने में जुटी।
ग्रामीणों के अनुसार पूर्व में भी बोर्ड पर कालिख पोतने की हो चुकी हैं कई घटनाएं।
ग्रामीण DM एटा को मौके पर बुलाने और… pic.twitter.com/I7e4RwK2ef
— ANB NEWS (@AnbNewstv) December 21, 2024
“ಇಟಾದಲ್ಲಿ, ದುಷ್ಕರ್ಮಿಗಳು ಅಂಬೇಡ್ಕರ್ ಚಿತ್ರವಿರುವ ಫಲಕವನ್ನು ವಿರೂಪಗೊಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನೆರೆದಿದ್ದ ಗ್ರಾಮಸ್ಥರು ಭಾರೀ ಆಕ್ರೋಶ ಹೊರಹಾಕಿದ್ದರು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಗ್ರಾಮಸ್ಥರ ಪ್ರಕಾರ, ಈ ಹಿಂದೆಯೂ ಈ ಬೋರ್ಡ್ನ್ನು ಹಲವು ಬಾರಿ ದುಷ್ಕರ್ಮಿಗಳು ವಿರೂಪಗೊಳಿಸಿರುವುದನ್ನು ಗಮನಿಸಿ, ಮುಂಬರುವ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಲಿಸರಲ್ಲಿ ಒತ್ತಾಯಿಸಿದ್ದಾರೆ. ಇಟಾಹ್ ಸಕೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ದೊದಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ” ಎಂದು ANB NEWS ಟ್ವೀಟ್ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಇಟಾಹ್ ಪೊಲೀಸರು ಸ್ವಚ್ಛಗೊಳಿಸಲಾದ ಬೋರ್ಡ್ನ ಚಿತ್ರವನ್ನು ಹಂಚಿಕೊಂಡಿದ್ದು, “ಈ ಸಂದರ್ಭದಲ್ಲಿ, ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಗ್ರಾಮದ ಜನರೊಂದಿಗೆ ಮಾತನಾಡಿದ ನಂತರ, ಬೋರ್ಡ್ನ್ನು ಸ್ವಚ್ಛಗೊಳಿಸಿದೆ ಮತ್ತು ಈ ಪ್ರಕರಣದಲ್ಲಿ ಪೊಲೀಸ್ ಠಾಣೆ ಮಟ್ಟದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ.
प्रकरण में स्थानीय पुलिस द्वारा तत्काल मौके पर पहुंचकर गांव के संभ्रांत लोगों से बातचीत कर बोर्ड पर लगे रंग को हटवा दिया गया है। प्रकरण में थानास्तर से वैधानिक कार्यवाही की जा रही है। मौके पर कानून एवं शांति व्यवस्था सामान्य है। pic.twitter.com/BIgcgS9NZd
— Etah Police (@Etahpolice) December 21, 2024
ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಡಿಸೆಂಬರ್ 22 ರಂದು ಪ್ರಕಟಿಸಲಾದ ದೈನಿಕ್ ಜಾಗರಣದ ಇಟಾಹ್ ಆವೃತ್ತಿಯಲ್ಲಿಯೂ ಕಾಣಬಹುದು.

ಈ ಬಗ್ಗೆ ಸಕೀಟ್ ಪ್ರದೇಶದ ಸಿಒ ಡಿಎಸ್ಪಿ ಕೃಷ್ಣ ಮುರಾರಿ ಅವರೊಂದಿಗೆ ಮಾತನಾಡಿದ್ದೇವೆ. “ರಾತ್ರಿ ವೇಳೆ ಗ್ರಾಮದಲ್ಲಿ ಅಳವಡಿಸಿರುವ ಬೋರ್ಡ್ಗಳಿಗೆ ಕೆಲವರು ಬಣ್ಣ ಬಳಿದಿದ್ದರು. ಪೊಲೀಸರು ಅದನ್ನು ಸ್ವಚ್ಛಗೊಳಿಸಿದ್ದಾರೆ. ಆದರೆ ಪೊಲೀಸರೇ ಬೋರ್ಡ್ನಲ್ಲಿ ಬರೆದಿರುವ ಹೇಳಿಕೆಯನ್ನು ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ ಎಂಬ ಹೇಳಿಕೆಯು ತಪ್ಪಾಗಿದೆ. ಇಂತಹ ಸುಳ್ಳು ಮಾಹಿತಿ ಹಾಕುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂದೇಶ ಫಲಕದ ಮೇಲೆ ಪೊಲೀಸರೇ ಬಣ್ಣ ಬಳಿದಿದ್ದಾರೆ ಎಂಬುದು ಸುಳ್ಳು. ಯಾರೋ ಕಿಡಿಗೇಡಿಗಳು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂದೇಶ ಫಲಕದ ಮೇಲೆ ಬಣ್ಣ ಬಳಿದಿದ್ದು, ಗ್ರಾಮಸ್ಥರ ದೂರಿನ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಬೋರ್ಡ್ ಸ್ವಚ್ಛಗೊಳಿಸಿದ್ದರು. ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

