ಡೋನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಈ ನಡುವೆ ಅಮೆರಿಕದ ನಿಲುವು ಏನು ಎಂಬುದು ಈಗ ಟ್ರಂಪ್ ಬಾಯಿಯಿಂದಲೇ ಬಹಿರಂಗವಾಗಿದೆ. ಹೌದು.. ಜನವರಿಯಲ್ಲಿ ಅಮೆರಿಕದ ಅಧ್ಯಕ್ಷ ಗಾದಿಗೆ ಡೊನಾಲ್ಡ್ ಟ್ರಂಪ್ ಅವರು ಅಧಿಕೃತವಾಗಿ ಏರಲಿದ್ದು, ಈ ನಡುವೆ ತಮ್ಮ ಅಭಿನಂದನಾ ಕಾರ್ಯಕ್ರಮವೊಂದರಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಜೈಲಿನಿಂದ ಬಿಡುಗಡೆ ಮಾಡಿಸುವುದಾಗಿ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲಿಗೆ ಅವರ ಮತ್ತು ಪಾಕಿಸ್ತಾನದ ನಡುವಿನ ಗಾಢವಾದ ಸಂಬಂಧ ಏನು ಎಂಬುದನ್ನು ಅವರೇ ಬಹಿರಂಗಪಡಿಸಿದ್ದಾರೆ ಹೀಗಾಗಿ ಅಮೆರಿಕವನ್ನು ನಂಬಲು ಸಾಧ್ಯವಿಲ್ಲ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತದೆ.
Hello my Pakistani American friends I promise if I win I'll try my best to get Imran Khan out of jail ASAP he's my friend I love him I'll support him to take over the government again…
Donald Trump message laud and clear and he has won 😁 pic.twitter.com/HqK7F3J7DG— Mesa Malik (@mesamalik) November 6, 2024
ಈ ವಿಡಿಯೋದಲ್ಲಿ ಕೂಡ ಅಮೆರಿಕದ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರು ಅವರ ಧ್ವನಿಯಲ್ಲೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು, ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಹೇಳಿರುವುದು ಸ್ಪಷ್ಟವಾಗಿ ಕೇಳಿ ಬಂದಿದೆ. ಹೀಗಾಗಿ ಸಾಕಷ್ಟು ಮಂದಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಶೇರ್ ಮಾಡಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Donald trump's speech for Imran Khan pic.twitter.com/x8Mjema53V
— SkinEra Life Sciences (@skinEra25) November 10, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 12 ಮಾರ್ಚ್ 2017ರ NBC ನ್ಯೂಸ್ ವಿಡಿಯೋ ವರದಿಯೊಂದು ಕಂಡು ಬಂದಿದೆ. ಇದು ವೈರಲ್ ವಿಡಿಯೋದಲ್ಲಿನ ಮೂಲ ವಿಡಿಯೋಗೆ ಸಂಬಂಧಿಸಿದ ಕ್ಲಿಪ್ ಕಂಡು ಬಂದಿದೆ.

ಈ ವರದಿಯಲ್ಲಿ NCB ನ್ಯೂಸ್ ಆಂಕರ್ ಲಿಸ್ಟರ್ ಹಾಲ್ಟ್ ಡೊನಾಲ್ಡ್ ಟ್ರಂಪ್ ಅವರನ್ನು ಸಂದರ್ಶಿಸಿದ್ದು, ಅದರಲ್ಲಿ ಟ್ರಂಪ್ ಆಡಳಿತದ ಪ್ರಕಾರ ಹಿಲರಿ ಕ್ಲಿಂಟನ್ ಅವರ ಇಮೇಲ್ಗಳ ತನಿಖೆಯನ್ನು ನಿಭಾಯಿಸಿದ ಮೇಲೆ, ಜೇಮ್ಸ್ ಕಾಮಿ ಅವರನ್ನು ವಜಗೊಳಿಸಲಾಗಿದೆ ಎಂದು ಟ್ರಂಪ ಹೇಳಿರುವುದು ಕಂಡುಬಂದಿದೆ. ಇನ್ನು ಈ ಸಂದರ್ಶನವನ್ನು ಸಂಪೂರ್ಣವಾಗಿ ಗಮನಿಸಿದಾಗ ಟ್ರಂಪ್ ಅವರು ವೈರಲ್ ವಿಡಿಯೋದಲ್ಲಿ ಧರಿಸಿರುವ ಉಡುಪು ಮತ್ತು ಈ ಸಂದರ್ಶನದ ಉಡುಪಿಗೂ ಹೋಲಿಕೆಯಾಗಿದ್ದು, ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಚುನಾವಣೆಯ ಸಂದರ್ಶನದ ವಿಡಿಯೋಗೆ ಬಹುತೇಕವಾಗಿ ಹೋಲಿಕೆಯಾಗಿದೆ. ಇನ್ನು ಕೆಲವೊಂದು ವಿಡಿಯೋಗಳಿಗೂ ಕೂಡ ಈ ವೈರಲ್ ವಿಡಿಯೋ ಹೋಲಿಕೆ ಆಗಿದೆ. ಹೀಗಾಗಿ ಹಲವು ವಿಡಿಯೋಗಳನ್ನು ಬಳಸಿಕೊಂಡು ಒಂದು ವಿಡಿಯೋವನ್ನು ಇಲ್ಲಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಟ್ರಂಪ್ ಅವರ ವಾಯ್ಸ್ ಅನ್ನು ಕೂಡ AI ಮೂಲಕ ಜನರೇಟ್ ಮಾಡಲಾಗಿರುವುದು ಕಂಡುಬಂದಿದೆ.

ಹೀಗೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅಮೆರಿಕದ ಅಧ್ಯಕ್ಷ ಗಾದಿಯನ್ನು ಏರಲಿರುವ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳಾಗಿದೆ. ಅವರ ಹಳೆಯ ವೈರಲ್ ವಿಡಿಯೋಗಳನ್ನು ಬಳಸಿಕೊಂಡು ಮತ್ತು AI ವಾಯ್ಸ್ ಉಪಯೋಗಿಸಿ ಡೀಪ್ ವಿಡಿಯೋವನ್ನು ರಚಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಮಣಿಪುರದಲ್ಲಿ ನಡೆದ ಬೃಹತ್ ರ್ಯಾಲಿಯ ದೃಶ್ಯ ಎಂದು AI ನಿಂದ ರಚಿಸಿದ ಫೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

