Fact Check : ‘ನಾನು ಹಿಂದೂಗಳ ದೊಡ್ಡ ಅಭಿಮಾನಿ’ ಎಂಬ ಡೊನಾಲ್ಡ್ ಟ್ರಂಪ್ ಅವರ ಹಳೆಯ ವೀಡಿಯೊವನ್ನು 2024 ಯುಎಸ್ ಚುನಾವಣೆಗೆ ಮುಂಚಿತವಾಗಿ ಹಂಚಿಕೊಳ್ಳಲಾಗುತ್ತಿದೆ.
“ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತ ದೇಶದ ದೊಡ್ಡ ಅಭಿಮಾನಿ” ಎಂದು ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು 2024ರ ಯುಎಸ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯಲ್ಲಿ ಹೇಳುತ್ತಿದ್ದಾರೆ. ಫ್ಯಾಕ್ಟ್ ಚೆಕ್ : ಈ ವೀಡೀಯೊದ ಕುರಿತು ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನ ಹುಡುಕಾಟವನ್ನು ನಡೆಸಿದೆವು. ಈ ವೀಡೀಯೋವನ್ನು ಅಕ್ಟೋಬರ್ 16, 2016 ರಂದು ಫೇಸ್‌ಬುಕ್‌ನಲ್ಲಿ ANI ಪೋಸ್ಟ್‌ರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಯುಎಸ್ 2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರವರು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ “ನಾನು ಹಿಂದೂಗಳ ಮತ್ತು ಭಾರತ…