ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 286 ದಿನಗಳ ಕಾಲ ಸುದೀರ್ಘ ಅವಧಿಯ ಕಾರ್ಯಾಚರಣೆಯ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲೋರ್ ಇಂದು ಮುಂಜಾನೆ ಭೂಮಿಗೆ ಮರಳಿದರು. ನಾಸಾದ ಸಮನ್ವಯದೊಂದಿಗೆ, ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಕ್ರೂ ಡ್ರಾಗನ್ ಕ್ಯಾಪ್ಸುಲ್ ಬುಧವಾರ ಬೆಳಗ್ಗೆ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಸುನೀತಾ ವಿಲಿಯಮ್ಸ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರ್ಕಾರದ ದಕ್ಷತಾ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
India's brave daughter Sunita Williams and Butch Wilmore returned to earth after 9 months and 17 hours of journey
Many congratulations and best wishes to both of them!
Thank you Donald Trump and Elon Musk for bringing the astronauts back! #sunitawilliamsreturn #NASA… pic.twitter.com/N2K3k4YENY— HSR (@H__S__R) March 19, 2025
ವೈರಲ್ ಫೋಟೋದಲ್ಲಿ ಕೂಡ ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುನೀತಾ ವಿಲಿಯಮ್ಸ್ ಅವರು ನಿಂತಿರುವುದು ಕಂಡು ಬಂದಿದೆ. ಈ ವೈರಲ್ ಫೋಟೋವನ್ನು ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆಯನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಮೊದಲು ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ ವೈರಲ್ ಫೋಟೋದಲ್ಲಿ ಗ್ರೋಕ್ AI ನ ವಾಟರ್ ಮಾರ್ಕ್ ಇರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ಫೋಟೋವನ್ನು AI ನಿಂದ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣಕ್ಕಾಗಿ ನಾವು ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಬಾಹ್ಯಾಕಾಶ ನೌಕೆ ಕ್ಯಾಪ್ಸುಲ್ ಹಿಂದಿರುಗಿದ ವೀಡಿಯೊ ಮತ್ತು ಸುನೀತಾ ವಿಲಿಯಮ್ಸ್ ಅವರು ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರೊಂದಿಗೆ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಈ ಪೋಸ್ಟ್ನ ಕಮೆಂಟ್ನಲ್ಲಿ ರಾಘವನ್ ರಾಜೇಂದ್ರನ್ ಎಂಬ ಎಕ್ಸ್ ಬಳಕೆದಾರು ಗ್ರೋಕ್ AI ಗೆ ವೈರಲ್ ಪೋಸ್ಟ್ ಅನ್ನು ಟ್ಯಾಗ್ ಮಾಡಿ ಇದು ನಿಜವೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರೋಕ್ AI ‘ಗೋಕ್’ ವಾಟರ್ಮಾರ್ಕ್ ಹೊಂದಿರುವ ಚಿತ್ರವು Al- ರಚಿತವಾಗಿರಬಹುದು ಮತ್ತು ನಿಜವಲ್ಲ ಎಂದು ಸ್ಪಷ್ಟಪಡಿಸಿದೆ
The image with the "Grok" watermark is likely AI-generated, not real, per analysis. The spacecraft capsule image aligns with Sunita Williams' return on March 18, 2025, and seems authentic.
— Grok (@grok) March 19, 2025

ಇನ್ನು ನಾವು Al ಪತ್ತೆ ಹಚ್ಚುವ ಸಾಧನ ಹೈವ್ ಮಾಡರೇಶನ್ ಬಳಸಿ ಚಿತ್ರವನ್ನು ವಿಶ್ಲೇಷಿಸಿದ್ದೇವೆ, ಇದು AI- ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಹೊಂದಿದೆ ಎಂದು ಶೇಕಡಾ 99 ರಷ್ಟು ಖಚಿತತೆಯೊಂದಿಗೆ ಫಲಿತಾಂಶವನ್ನು ಒದಗಿಸಿದೆ. ಆ ಮೂಲಕ ವೈರಲ್ ಆಗುತ್ತಿರುವ ಫೋಟೋವನ್ನು AI ನಿಂದ ನಿರ್ಮಿಸಲಾಗಿದೆ ಎಂಬುದನ್ನು ಎಲ್ಲಾ ವರದಿಗಳು ಸ್ಪಷ್ಟ ಪಡಿಸಿವೆ.

ಒಟ್ಟಾರೆಯಾಗಿ ಹೇಳವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ವೈರಲ್ ಫೋಟೋವನ್ನು ಸಂಪೂರ್ಣವಾಗಿ AI ನಿಂದ ನಿರ್ಮಿಸಲಾಗಿದೆ, ಹಾಗಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಭಾರತೀಯರು ಚೀನಾದಲ್ಲಿ ಹೋಳಿ ಆಚರಿಸಿದ್ದಾರೆ ಎಂದು ಚೀನೀ ಲ್ಯಾಂಟರ್ನ್ ಉತ್ಸವದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

