Fact Check | ಇರಾನ್‌ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂದು ಚೀನಾದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಸಾಮಾಜಿಕ ಜಾಲತಾಣಗಳಾದ ಎಕ್ಸ್, ವಾಟ್ಸ್‌ಆ್ಯಪ್ ಮತ್ತು ಇತರ ವೇದಿಕೆಗಳಲ್ಲಿ “ಇಸ್ರೇಲ್ ಇರಾನ್‌ನ ಪರಮಾಣು ಸ್ಥಾವರವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ” ಎಂಬ ಸುದ್ದಿಯೊಂದು ವೈರಲ್ ಆಗಿದೆ. ಈ ಸುದ್ದಿಯು ಇಸ್ರೇಲ್‌ನ ವಾಯುದಾಳಿಯಲ್ಲಿ ಇರಾನ್‌ನ ನತಾಂಜ್ ಅಥವಾ ಫೊರ್ಡೊ ಪರಮಾಣು ಸ್ಥಾವರಗಳು ನಾಶವಾಗಿವೆ ಎಂದು ದಾಖಲಿಸಿದೆ. ಕೆಲವು ಪೋಸ್ಟ್‌ಗಳು ಈ ದಾಳಿಯಿಂದ ಇರಾನ್‌ನ ಪರಮಾಣು ಯೋಜನೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಬರೆದುಕೊಳ್ಳಲಾಗುತ್ತಿದೆ ಕೆಲವರು ಇದನ್ನು ಇಸ್ರೇಲ್‌ನ ಶಕ್ತಿಯ ಪ್ರದರ್ಶನ ಎಂದು ಭಾವಿಸಿದರೆ, ಇನ್ನೂ ಕೆಲವರು ಇರಾನ್‌ನ ಸಾಮರ್ಥ್ಯವನ್ನು ಅನುಮಾನಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ….
