ಇತ್ತೀಚೆಗೆ ಬೈಕ್ ನಲ್ಲಿ ಬರುವ ಹುಡುಗ ಮತ್ತು ಹುಡುಗಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವಕನ ಜೊತೆಗೆ ಅಪ್ರಾಪ್ತ ಹಿಂದೂ ಬಾಲಕಿ ಓಡಿಹೋಗುತ್ತಿದ್ದ ಸಂದರ್ಭ ಹಿಂದೂ ಸಂಘಟನೆಯ ಯುವಕರು ಹಿಡಿದು ಆತನಿಗೆ ಬುದ್ಧಿ ಕಲಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
ಈ ವೀಡಿಯೋವನ್ನು “ಮುಸ್ಲಿಂ ಹುಡುಗ “ಹಿಂದೂ ಅಪ್ರಾಪ್ತ ಬಾಲಕಿ”ಯೊಂದಿಗೆ ಓಡಿಹೋಗುತ್ತಿದ್ದನು; ಮುಂದೆ ಏನಾಯಿತು, ಇದು ಈ ಸಮಯದ ಅಗತ್ಯ – ಜನರು ತಪ್ಪಾದ ಸಂದರ್ಭದಲ್ಲಿ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್:
ವೈರಲ್ ವೀಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ ಅರ್ಧ ಸತ್ಯವಾಗಿದ್ದು, ಉತ್ತರ ಪ್ರದೇಶದ ಹಾಪುರ್ ನಲ್ಲಿ ಅಕ್ರಮ್ ಎಂಬ ಮುಸ್ಲಿಂ ಯುವಕ ಹಿಂದೂ ಹುಡುಗಿಯೊಂದಿಗೆ ಹೋಟೆಲ್ನಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಹುಡುಗಿಯ ಸಹೋದರರು ಇಬ್ಬರನ್ನೂ ಹಿಡಿದರು ಅಮಾನವೀಯವಾಗಿ ಥಳಿಸಿರುವ ಘಟನೆಗೆ ಸಂಬಂದಿಸಿದ್ದಾಗಿದೆ.
ನಾವು ವೈರಲ್ ವೀಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಿದಾಗ ಇದೇ ವಿಡಿಯೋವನ್ನು ಎಕ್ಸ್ನಲ್ಲಿ ಅನೇಕರು ಹಂಚಿಕೊಂಡಿರುವುದು ಕಂಡು ಬಂದಿದ್ದು ಅದರಲ್ಲಿ ಮುಸ್ಲಿಂ ಬಾಲಕ ಮತ್ತು ಹುಡುಗಿಗೆ ಹಿಂದು ಸಂಘಟನೆಯ ಯುವಕರು ಥಳಿಸಿರುವುದನ್ನು ಉಲ್ಲೇಖಿಸಿ ಅನೇಕರು ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ.
“ಪ್ರವಾದಿ ಮುಹಮ್ಮದ್ (ಸ) ಅವರ ಧರ್ಮನಿಂದೆಯ ವಿರುದ್ಧ ಆಕೆಯ ಸಹೋದರ ಪ್ರತಿಭಟಿಸಿದ್ದರಿಂದ ಈ ಧೈರ್ಯಶಾಲಿ ಹಿಂದೂ ಹುಡುಗರು ಮುಸ್ಲಿಂ ಹುಡುಗಿಯ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಕಪಾಳಮೋಕ್ಷ ಮಾಡುತ್ತಾರೆ, ಬೀದಿಗಳಲ್ಲಿ ಕಿರುಕುಳ ನೀಡುತ್ತಾರೆ. ನಾವು ನಿಜವಾಗಿಯೂ ಹೇಡಿಗಳ ಸಮುದಾಯ, ಆದ್ದರಿಂದ ನಮ್ಮ ಸಹೋದರಿಯರನ್ನು ಬೀದಿಗಳಲ್ಲಿ ಅವಮಾನಿಸಲಾಗುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ತನ್ವೀರ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದರಿಂದ ಸುಳಿವು ಪಡೆದು ನಾವು ಅಂತರ್ಜಾಲದಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ “ದ ಫ್ರೀ ಪ್ರೆಸ್ ಜರ್ನಲ್” ಅವರ ವರದಿಯೊಂದು ಲಭ್ಯವಾಗಿದ್ದು ಅದರಲ್ಲಿ “ಉತ್ತರ ಪ್ರದೇಶದ ಹಾಪುರ್ ಪೊಲೀಸರು ಬುಧವಾರ (ಅಕ್ಟೋಬರ್ 9) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದ ಬಗ್ಗೆ ಹೇಳಿಕೆ ನೀಡಿದ್ದು, ವೀಡಿಯೊದಲ್ಲಿ ಹಲ್ಲೆಗೊಳಗಾದ ಹುಡುಗನನ್ನು ಮುಸ್ಲಿಂ ಎಂಬ ಕಾರಣಕ್ಕೆ ಥಳಿಸಲಾಗಿದೆ ಎಂದು ಹೇಳಿದ್ದಾರೆ. ವೀಡಿಯೊದಲ್ಲಿ ಹುಡುಗನೊಂದಿಗೆ ಕಾಣಿಸಿಕೊಂಡ ಹುಡುಗಿ ಅವನ ಸಹೋದರಿ ಎಂದು ಸಹ ಹೇಳಲಾಗಿದೆ. ಆದಾಗ್ಯೂ, ಹಾಪುರದ ಎಎಸ್ಪಿ ವಿನೀತ್ ಜೈಸ್ವಾಲ್ ವೀಡಿಯೊದಲ್ಲಿ ಬಾಲಕನನ್ನು ಬಾಲಕಿಯ ಸಂಬಂಧಿಕರು ಥಳಿಸಿದ್ದಾರೆ ಮತ್ತು ಹುಡುಗಿ ಹುಡುಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಪ್ರವಾದಿ ಮುಹಮ್ಮದ್ ವಿರುದ್ಧ ಗಾಜಿಯಾಬಾದ್ ದ್ವೇಷ ಭಾಷಣಕ್ಕೆ ಹೋಲಿಸುವವರಿಗೆ ಪೊಲೀಸರು ಎಚ್ಚರಿಕೆ ನೀಡಿದರು ಮತ್ತು ಸುಳ್ಳುಗಳನ್ನು ಹರಡುವವರು ಎಫ್ಐಆರ್ ಸಹ ಎದುರಿಸಬೇಕಾಗುತ್ತದೆ ಎಂದು ಹೇಳಿದರು.”

“ಉತ್ತರ ಪ್ರದೇಶ ಮೂಲದ ಪತ್ರಕರ್ತ ಸಚಿನ್ ಗುಪ್ತಾ ಈ ಘಟನೆಯ ಬಗ್ಗೆ ವೈರಲ್ ಹೇಳಿಕೆಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಪೊಲೀಸ್ ಹೇಳಿಕೆ ಮತ್ತು ನಿಜವಾಗಿ ಏನಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ” ಎಂದು ಸಚಿನ್ ಗುಪ್ತಾ ಅವರ ಪೋಸ್ಟ್ ಅನ್ನು ವರದಿಯಲ್ಲಿ ಹಂಚಿಕೊಳ್ಳಲಾಗಿದೆ.
ನಾವು ಸಚಿನ್ ಗುಪ್ತಾ ಅವರ ಪೋಸ್ಟ್ ಅನ್ನು ನೋಡಿದಾಗ ಅವರು “ಹಕ್ಕು: ಪ್ರವಾದಿ ಮೊಹಮ್ಮದ್ ಅವರ ಗೌರವವನ್ನು ಅವಮಾನಿಸುವುದನ್ನು ವಿರೋಧಿಸಿ ಈ ಹುಡುಗನನ್ನು ಕೊಲ್ಲಲಾಯಿತು. ಸತ್ಯ: ಇದು ಅಕ್ರಮ್. ಹಿಂದೂ ಹುಡುಗಿಯೊಂದಿಗೆ ಹೋಟೆಲ್ನಿಂದ ಹಿಂತಿರುಗುತ್ತಿದ್ದ. ದಾರಿಯಲ್ಲಿ ಹುಡುಗಿಯ ಸಹೋದರರು ಅವಳನ್ನು ಹಿಡಿದರು. ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವೀಡಿಯೊ ಸೆಪ್ಟೆಂಬರ್ 28 ರಂದು ಯುಪಿಯ ಹಾಪುರ್ನಿಂದ ಬಂದಿದೆ.” ಎಂದು ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
दावा : इस लड़के को इसलिए मारा गया, क्योंकि इसने पैगंबर मोहम्मद की शान में हुई गुस्ताखी का विरोध किया था।
सच : ये अकरम है। हिन्दू लड़की के साथ होटल से वापस आ रहा था। रास्ते में लड़की के भाइयों ने पकड़ लिया। पिटाई की और पुलिस को सौंप दिया।
वीडियो हापुड़, यूपी की 28 सितंबर की है। pic.twitter.com/9OznyLdo8z
— Sachin Gupta (@SachinGuptaUP) October 9, 2024
ಮತ್ತು “ಹುಡುಗಿ ಅಕ್ರಮ್ ವಿರುದ್ಧ ಆಮಿಷವೊಡ್ಡಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಗಾಜಿಯಾಬಾದ್ ಘಟನೆಯೊಂದಿಗೆ ಈ ವಿಡಿಯೋವನ್ನು ಲಿಂಕ್ ಮಾಡುತ್ತಿರುವವರ ವಿರುದ್ಧ ನಾವು ಎಫ್ಐಆರ್ ದಾಖಲಿಸುತ್ತಿದ್ದೇವೆ.” – ವಿನೀತ್ ಜೈಸ್ವಾಲ್, ಎಎಸ್ಪಿ ಹಾಪುರ್” ಎಂದು ಹಾಪುರ್ ಪೋಲಿಸರ ಹೇಳಿಕೆಯನ್ನು ಸಹ ಹಂಚಿಕೊಂಡಿದ್ದಾರೆ.
"लड़की ने अकरम के खिलाफ बहला–फुसलाकर ले जाने और रेप करने की FIR करवाई है। जो लोग इस Video को गाजियाबाद की घटना से जोड़ रहे हैं, उनके खिलाफ हम FIR दर्ज कर रहे हैं"
– विनीत जायसवाल, ASP हापुड़ pic.twitter.com/KERReq4lLn
— Sachin Gupta (@SachinGuptaUP) October 9, 2024
ಆದ್ದರಿಂದ ಸಧ್ಯ ಹಂಚಿಕೊಳ್ಳುತ್ತಿರುವ ವೀಡಿಯೋ ಅಕ್ರಮ್ ಎಂಬ ಯುವಕ ಹಿಂದೂ ಹುಡುಗಿಯೊಂದಿಗೆ ಹೋಟೆಲ್ನಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಹುಡುಗಿಯ ಸಹೋದರರು ಇಬ್ಬರನ್ನು ಹಿಡಿದು ಥಳಿಸಿರುವ ವೀಡಿಯೋ ಇದಾಗಿದ್ದು, ಇಬ್ಬರೂ ಓಡಿ ಹೋಗುತ್ತಿದ್ದ ಕುರಿತು ಯಾವುದೇ ವರದಿಗಳಿಲ್ಲ.
ಇದನ್ನು ಓದಿ: ತೆಲಂಗಾಣದ ಹಳೆಯ ಸುಳ್ಳು ಕೋಮು ನಿರೂಪಣೆಯ ಬ್ಯಾನರ್ ಅನ್ನು ಕರ್ನಾಟಕದ್ದು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

