ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಒಂದು ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಒಬ್ಬ ಮಹಿಳೆ 1955ರಲ್ಲಿ ಲಂಡನ್ ವಿಮಾನ ನಿಲ್ದಾಣದಲ್ಲಿ ನೆಹರು ಅವರಿಗೆ ಚುಂಬನ ನೀಡುತ್ತಿರುವಂತೆ ಕಂಡು ಬಂದಿದೆ. ಕೆಲವು ಪೋಸ್ಟ್ಗಳು ಈ ಮಹಿಳೆ ಬ್ರಿಟಿಷ್ ಮಹಿಳೆಯೊಬ್ಬಳು ಎಂದು ಹಂಚಿಕೊಳ್ಳಲ್ಪಡುತ್ತಿವೆ., ನೆಹರು “ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತರಾಗಲಿಲ್ಲ” ಎಂದು ಈ ಪೋಸ್ಟ್ಗಳಲ್ಲಿ ಉಲ್ಲೇಖಿಸಲಾಗಿದೆ. ಈ ಚಿತ್ರವನ್ನು ಬಳಸಿಕೊಂಡು ನೆಹರು ಅವರನ್ನು ಮಹಿಳಾ ಲಂಪಟಕರು ಬಿಂಬಿಸಲಾಗಿದೆ, ಇದು ಜನರಲ್ಲಿ ತಪ್ಪು ಮಾಹಿತಿ ಹರಡಲು ಸಹಕಾರಿಯಾಗುತ್ತಿವೆ.

ಈ ವೈರಲ್ ಫೋಟೋ ಮತ್ತು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಕೆಲವರು ಈ ಚಿತ್ರವನ್ನು ನೆಹರು ಅವರ ವೈಯಕ್ತಿಕ ಜೀವನದ ಮೇಲೆ ಆಧಾರವಿಲ್ಲದ ಆರೋಪಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಈ ಫೋಟೋ ಮೂಲಕ ನೆಹರು ಅವರ ಐತಿಹಾಸಿಕ ಕೊಡುಗೆಗಳಿಗಿಂತ ಅವರ ವೈಯಕ್ತಿಕ ಜೀವನದ ಚಿತ್ರಣದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ, ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Surrender to love pic.twitter.com/UYQCTB6TnE
— Sunil Bhartiya (@sun05iill) June 5, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋ ಗೂಗಲ್ ರಿವರ್ಸ್ ಇಮೇಜ್ ಮೂಲಕ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಹಲವು ಮಾಹಿತಿಗಳು ಲಭ್ಯವಾಗಿದೆ.
ಚಿತ್ರ -1

ಈ ಚಿತ್ರವನ್ನು ಸಹ ನೆಹರೂ ಅವರ ಮೇಲೆ ದಾಳಿ ಮಾಡಲು ಮತ್ತೆ ಮತ್ತೆ ಬಳಸಲಾಗಿದೆ, ಆದರೆ ವಾಸ್ತವವಾಗಿ, ಫೋಟೋದಲ್ಲಿರುವ ಮಹಿಳೆ ನೆಹರೂ ಅವರ ಸೋದರ ಸೊಸೆ ನಯನತಾರಾ ಸೆಹಗಲ್, ಅವರು 1955 ರಲ್ಲಿ ಲಂಡನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಯುರೋಪ್ ಸಾಂಪ್ರದಾಯಿಕ ಮಾದರಿಯಲ್ಲಿ ಮುತ್ತಿಟ್ಟು ಸ್ವಾಗತಿಸಿದರು.
ಇದರ ಮೂಲ ವಿಡಿಯೋ ಬ್ರಿಟೀಷ್ ಪಾಥೆ ಎಂಬ ಯೂಟ್ಯುಬ್ ಚಾನಲ್ನಲ್ಲಿ ಕಂಡು ಬಂದಿದೆ. ವೀಡಿಯೊ ಕ್ಲಿಪ್ನಲ್ಲಿ ಸುಮಾರು 00:27 ಸೆಕೆಂಡುಗಳಲ್ಲಿ ವೈರಲ್ ಫೋಟೋದ ದೃಶ್ಯ ಕಂಡು ಬರುತ್ತದೆ.
ಚಿತ್ರ -2

ಈ ವೈರಲ್ ಪೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಔಟ್ಲುಕ್ ಲೇಖನವೊಂದು ನಮಗೆ ಸಿಕ್ಕಿದ್ದು, ಅದರಲ್ಲಿ ನೆಹರೂ ಮತ್ತು ಮಹಿಳೆಯ ಅದೇ ಚಿತ್ರವಿತ್ತು. ಆ ಮಹಿಳೆ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಎಂದು ತಿಳಿದುಬಂದಿದೆ. ಈ ಫೋಟೋವನ್ನು 1949ರಲ್ಲಿ ಪ್ರಧಾನಿ ನೆಹರೂ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ತೆಗೆಯಲಾಗಿತ್ತು.

ಚಿತ್ರ – 3
ಸರಳವಾದ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಈ ಫೋಟೋದಲ್ಲಿರುವ ಮಹಿಳೆ ಕೂಡ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಎಂದು ತಿಳಿದುಬಂದಿದೆ. ‘ವಿಶ್ವ ಛಾಯಾಗ್ರಹಣ ದಿನ: ಇಂಡಿಯನ್ ಎಕ್ಸ್ಪ್ರೆಸ್ ನೆಹರೂ, ಇಂದಿರಾ ಮತ್ತು ಮಾಧುರಿ ಅವರ ಅಪರೂಪದ ಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ’ ಎಂಬ ಲೇಖನದಲ್ಲಿ ನಾವು ಈ ಚಿತ್ರವನ್ನು ಇಂಡಿಯನ್ ಎಕ್ಸ್ಪ್ರೆಸ್ ವೆಬ್ಸೈಟ್ನಲ್ಲಿ ಕಾಣಬಹುದು.

ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಮೇಲೆ ದಾಳಿ ಮಾಡುವ ಉದ್ದೇಶದಿಂದ ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರಗಳನ್ನು ಮತ್ತೆ ಮತ್ತೆ ಹಂಚಿಕೊಳ್ಳಲಾಗುತ್ತಿರುವುದು ಕಂಡು ಬರುತ್ತಿದೆ. ಇಂತಹ ಪೋಟೋಗಳನನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುವವರ ಪೈಕಿ ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರೇ ಆಗಿದ್ದಾರೆ ಎಂದು ಸ್ಪಷ್ಟವಾಗಿದೆ. ಇಂತ ಸುಳ್ಳು ನಿರೂಪಣೆಯಿಂದ ಕೂಡಿರುವ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

