ಇತ್ತೀಚೆಗೆ ಹೊಸ ವರ್ಷದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ರೀಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಸಂದೇಶದಲ್ಲಿ “ಹೊಸ ವರ್ಷದ ಕೊಡುಗೆ, ಹೊಸ ವರ್ಷದ ಸಂಭ್ರಮದಲ್ಲಿ (ಸಿದ್ದರಾಮಯ್ಯ) ಎಲ್ಲರಿಗೂ 3 ತಿಂಗಳ ರೀಚಾರ್ಜ್ ಅನ್ನು ₹749 ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ಆದ್ದರಿಂದ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇದೀಗ ರೀಚಾರ್ಜ್ನ ಪ್ರಯೋಜನವನ್ನು ಪಡೆದುಕೊಳ್ಳಿ.” ಎಂದು ಲಿಂಕ್ ಒಂದನ್ನು ಹಂಚಿಕೊಳ್ಳಲಾಗಿದೆ.
ಈ ಲಿಂಕ್ ಒಳಸಿ ಒಳಪ್ರವೇಶಿಸಿದರೆ ಸಿದ್ದರಾಮಯ್ಯನವರ ಪೋಟೋವನ್ನು ಒಳಗೊಂಡಂತೆ “ನಿಮ್ಮ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಉಚಿತ ರೀಚಾರ್ಜ್ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ! ದಯವಿಟ್ಟು ನಿಮ್ಮ ಫೋನ್ ಸಂಖ್ಯೆಯನ್ನು ಕೆಳಗೆ ಬರೆಯಿರಿ” ಎಂದು ತಿಳಿಸಲಾಗಿದೆ. ಕೆಳಗೆ ಅನೇಕರು ರಿಜಾರ್ಜ್ ಪಡೆದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಫ್ಯಾಕ್ಟ್ ಚೆಕ್:
ಈ ಸಂದೇಶ ನಕಲಿಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ರೀಚಾರ್ಜ್ಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಈ ಸಂದೇಶ ವಂಚನೆಯಾಗಿದ್ದು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನೀಡಲಾದ ಲಿಂಕ್ ಅನ್ನು ಪ್ರವೇಶಿಸುತ್ತಿದ್ದಂತೆ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಅಥವಾ ನಿಮ್ಮ ವೈಯಕ್ತಿಕ ವಿವರಗಳ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಉಚಿತ ರಿಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಇದೇ ರೀತಿಯಲ್ಲಿ ನಕಲಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಆ ಸಂದರ್ಭದಲ್ಲಿ ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಆ ಸಂದೇಶವನ್ನು ಪರಿಶೀಲಿಸಿ ಲೇಖನವನ್ನು ಪ್ರಕಟಿಸಿತ್ತು. ಪ್ರಸ್ತುತ ನೀಡಿಲಾದ ಲಿಂಕ್ ಸರ್ಕಾರಿ ಲಿಂಕ್ ಆಗಿರದೆ loklokapk.org/happynewyear/2/ ಎಂಬ ನಕಲಿ ಲಿಂಕ್ ಆಗಿದೆ. ಈ ವೆಬ್ಸೈಟ್ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ ಅಂತಹ ಯಾವುದೇ ವೆಬ್ಸೈಟ್ ಇಲ್ಲದಿರುವುದು ಕಂಡು ಬಂದಿದೆ.
ಇತ್ತೀಚೆಗೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ರೀತಿಯ ನಕಲಿ ಲಿಂಕ್ ಗಳನ್ನು ಕ್ಲಿಕ್ ಮಾಡುವ ಮೂಲಕ ಅನೇಕರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಆದಷ್ಟು ಇಂತಹ ನಕಲಿ ಲಿಂಕ್ಗಳ ಕುರಿತು ಎಚ್ಚರವಾಗಿರಿ ಮತ್ತು ಅನಾವಶ್ಯಕವಾಗಿ ಯಾವುದೇ ಲಿಂಕ್ಗಳನ್ನು ತೆರೆಯಲು ಹೋಗಬೇಡಿ. ಆಕಸ್ಮಿಕವಾಗಿ ಇಂತಹ ವಂಚನೆಗೆ ಸಿಲುಕಿದರೆ ತಕ್ಷಣ ಸೈಬರ್ ಕ್ರೈಮ್ ಸಹಾಯವಾಣಿ 155260 ಗೆ ಕರೆಮಾಡಿ ಪ್ರಕರಣ ದಾಖಲಿಸಿ.
ಸೈಬರ್ ಕ್ರೈಮ್ ಇಂದ ರಕ್ಷಿಸಿಕೊಳ್ಳುವುದು ಹೇಗೆ?
- ಪಾಸ್ ವರ್ಡ್ ಬಲಪಡಿಸಿ: ನಿಮ್ಮ ಲಾಗಿನ್ ಗಳಾದ್ಯಂತ ಒಂದೇ ಪಾಸ್ ವರ್ಡ್ ಅನ್ನು ಮರುಬಳಕೆ ಮಾಡಬೇಡಿ. ಹ್ಯಾಕರ್ ನಿಮ್ಮ ಪಾಸ್ ವರ್ಡ್ ಅನ್ನು ಪ್ರವೇಶಿಸಲು ಯಶಸ್ವಿಯಾದರೆ, ಅದು ನಿಮ್ಮ ಇತರ ಖಾತೆಗಳನ್ನು ಅನ್ ಲಾಕ್ ಮಾಡಬಹುದು. ಅಲ್ಲದೆ, ಪಾಸ್ ವರ್ಡ್ ಮ್ಯಾನೇಜರ್ ಬಳಸಿ ಮತ್ತು ವರ್ಷಕ್ಕೆ ಅನೇಕ ಬಾರಿ ಪಾಸ್ ವರ್ಡ್ ಗಳನ್ನು ಬದಲಿಸಿ. ಕೊನೆಯದಾಗಿ, ನಿಮ್ಮ ಲಾಗಿನ್ಗಳಿಗಾಗಿ 2-ಅಂಶಗಳ ದೃಢೀಕರಣ ವ್ಯವಸ್ಥೆಯನ್ನು ಬಳಸಿ.
- ಸುರಕ್ಷಿತವಾಗಿ ಡೌನ್ ಲೋಡ್ ಮಾಡಿ: ಸಾಧ್ಯವಾದರೆ ಮಾತ್ರ ನಿಮ್ಮ ಓಎಸ್ ನ ಅಧಿಕೃತ ಮಾರುಕಟ್ಟೆಯಿಂದ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿ. ಅಧಿಕೃತ ಅಪ್ಲಿಕೇಶನ್ ಮಾರಾಟಗಾರರು ತನ್ನ ಪ್ಲಾಟ್ಫಾರ್ಮ್ಗಳಲ್ಲಿ ಅನುಮತಿಸುವ ಅಪ್ಲಿಕೇಶನ್ಗಳನ್ನು ಸ್ಕ್ಯಾನ್ ಮಾಡುತ್ತಾರೆ, ಇದು ಬಳಕೆದಾರರಿಗೆ ಸುರಕ್ಷಿತವಾಗಿದೆ. ಆದಾಗ್ಯೂ, ನೀವು ಅಪ್ಲಿಕೇಶನ್ ಫೈಲ್ಗಳನ್ನು ಡೌನ್ಲೋಡ್ ಮಾಡಲು ಮತ್ತು ಅವುಗಳನ್ನು ನಿಮ್ಮ ಸಾಧನಕ್ಕೆ ಸೈಡ್-ಲೋಡ್ ಮಾಡಲು ಬಯಸಿದರೆ, ನೀವು ಡೌನ್ಲೋಡ್ ಮಾಡುತ್ತಿರುವ ವೆಬ್ಸೈಟ್ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ನಿರ್ವಾಹಕ ಖಾತೆಗಳ ರಕ್ಷಣೆ: ನೀವು ಸಾಮಾನ್ಯ ಕಾರ್ಯಗಳನ್ನು ಮಾಡುತ್ತಿದ್ದರೆ ಮತ್ತು ನಿಮ್ಮ ಕಂಪ್ಯೂಟರ್ ನಲ್ಲಿ ಪ್ರೋಗ್ರಾಂಗಳನ್ನು ಸ್ಥಾಪಿಸುತ್ತಿದ್ದರೆ ನಿಮ್ಮ ನಿರ್ವಾಹಕ ಖಾತೆಯನ್ನು ಬಳಸಬೇಡಿ. ನಿರ್ವಾಹಕ ಖಾತೆಯು ನಿಮ್ಮ ಕಂಪ್ಯೂಟರ್ ನ ಅತ್ಯುನ್ನತ ಸವಲತ್ತು ಮತ್ತು ನಿಯಂತ್ರಣವನ್ನು ಹೊಂದಿದೆ, ಇದು ದುರ್ಬಲವಾಗಿದೆ. ನೀವು ನಿಮ್ಮ ಕಂಪ್ಯೂಟರ್ ಅನ್ನು ನಿರ್ವಾಹಕರಾಗಿ ಬಳಸಿದರೆ ಮತ್ತು ಹ್ಯಾಕರ್ ಒಳನುಗ್ಗಿದರೆ, ಅದು ಸಾಮಾನ್ಯ ಬಳಕೆದಾರ ಖಾತೆಗಿಂತ ಹೆಚ್ಚಿನ ಡೇಟಾವನ್ನು ನಿಯಂತ್ರಿಸಬಹುದು ಮತ್ತು ಬಳಸಿಕೊಳ್ಳಬಹುದು.
- ಬಳಕೆಯಲ್ಲಿಲ್ಲದಿದ್ದಾಗ ಆಫ್ ಮಾಡಿ: ನೀವು ಬಳಸದ ಸಾಧನಗಳು ಮತ್ತು ಖಾತೆಗಳನ್ನು ಆಫ್ ಮಾಡಿ ಅಥವಾ ಮುಚ್ಚಿ. ಉದಾಹರಣೆಗೆ, ಬಳಕೆಯಲ್ಲಿಲ್ಲದಿದ್ದಾಗ ಕಂಪ್ಯೂಟರ್ ಅಥವಾ ನಿಮ್ಮ ವೈಫೈ ಅನ್ನು ಪವರ್ ಆಫ್ ಮಾಡಲು ಖಚಿತಪಡಿಸಿಕೊಳ್ಳಿ. ಅವುಗಳನ್ನು ಬಳಸಿದ ನಂತರ ನೀವು ನಿಮ್ಮ ಖಾತೆಗಳಿಂದ ಲಾಗ್ ಔಟ್ ಆಗಬೇಕು. ಅಂತೆಯೇ, ಹ್ಯಾಕ್ ಆಗುವ ಸಂಭವನೀಯತೆಯನ್ನು ಕಡಿಮೆ ಮಾಡಲು ಬ್ಲೂಟೂತ್, ಎನ್ಎಫ್ಸಿ ಮತ್ತು ಹಾಟ್ಸ್ಪಾಟ್ ಗಳಂತಹ ನಿಮ್ಮ ಸಾಧನಗಳಲ್ಲಿ ಸಂವೇದಕಗಳನ್ನು ಆಫ್ ಮಾಡಿ.
- ನಿಮ್ಮ ಸಾಧನಗಳು ಮತ್ತು ಇಂಟರ್ನೆಟ್ ಡೇಟಾವನ್ನು ಗೂಢಲಿಪೀಕರಿಸಿ: ನಿಮ್ಮ ಇಂಟರ್ನೆಟ್ ದಟ್ಟಣೆಯನ್ನು ಮರೆಮಾಚಲು VPN ಬಳಸಿ ನಿಮ್ಮ ಸಾಧನಗಳಲ್ಲಿ ಫೈಲ್ ಗಳನ್ನು ಗೂಢಲಿಪೀಕರಿಸಲು ಮತ್ತು ಕ್ಲೌಡ್ ಸಂಗ್ರಹಣೆಯನ್ನು ಗೂಢಲಿಪೀಕರಿಸಲು ಪ್ರಯತ್ನಿಸಿ. ಅಲ್ಲದೆ, ಟೆಲಿಗ್ರಾಮ್ ಅಥವಾ ಸಿಗ್ನಲ್ ನಂತಹ ಸುರಕ್ಷಿತ ಮೆಸೇಜಿಂಗ್ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಿಮ್ಮ ಇಮೇಲ್ ಗಳು ಮತ್ತು ಸಂಭಾಷಣೆಗಳನ್ನು ಗೂಢಲಿಪೀಕರಿಸಿ. ಇದಲ್ಲದೆ, ನಿಮ್ಮ ಕಂಪ್ಯೂಟರ್ ನ ಸಂಗ್ರಹ ಸಾಧನಗಳನ್ನು ಸುರಕ್ಷಿತಗೊಳಿಸಲು ಮತ್ತು ನಿಮ್ಮ ಮೊಬೈಲ್ ಫೋನ್ ಗಳಿಗೆ ಪಾಸ್ ಕೋಡ್ ರಕ್ಷಣೆಯನ್ನು ಹೊಂದಿಸಲು ಪ್ರೋಗ್ರಾಂಗಳನ್ನು ಬಳಸಿ.
ಹೀಗೆ ಹ್ಯಾಕ್ ಮತ್ತು ಸೈಬರ್ ಕ್ರೈಮ್ಗಳಿಂದ ತಪ್ಪಿಸಿಕೊಳ್ಳಲು ಅನೇಕ ಮಾರ್ಗಸೂಚಿಗಳಿದ್ದು ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನು ಓದಿ: ಪ್ರಧಾನಿ ಮೋದಿ ರಾಜ್ ಕಪೂರ್ ಅವರ ಸ್ಮರಣಾರ್ಥವಾಗಿ ಹಾಡಿದ್ದಾರೆ ಎಂದು AI ನಿಂದ ರಚಿಸಲಾದ ಆಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

