ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಗಡಿ ಭದ್ರತಾ ಉದ್ವಿಗ್ನತೆಯ ನಡುವೆ, ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ನ ವೀಡಿಯೊವೊಂದು X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಈಗಿರುವ ಪೋಸ್ಟರ್ ಮೇಲೆ ಹೊಸ ಪೋಸ್ಟರ್ ಅನ್ನು ಹಾಕುತ್ತಿರುವುದನ್ನು ಕಾಣಬಹುದು. ಮೂಲ ಪೋಸ್ಟರ್ನಲ್ಲಿ ಉಗ್ರನೊಬ್ಬ ‘ಮೋದಿಗೆ ಹೇಳು’ ಎಂಬ ಪಠ್ಯದೊಂದಿಗೆ ವ್ಯಂಗ್ಯಚಿತ್ರದ ಚಿತ್ರವಿದ್ದರೆ, ಹೊಸ ಪೋಸ್ಟರ್ನಲ್ಲಿ ‘I told Modi’ (ನಾನು ಮೋದಿಗೆ ಹೇಳಿದೆ) ಎಂದು ಬರೆಯಲಾಗಿದೆ.
Goose Bumps 🔥
Hats off to this gentlemen, Now Pakistani must know how Ruthless is Modiji🇮🇳 pic.twitter.com/r1MUJuFIQa
— Viक़as (@VlKAS_PR0NAM0) May 13, 2025
ವೈರಲ್ ವಿಡಿಯೋವನ್ನು ನೋಡಿದ ಹಲವು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ವಿವಿಧ ಬರಗಳನ್ನು ನೀಡಿ ವಿವಿಧ ರೀತಿಯಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಕುರಿತು ವಿವಿಧ ರೀತಿಯ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
*Goose Bumps*🔥
Hats off to this gentlemen,
Now Pakistani must know how Ruthless is Modiji
🇮🇳 pic.twitter.com/kFYJazlm0u— jagdish sista (@JagdishSista1) May 13, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ವಿವಿಧ ಕೀ ಬೋರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 5 ಮೇ 2025 ರಂದು ಮಾರ್ವೆಲ್ ಸ್ಟುಡಿಯೋಸ್ (@MarvelStudios) ಪೋಸ್ಟ್ ಮಾಡಿದ ಸಂಬಂಧಿತ ವೀಡಿಯೊವೊಂದು ಕಂಡು ಬಂದಿದೆ. ಈ ವೀಡಿಯೊದಲ್ಲಿ ಬಕಿ ಬಾರ್ನ್ಸ್ ಪಾತ್ರಕ್ಕೆ ಹೆಸರುವಾಸಿಯಾದ ಸೆಬಾಸ್ಟಿಯನ್ ಸ್ಟಾನ್ ನಗರದಾದ್ಯಂತ ಓಡಾಡುತ್ತಾ ಥಂಡರ್ಬೋಲ್ಟ್ಸ್* ಪೋಸ್ಟರ್ಗಳನ್ನು ಮಾರ್ಕೆಟಿಂಗ್ ತಂತ್ರವಾಗಿ ದಿ ನ್ಯೂ ಅವೆಂಜರ್ಸ್ ಎಂಬ ಶೀರ್ಷಿಕೆಯೊಂದಿಗೆ ಬದಲಾಯಿಸಿರುವುದು ಕಂಡು ಬಂದಿದೆ.
#TheNewAvengers pic.twitter.com/ifA1jebPVE
— Marvel Studios (@MarvelStudios) May 5, 2025
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 6 ಮೇ 2025ರಂದು ಹಿಂದೂಸ್ತಾನ್ ಟೈಮ್ಸ್ ಈ ಕುರಿತು ವರದಿ ಪ್ರಕಟಿಸಿರುವುದು ಕಂಡು ಬಂದಿದೆ. ಮಾರ್ವೆಲ್ ಇಂಡಿಯಾದ ಇನ್ಸ್ಟಾಗ್ರಾಮ್ ಖಾತೆಯು ಸೆಬಾಸ್ಟಿಯನ್ ಸ್ಟಾನ್ ವಿವಿಧ ನಗರಗಳನ್ನು ಸುತ್ತುತ್ತಿರುವ ಮತ್ತು ‘ದಿ ನ್ಯೂ ಅವೆಂಜರ್ಸ್’ ಎಂಬ ಹೊಸ ಹೆಸರಿನೊಂದಿಗೆ ಥಂಡರ್ಬೋಲ್ಟ್ಗಳ* ಹೊಸ ಪೋಸ್ಟರ್ಗಳನ್ನು ವೈಯಕ್ತಿಕವಾಗಿ ಹಾಕುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ವರದಿಯ ಶೀರ್ಷಿಕೆ, “ಥಂಡರ್ಬೋಲ್ಟ್ಗಳ ಶೀರ್ಷಿಕೆಯಲ್ಲಿ ನಕ್ಷತ್ರ ಚಿಹ್ನೆಯ ಹಿಂದಿನ ರಹಸ್ಯವನ್ನು ಸೆಬಾಸ್ಟಿಯನ್ ಸ್ಟಾನ್ ಬಹಿರಂಗಪಡಿಸುತ್ತಾರೆ; ಹೊಸ ಹೆಸರನ್ನು ಅನಾವರಣಗೊಳಿಸುತ್ತಾರೆ. ಇಂಟರ್ನೆಟ್ ಇದನ್ನು ‘ಸ್ಪಾಯ್ಲರ್’ ಎಂದು ಕರೆಯುತ್ತಿದೆ.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ವಿಡಿಯೋ ಮಾರ್ವೆಲ್ನ ಥಂಡರ್ಬೋರ್ಲ್ಸ್ಡ್ ಚಿತ್ರಕ್ಕೆ ಸಂಬಂಧಿಸಿದ್ದು, ಇದನ್ನು ಎಡಿಟ್ ಮಾಡಿ ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರವ ‘ಐ ಟೋಲ್ಡ್ ಮೋದಿ’ ಪೋಸ್ಟರ್ ಹಾಕುವ ವಿಡಿಯೋ ಎಡಿಟೆಡ್ ಆಗಿದ್ದು, ಇದರ ಮೂಲ ವಿಡಿಯೋ ಮಾರ್ವೆಲ್ನ ಥಂಡರ್ಬೋರ್ಲ್ಸ್ಡ್ ಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

