ಹಿಂದೂಗಳ ಪವಿತ್ರ ಹಾಗೂ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಯಶಸ್ವಿಯಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ಕುಂಭಮೇಳಕ್ಕೆ ಸಂಬಂಧಪಟ್ಟಂತೆ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಕೆಲವು ಮಂದಿ ಈ ಕುಂಭಮೇಳಕ್ಕೆ ಸಂಬಂಧಪಟ್ಟಂತೆ ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಕೆಲವರು ಕುಂಭಮೇಳದ ಬಳಿ ನಿರ್ಮಿಸಲಾಗಿರುವ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ತೀವ್ರ ಹಾನಿಯಾಗಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.
महाकुंभ मेला क्षेत्र के हॉस्पिटल में लगी भीषण आग pic.twitter.com/DyHk6Ky57D
— Saima Khan (@saimakhan__86) January 12, 2025
ವೈರಲ್ ವಿಡಿಯೋದಲ್ಲಿ ಕೂಡ ಯಾವುದೋ ಒಂದು ಬೃಹತ್ ಕಾರ್ಯಕ್ರಮದ ಸಂದರ್ಭದಲ್ಲಿ ಅಗ್ನಿ ಅವಘಡ ನಡೆದಿರುವಂತೆ ಕಂಡು ಬಂದಿದೆ. ಹೀಗಾಗಿ ಹಲವರು ಈ ವಿಡಿಯೋವನ್ನು ಮಹಾಕುಂಭಮೇಳದ್ದು ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
महाकुंभ मेला क्षेत्र के हॉस्पिटल में लगी भीषण आग#KumbhMela2025 #news #ViralVideos #VideoViral pic.twitter.com/mxdFcC9vRn
— News Jungal Media Pvt. Ltd. (@newsjungal) January 13, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ನ ಕಮೆಂಟ್ಗಳನ್ನು ಪರಿಶೀಲಿಸಿದಾಗ 13 ಜನವರಿ 2025 ರಂದು @kumbhMelaPolUP 2025 ಎಂಬ ಎಕ್ಸ್ ಖಾತೆಯಲ್ಲಿ “ಇದು ಅಣುಕು ಡ್ರಿಲ್ನ ವಿಡಿಯೋವಾಗಿದೆ ತಪ್ಪು ದಾರಿಗೆಳೆಯುವ ಸಂಗತಿಗಳನ್ನು ಆಧರಿಸಿ ವದಂತಿಗಳನ್ನು ಹರಡಿದ್ದಕ್ಕಾಗಿ ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ” ಎಂದು ಉಲ್ಲೇಖಿಸಿ ಈ ಖಾತೆಯಿಂದ ಕಮೆಂಟ್ ಮಾಡಿರುವುದು ಕಂಡು ಬಂದಿದೆ.
यह @fireserviceup द्वारा की गई मॉक ड्रिल का वीडियो है।
भ्रामक तथ्यों के आधार पर अफवाह फैलाने के कारण आपके विरुद्ध FIR पंजीकृत की जा रही है।— Kumbh Mela Police UP 2025 (@kumbhMelaPolUP) January 13, 2025
ಇನ್ನು ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಉತ್ತರ ಪ್ರದೇಶ ಪೊಲೀಸರ ಫ್ಯಾಕ್ಟ್ಚೆಕ್ ಎಕ್ಸ್ ಹ್ಯಾಂಡಲ್ ಅನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ಪೋಸ್ಟ್ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಳ್ಳಲಾಗಿದ್ದು, ಈ ಬಗ್ಗೆ ವದಂತಿಗಳನ್ನು ಹರಡುವ ವ್ಯಕ್ತಿಗಳ ವಿರುದ್ಧ ಕುಂಭಮೇಳ ಪೊಲೀಸರ ಮೂಲಕ FIR ದಾಖಲಿಸುವ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.
#UPPFactCheck– कुम्भ मेला क्षेत्र में @fireserviceup
द्वारा की गई मॉक ड्रिल के वीडियो को वास्तविक बताकर अफवाह फैलाने वालों के विरुद्ध @kumbhMelaPolUP द्वारा FIR पंजीकृत करके वैधानिक कार्यवाही की जा रही है।
कृपया तथ्यों को सत्यापित किये बिना सोशल मीडिया पर कोई भ्रामक पोस्ट न करें। https://t.co/zO0CH5d3ai pic.twitter.com/PY4WAfIHDd— UPPOLICE FACT CHECK (@UPPViralCheck) January 13, 2025
ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲು ಉತ್ತರ ಪ್ರದೇಶದ ಕುಂಭಮೇಳ ಪೊಲೀಸರ ಡಿಐಜಿ ವೈಭವ್ ಕೃಷ್ಣ ಅವರ ಎಕ್ಸ್ ಪೋಸ್ಟ್ ಅನ್ನು ಪರಿಶೀಲನೆ ನಡೆಸಿದಾಗ, ಕುಂಭಮೇಳ ಪೊಲೀಸರ ಅಗ್ನಿ ಅಣಕು ಡ್ರಿಲ್ ಅನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆಧಾರ ರಹಿತ ಮಾಹಿತಿಯನ್ನು ಹರಡುವ ಬಳಕೆದಾರರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಎಂದು ಬರೆದು ಕೊಂಡಿರುವುದು ಕಂಡು ಬಂದಿದೆ.
This is absolutely false information. You are indulging in rumour mongering. The video you are showing is of our Fire Mock Drill a few days back conducted by Kumbh Mela Police. Strong Legal Action will be taken against you if you float any unsubstantiated info.@kumbhMelaPolUP https://t.co/ZseEoJyX5w
— Vaibhav Krishna (@Krishna_VK12) January 13, 2025
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ ಮತ್ತು ವಿಡಿಯೋ ಅಣಕು ಅಗ್ನಿ ಪ್ರದರ್ಶನದ ವಿಡಿಯೋ ಆಗಿದೆ. ಈ ಕುರಿತು ಸ್ವತಃ ಕುಂಭಮೇಳದ ಪೊಲೀಸರೇ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕಾಂಡೋಮ್ ಮೇಲೆ ಕೇಂದ್ರ ಸರ್ಕಾರ ಶೇ. 69ರಷ್ಟು GST ವಿಧಿಸಿದೆ ಎಂಬುದು ಸುಳ್ಳು

