ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ X ಪ್ಲಾಟ್ಫಾರ್ಮ್ನಲ್ಲಿ, ವೈರಲ್ ಸಂದೇಶವೊಂದು ಯುನೈಟೆಡ್ ನೇಶನ್ಸ್ (ಯುಎನ್) ಖಂಡನೆ ರೆಸಲ್ಯೂಶನ್ನಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಕೊಲೆ ಮಾಡಿಲ್ಲ ಎಂದು ತೀರ್ಮಾನಿಸಲಾಗಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವನ್ನು ಕಿರಣ್ ಬೇಡಿ ಅವರು ಕೂಡ ಹಂಚಿಕೊಂಡಿರುವುದರಿಂದ ಸಾಕಷ್ಟು ವೈರಲ್ ಆಗಿದ್ದು, ಹಲವು ವಿಶ್ವಸಂಸ್ಥೆಯ ವಿರುದ್ಧ ವ್ಯಾಪಕವಾಗಿ ಟೀಕೆಯನ್ನು ಮಾಡುತ್ತಿದ್ದಾರೆ. ಕಿರಣ್ ಬೇಡಿ ಅವರು ಕೂಡ ಶೇರ್ ಮಾಡಲ್ಪಟ್ಟ ಪೋಸ್ಟ್ನಿಂದ ಈ ಮಾಹಿತಿ ಎಂದು ಬರೆದುಕೊಂಡಿದ್ದಾರೆ.
Based on a shared post.
In the condemnation resolution presented by the United Nations on the Pahalgam attack, Pakistan was successful in getting a clause inserted that
"The terrorists did not kill after asking about religion…!"
To do this, Pakistan showed the tweets and…
— Kiran Bedi (@thekiranbedi) May 22, 2025
ವೈರಲ್ ಪೋಸ್ಟ್ ಅನ್ನು ಇನ್ನೂ ಕೆಲವರು ಚೀನಾದ ಸಹಾಯದಿಂದ ಪಾಕಿಸ್ತಾನ ವಿಶ್ವಸಂಸ್ಥೆಯ ಖಂಡನಾ ನಿರ್ಣಯದಲ್ಲಿ ಕೆಲವೊಂದು ಅಂಶಗಳನ್ನು ತಿದ್ದುಪಡಿ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಭಯೋತ್ಪಾದಕರು ಧರ್ಮ ಕೇಳಿ ಕೊಲೆ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ನಾವು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಹುಡುಕಾಟವನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವಿಶ್ವಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಯಾವುದೇ ನಿರ್ಣಯವನ್ನು ಅಂಗೀಕರಿಸಿಲ್ಲ ಮತ್ತು ಅದನ್ನು ಖಂಡಿಸಿ ಪತ್ರಿಕಾ ಪ್ರಕಟಣೆಯನ್ನು ಮಾತ್ರ ಬಿಡುಗಡೆ ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು “ತೀವ್ರ ಪದಗಳಲ್ಲಿ ಖಂಡಿಸಿದ್ದಾರೆ” ಎಂದು ಈ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಭಯೋತ್ಪಾದನೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದು, ಇದು ಅಂತರರಾಷ್ಟ್ರೀಯ ಶಾಂತಿಗೆ “ಅತ್ಯಂತ ಗಂಭೀರ ಬೆದರಿಕೆ”ಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿರುವುದು ಕೂಡ ಕಂಡು ಬಂದಿದೆ. ಭಯೋತ್ಪಾದಕ ದಾಳಿಯ ಕುರಿತು ವಿಶ್ವಸಂಸ್ಥೆಯು ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ, ಆದ್ದರಿಂದ ಪಾಕಿಸ್ತಾನ ಅಥವಾ ಚೀನಾ ಈ ನಿರ್ಣಯದಲ್ಲಿ ಹೇಳಿಕೊಂಡಂತೆ ಯಾವುದೇ ಷರತ್ತುಗಳನ್ನು ಸೇರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ವಿಶ್ವಸಂಸ್ಥೆಯ ಡೈಲಿ ಬ್ರೀಫಿಂಗ್ನಲ್ಲಿ ಕೂಡ ಖಂಡನಾ ನಿರ್ಣಯದ ಬಗ್ಗೆ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಚೀನಾದ ಸಹಾಯದಿಂದ ಪಾಕಿಸ್ತಾನ ವಿಶ್ವಸಂಸ್ಥೆಯ ಖಂಡನಾ ನಿರ್ಣಯದಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಅಮಾಯಕರನ್ನು ಕೊಲ್ಲಲಿಲ್ಲ ಎಂಬುದು ಸುಳ್ಳು, ಅಸಲಿಗೆ ವಿಶ್ವಸಂಸ್ಥೆ ಈ ಕುರಿತು ಯಾವುದೇ ರೀತಿಯಾದ ಖಂಡನಾ ನಿರ್ಣಯವನ್ನು ಪ್ರಕಟಿಸಿಲ್ಲ. ವಿಶ್ವಸಂಸ್ಥೆ ಕೇವಲ ಪತ್ರಿಕಾ ಪ್ರಕಟಣೆಯನ್ನು ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : Fact Check | ಶ್ರೀರಾಮನ ಧನಸ್ಸು ಸಮುದ್ರದಲ್ಲಿ ಕಂಡುಬಂದಿದೆ ಎಂಬ ವಿಡಿಯೋ AI ನಿಂದ ನಿರ್ಮಿಸಲಾಗಿದೆ

