ಸಾಮಾಜಿಕ ಜಾಲತಾಣಗಳಲ್ಲಿ 2025ರ ಜೂನ್ 12ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಒಂದು ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ ವಿಮಾನದೊಳಗೆ ಪ್ರಯಾಣಿಕರು “ಅಲ್ಲಾಹು ಅಕ್ಬರ್” ಎಂದು ಘೋಷಣೆ ಕೂಗಿರುವ ದೃಶ್ಯವಿದ್ದು, ಇದು ದುರಂತಕ್ಕೆ ಕೆಲವೇ ಕ್ಷಣಗಳ ಮೊದಲಿನ ದೃಶ್ಯವೆಂದು ಹೇಳಲಾಗುತ್ತಿದೆ. ಈ ವೀಡಿಯೊವನ್ನು ಹಂಚಿಕೊಂಡವರು, ಏರ್ ಇಂಡಿಯಾ ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ನಡೆದ ಘಟನೆಯೆಂದು ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್ ವೀಡಿಯೊ ಜನಸಾಮಾನ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ದೃಶ್ಯವನ್ನು ದುರಂತದೊಂದಿಗೆ ಸಂಬಂಧಿಸಿ ಧಾರ್ಮಿಕ ಕೋನದಿಂದ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನು ಉಂಟುಮಾಡಿದ್ದು, ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
https://twitter.com/RMSanghavi09/status/1933451054168838369
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಯೋವಿನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 2024ರ ಸೆಪ್ಟಂಬರ್ನಲ್ಲಿ ಪ್ರಕಟಗೊಂಡ ಹಲವು ವರದಿಗಳು ನಮಗೆ ಕಂಡು ಬಂದಿವೆ.

ಈ ವರದಿಗಳ ಪ್ರಕಾರ , ಈ ಘಟನೆ 2024 ರ ಸೆಪ್ಟೆಂಬರ್ 23 ರಂದು ನಡೆದಿದ್ದು, ಅಲ್ಜೀರಿಯಾದಿಂದ (ಅಲ್ಜೀರ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಟರ್ಕಿಯ ಇಸ್ತಾನ್ಬುಲ್ಗೆ ಪ್ರಯಾಣಿಸುತ್ತಿದ್ದ ಏರ್ ಅಲ್ಗೇರಿ ವಿಮಾನದೊಳಗಿನ ಪ್ರಯಾಣಿಕರು ವಿಮಾನದಲ್ಲಿ ತಾಂತ್ರಿಕ ದೋಷದ ಬಗ್ಗೆ ತಿಳಿದ ನಂತರ ಅಲ್ಲಾ ಹು ಅಕ್ಬರ್ ಎಂದು ಜಪಿಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂಬುದು ತಿಳಿದು ಬಂದಿದೆ.

ಎಕೋರೌಕನ್ಲೈನ್ನ ಸುದ್ದಿ ವರದಿಯು ‘ಇನ್ಫೋ ಟ್ರಾಫಿಕ್ ಅಲ್ಜೀರಿ’ ಎಂಬ ಪುಟವು ಪೋಸ್ಟ್ ಮಾಡಿದ ಫೇಸ್ಬುಕ್ ವೀಡಿಯೊವನ್ನು ಒಳಗೊಂಡಿದೆ , ಇದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿದೆ. ಅದರ ವಿವರಣೆಯ ಪ್ರಕಾರ, “ಅಲ್ಜೀರ್ಸ್ನಿಂದ ಇಸ್ತಾನ್ಬುಲ್ಗೆ ಹೋಗುವ AH3018 ವಿಮಾನದೊಳಗಿನ ದೃಶ್ಯಗಳು ತಾಂತ್ರಿಕ ದೋಷದ ನಂತರ ತುರ್ತು ಲ್ಯಾಂಡಿಂಗ್ ಮಾಡಿದ ದೃಶ್ಯಗಳು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಸೆಪ್ಟೆಂಬರ್ 25, 2024 ರಂದು ಅಲ್ ಜಜೀರಾ ಪ್ರಕಟಿಸಿದ ಸುದ್ದಿ ವರದಿಯು ಒಂದೇ ವಿಮಾನದ ವಿಭಿನ್ನ ದೃಶ್ಯಗಳನ್ನು ಒಳಗೊಂಡಿದೆ, ಇದರಲ್ಲಿ ನಾವು ತೊಂದರೆಗೀಡಾದ ಪ್ರಯಾಣಿಕರು ಅಲ್ಲಾಹು ಅಕ್ಬರ್ ಎಂದು ಜಪಿಸುವುದನ್ನು ನೋಡಬಹುದು. ಟೇಕ್ ಆಫ್ ಆದ ಒಂದು ಗಂಟೆಯ ನಂತರ ತಾಂತ್ರಿಕ ದೋಷವನ್ನು ಗಮನಿಸಿದ ನಂತರ, ವಿಮಾನದ ಪೈಲಟ್ ಅಲ್ಜಿಯರ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ/ಹೌರಿ ಬೌಮೆಡಿಯೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಿದರು. ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಮೊರಾಕೊ ವರ್ಲ್ಡ್ ನ್ಯೂಸ್ ಪ್ರಕಟಿಸಿದ್ದು, ಅದೇ ವಿವರಗಳನ್ನು ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಏರ್ ಅಲ್ಗೇರಿ ವಿಮಾನದೊಳಗೆ ಪ್ರಯಾಣಿಕರು ಅಲ್ಲಾಹು ಹು ಅಕ್ಬರ್ ಎಂದು ಜಪಿಸುತ್ತಿರುವ ಹಳೆಯ ವೀಡಿಯೊವನ್ನು ಜೂನ್ 2025 ರ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ತಪ್ಪಾಗಿ ಜೋಡಿಸಲಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಭರೂಚ್ನ ಕಂಪನಿಯೊಂದರಲ್ಲಿ ಸಂಭವಿಸಿದ ಬೆಂಕಿಯ ವೀಡಿಯೊವನ್ನು ಅಹಮದಾಬಾದ್ ವಿಮಾನ ಅಪಘಾತ ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

