ಧೂಮಪಾನ ಮಾಡುವುದರಿಂದ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ ಎಂಬುದು ವಾಸ್ತವ. ಆದರೆ, “ಚೈನ್ ಸ್ಮೋಕರ್ಗಳ ಹಾಗೂ ದಿನವಿಡೀ ಧೂಮಪಾನ ಮಾಡುವ ಜನರರಿಗೆ ಮನೆಯಲ್ಲೇ ತಯಾರಿಸಲಾದ ಡಿಟಾಕ್ಸ್ ಟೀ ನೀಡುವುದರಿಂದ ಅವರ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
“ಈ ಚಹಾ ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ” ಎಂಬ ಹೇಳಿಕೆಯೊಂದಿಗೆ ರೀಲ್ ಅನ್ನು @vaidyajayashreed ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು , ಈ ಖಾತೆಯಗೆ 1,53,000 ಅನುಯಾಯಿಗಳಿದ್ದಾರೆ.ಈ ವಿಡಿಯೋವನ್ನು 13.5 ಮಿಲಿಯನ್ ಜನರು ವೀಕ್ಷಿಸಿದ್ದು 4,39,000 ಲೈಕ್ಗಳು ಮತ್ತು 10 ಲಕ್ಷ ಶೇರ್ಗಳನ್ನು ಕಂಡಿದೆ.
ಈ ವಿಡಿಯೋದಲ್ಲಿ, “ಚೈನ್ ಸ್ಮೋಕರ್ಗಳು ಅಥವಾ ದಿನವಿಡೀ ಧೂಮಪಾನ ಮಾಡುವ ಜನರು. ಅವರ ಶ್ವಾಸಕೋಶಗಳು ತುಂಬಾ ಹಾಳಾಗಿರುತ್ತದೆ. ಈ ಶ್ವಾಸಕೋಶದ ಡಿಟಾಕ್ಸ್ ಚಹಾದಿಂದ ಧೂಮಪಾನ ಮಾಡಿ ಹಾಳಾಗಿರುವ ಶ್ವಾಸಕೋಶಗಳನ್ನು ಸಹ ಸರಿಪಡಿಸಬಹುದು. ಇದನ್ನು ತಯಾರಿಸುವ ಸರಳ ವಿಧಾನ ಇಲ್ಲಿದೆ. 1 1/2 ನೀರು, 2 ಇಂಚು ಶುಂಠಿ, 1/2 ಟೀಚಮಚ ಅರಿಶಿನ, ಒಂದಿಷ್ಟು ಕಾಳು ಮೆಣಸು ಮತ್ತು ಸಣ್ಣ ಗಾತ್ರದ ದಾಲ್ಚಿನ್ನಿ. ಇದನ್ನು ಚೆನ್ನಾಗಿ ಕುದಿಸಿ ಒಂದು ಲೋಟಕ್ಕೆ ಇಳಿಸಿ ನಂತರ ಸೋಸಿಕೊಂಡು ಬಿಸಿ ಇದ್ದಾಗಲೇ ಕುಡಿಯಿರಿ. ಇದು ನಿಮ್ಮ ಶ್ವಾಸಕೋಶವನ್ನು ಈ ಡಿಟಾಕ್ಸ್ ಟೀ ರಕ್ಷಿಸುತ್ತದೆ. ಖಂಡಿತವಾಗಿಯೂ ನಿಮ್ಮ ಶ್ವಾಸಕೋಶಕ್ಕೆ ಸಹಾಯ ಮಾಡುತ್ತದೆ, ಆದರೆ ನೀವು ಧೂಮಪಾನವನ್ನು ನಿಲ್ಲಿಸಬೇಕು. ಧೂಮಪಾನವು ನಿಮ್ಮ ಆರೋಗ್ಯಕ್ಕೆ ತುಂಬಾ ಕೆಟ್ಟದು ಮತ್ತು ಅದು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ನಿಮಗೆ ಗೊತ್ತಿದೆ” ಎಂದು ಹೇಳುವುದನ್ನು ಕಾಣಬಹುದು.

ಫ್ಯಾಕ್ಟ್ಚೆಕ್
ಮನೆಯಲ್ಲೇ ತಯಾರಿಸಲಾದ ಡಿಟಾಕ್ಸ್ ಟೀ ಕುಡಿಯುವುದರಿಂದ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು ಎಂಬುದು ಸುಳ್ಳು. ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಪುರಾವೆಗಳಿಲ್ಲ.
ಜಾಗತಿಕ ವಾಯು ಮಾಲಿನ್ಯ ಮತ್ತು ಆರೋಗ್ಯದ ಕುರಿತು WHO ಸಲಹಾ ಸಮಿತಿಯ ಸದಸ್ಯರಾದ ಪ್ರಸಿದ್ಧ ಶ್ವಾಸಕೋಶಶಾಸ್ತ್ರಜ್ಞ ಡಾ ಜಿ.ಸಿ. ಖಿಲ್ನಾನಿಯವರು ಈ ಡಿಟಾಕ್ಸ್ ಟೀ ಬಗ್ಗೆ ಅಸಹಮತಿ ವ್ಯಕ್ತಪಡಿಸಿದ್ದು, “ವೈಜ್ಞಾನಿಕವಾಗಿ ಇದು ಅಸಾಧ್ಯದ ಮಾತು ಎಂದಿದ್ದಾರೆ. ಮಾಲಿನ್ಯದ ವಿರುದ್ಧ ಮಾಡಬೇಕಾದ ಏಕೈಕ ವಿಷಯವೆಂದರೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರ ಮೂಲಕ ನಮ್ಮ ಶ್ವಾಸಕೋಶಕ್ಕೆ ಕೆಟ್ಟ ಗಾಳಿಯು ಪ್ರವೇಶಿಸದಂತೆ ತಡೆಯುವುದು. ಒಮ್ಮೆ ಕೆಟ್ಟಗಾಳಿಯು ನಮ್ಮ ಶ್ವಾಸಕೋಶಕ್ಕೆ ಪ್ರವೇಶಿಸಿದರೆ ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವರಿಗೆ ಇದರಿಂದಾಗಿ ಅಸ್ತಮಾ, ಎದೆ ಬಿಗಿತದಂತಹ ಸಮಸ್ಯೆಗಳು ಕಾಡುತ್ತವೆ. ನಮ್ಮಲ್ಲಿ ಹೆಚ್ಚಿನವರಿಗೆ ಗಂಟಲು ನೋವು, ಶೀತ, ತಲೆನೋವು ಮತ್ತು ನಿದ್ರಾ ಭಂಗದಂತಹ ಅಸ್ವಸ್ಥತೆಗೆ ತುತ್ತಾಗುತ್ತೇವೆ.” ಎಂದು ಡಾ.ಖಿಲ್ನಾನಿ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮನೆಯಲ್ಲೇ ತಯಾರಿಸಲಾದ ಡಿಟಾಕ್ಸ್ ಟೀ ಕುಡಿಯುವುದರಿಂದ ಇದು ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ ಎಂಬುದು ಸುಳ್ಳು. ವೈಜ್ಞಾನಿಕವಾಗಿ ಇದು ಅಸಾಧ್ಯ.
ಇದನ್ನು ಓದಿದ್ದೀರಾ? Fact Check I ನಾನ್ ಸ್ಟಿಕ್ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

