ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್ನ ರಾಣಿಯೊಂದಿಗೆ ಮಾತನಾಡಿದ್ದಾರೆ ಎಂಬ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಫೋಟೋದಲ್ಲಿ ಕುವೈತ್ನ ರಾಣಿ ಹಿಜಾಬ್ ಧರಿಸದೇ ಸರಳವಾದ ಉಡುಪನ್ನು ಧರಿಸಿದ್ದಾರೆ. 2024ರ ಡಿಸೆಂಬರ್ನಲ್ಲಿ ಮೋದಿ ಅವರು ಕುವೈತ್ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ “ಕುವೈತ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ಹುಡುಕಾಟ ನಡೆಸಿದಾಗ, ಅದೇ ಫೋಟೋವನ್ನು ಒಳಗೊಂಡಿರುವ ಹಲವಾರು ವರದಿಗಳು ದೊರೆತಿವೆ.
ಆ ಮಹಿಳೆಯನ್ನು ಶೇಖಾ ಎ.ಜೆ ಅಲ್-ಸಬಾಹ್ ಎಂದು ವರದಿಗಳಲ್ಲಿ ಗುರುತಿಸಲಾಗಿದೆ. ಆಕೆ ಯೋಗಾಭ್ಯಾಸದ ಪಟು ಮತ್ತು ಕುವೈತ್ನ ಮೊದಲ ಪರವಾನಗಿ ಪಡೆದ ‘ದಾರತ್ಮಾʼ ಎಂಬ ಯೋಗ ಸ್ಟುಡಿಯೋದ ಸ್ಥಾಪಕಿಯಾಗಿದ್ದಾಳೆ. ಮೋದಿಯವರು ಗಲ್ಫ್ ದೇಶದ ಇತರ ಪ್ರಭಾವಿ ವ್ಯಕ್ತಿಗಳ ಭೇಟಿಯ ವೇಳೆ 2024ರ ಡಿಸೆಂಬರ್ 22ರಂದು ಆಕೆಯನ್ನು ಭೇಟಿಯಾಗಿದ್ದಾರೆ.

2024ರ ಡಿಸೆಂಬರ್ 22ರಂದು ಮೋದಿ ಅವರ ಟ್ವಿಟರ್ ಪೋಸ್ಟ್ವೊಂದು ಲಭ್ಯವಾಗಿದೆ. ಅದರಲ್ಲಿ ಅವರು ಶೇಖ್ ಎಜೆ ಅಲ್-ಸಬಾಹ್ ಅವರ ಭೇಟಿಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Met HH Shaikha AJ Al-Sabah in Kuwait. She has distinguished herself for her passion towards Yoga and fitness. She has established her own Yoga and wellness studio, which is quite popular in Kuwait. We talked about ways to make Yoga more popular among the youth. pic.twitter.com/0pjMxWwUDe
— Narendra Modi (@narendramodi) December 22, 2024
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇನ್ಸ್ಟಾಗ್ರಾಮ್ ಪೋಸ್ಟ್ ಸಹ ಲಭ್ಯವಾಗಿದ್ದು, ಅದರಲ್ಲಿ ಮೋದಿ ಅವರು ಶೇಖಾ ಎಜೆ ಅಲ್-ಸಬಾಹ್ ಅವರನ್ನು ಭೇಟಿಯಾದ ಅದೇ ಫೋಟೋವನ್ನು ಒಳಗೊಂಡಿದೆ. ಅವರನ್ನು ಯೋಗ ಪಟು ಮತ್ತು ಕುವೈತ್ನ ಮೊದಲ ಪರವಾನಗಿ ಪಡೆದ ʼದಾರತ್ಮಾʼ ಎಂಬ ಯೋಗ ಸ್ಟುಡಿಯೋದ ಸ್ಥಾಪಕಿ ಎಂದು ಗುರುತಿಸಲಾಗಿದೆ.
ಕುವೈತ್ನ “ರಾಣಿ” ಮತ್ತು “ಕ್ವೀನ್” ಎಂಬ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಯಾವುದೇ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿಲ್ಲ. ಪ್ರಸ್ತುತ ಅಮೀರ್ ಶೇಖ್ ಮಶಾಲ್ ಅಲ್- ಅಹ್ಮದ್ ಅಲ್-ಜಾಬರ್ ಅಲ್- ಸಬಾಹ್ ಎಂಬುವವರು ಕುವೈತ್ ದೇಶದ ಆಡಳಿತವನ್ನು ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಅವರು ಕುವೈತ್ನ ಯೋಗ ಪಟುವಿನೊಂದಿಗಿರುವ ಫೋಟೋವನ್ನು ʼಕುವೈತ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿʼ ಎಂಬ ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check | ಡಾ.ಮನಮೋಹನ್ ಸಿಂಗ್ ಅವರ ಬದುಕಿನ ಕೊನೆಯ ಫೋಟೋ ಎಂದು 2021ರಲ್ಲಿ ತೆಗೆಯಲಾದ ಚಿತ್ರ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

