ಪ್ಯಾಲೆಸ್ಟೈನ್ ಧ್ವಜವನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ಮಹಾರಾಜ ರಂಜಿತ್ ಸಿಂಗ್ರವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯು ಪಂಜಾಬ್ನಲ್ಲಿ ನಡೆದಿದೆ ಎಂದು ಕೆಲವು ವರದಿಗಳು ಹೇಳುತ್ತಿದ್ದು, ಪ್ಯಾಲೆಸ್ಟೈನ್ ಬೆಂಬಲಿಗರು ಭಾರತದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Xನ @TimesAlgebraIND ಎಂಬ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, “ಪ್ಯಾಲೆಸ್ಟೈನ್ ಪರ ಬೆಂಬಲಿಗರು ಪಂಜಾಬ್ನಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಮಹಾರಾಜ ರಂಜಿತ್ ಸಿಂಗ್ ಅವರು ಪಂಜಾಬ್ನಲ್ಲಿ ಅನೇಕ ಇಸ್ಲಾಮಿಕ್ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಶ್ರೇಷ್ಠ ಸಿಖ್ ಆಡಳಿತಗಾರರಾಗಿದ್ದರು. ಅವರು ವಿದೇಶಿ ಆಕ್ರಮಣದಿಂದ ದೇಶವನ್ನು ರಕ್ಷಿಸಿದರು. ಅವರನ್ನು ಪಂಜಾಬ್ನ ಸಿಂಹ ಎಂದೂ ಕರೆಯುತ್ತಾರೆ.” ಎಂದು ಪೋಸ್ಟ್ ಹಂಚಿಕೊಂಡಿದ್ದು, ನಂತರ, ಈ ಪೋಸ್ಟ್ ಅನ್ನು ಅಳಿಸಿದ್ದಾರೆ.

ಫ್ಯಾಕ್ಟ್ ಚೆಕ್:
ಈ ಚಿತ್ರದ ಕುರಿತು ಅನ್ವೇಷಣೆ ನಡೆಸಿದಾಗ ಈ ಘಟನೆಯು ಕೆನಡಾದ ಮಾಲ್ಟನ್ನಲ್ಲಿ ನಡೆದಿದೆ ಎಂಬುದು ಬೆಳಕಿಗೆ ಬಂದಿದ್ದು, ಇದು ಭಾರತದ ಪಂಜಾಬಿನಲ್ಲಿ ನಡೆದಿಲ್ಲ ಎಂಬುದು ಸಾಬೀತಾಗಿದೆ. ಕೆನಡಾದ ಮಾಲ್ಟನ್ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಪ್ರತಿಮೆಯ ಮೇಲೆ ಪ್ಯಾಲೇಸ್ಟಿನಿಯನ್ ಧ್ವಜವನ್ನು ಇರಿಸಿರುವುದು ವರದಿಯಾಗಿದೆ.
ಬಳಕೆದಾರರು ಮಾಡಿದ ವಾದವನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಅನೇಕ ಮೂಲಗಳು ಲಭ್ಯವಾಗಿವೆ. ವರದಿಗಳ ಪ್ರಕಾರ (1, 2), ಹೋಸಾಮ್ ಹಮ್ದಾನ್ ನೇತೃತ್ವದ ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರು ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಕೆನಡಾದ ಮಾಲ್ಟನ್ನಲ್ಲಿ ವಿರೂಪಗೊಳಿಸಿದ್ದಾರೆ. ಹಾಗಾಗಿ, ಈ ಘಟನೆ ಭಾರತದ ಪಂಜಾಬ್ಗೆ ಸಂಬಂಧಿಸಿದ್ದಲ್ಲ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಕೆನಡಾದಲ್ಲಿ ನಡೆದ ಘಟನೆಯನ್ನು ಭಾರತದ ಪಂಜಾಬಿನಲ್ಲಿ ನಡೆದಿದೆ ಎಂದು ಕೆನಡಾದ ಘಟನೆಯನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ? : Fact Check : ಹೃದಯ ಶಸ್ತ್ರಚಿಕಿತ್ಸೆಗೆ ಬಳಸುವ ಮೆಗಾವಾಕ್ ಉಪಕರಣವನ್ನು ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

