Fact Check | ಇಸ್ರೇಲಿ ಪೊಲೀಸರು ಪ್ಯಾಲೆಸ್ಟೈನ್ ಮಗುವನ್ನು ಕೊಂದಿದ್ದಾರೆ ಎಂದು ಸ್ವೀಡೆನ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ ಪರಿಣಾಮ ಸಾಕಷ್ಟು ಮಂದಿ ಅಮಾಯಕ ನಾಗರಿಕರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿವೆ. ಇದೀಗ ಇಸ್ರೇಲಿನ ಪೊಲೀಸರು ಪಾಲೆಸ್ಟೈನ್‌ನ 9 ವರ್ಷದ ಬಾಲಕನನ್ನು ಥಳಿಸಿ ಕೊಂದಿದ್ದಾರೆ ಎಂದು ಬರೆದುಕೊಂಡು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಪೊಲೀಸರ ಗುಂಪೊಂದು ಬಾಲಕನೊಬ್ಬನ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ಸಾಕಷ್ಟು…

Read More

Fact Check | ಇರಾನ್ ಮೇಲೆ ಪರಮಾಣು ದಾಳಿಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಸ್ಪೇಸ್‌ಎಕ್ಸ್ ವಿಡಿಯೋ ಹಂಚಿಕೆ

ಅಮೆರಿಕ ಸೇನೆಯು ಬಿ-2 ಸ್ಟೆಲ್ತ್ ಬಾಂಬರ್‌ಗಳು ಮತ್ತು ಬೃಹತ್ ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬಳಸಿ ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ನಂತರ, ಕ್ಷಿಪಣಿಯಂತಹ ರಚನೆಯು ನೇರವಾಗಿ ನಿಂತು ರಸ್ತೆಯಲ್ಲಿ ಚಲಿಸುತ್ತಿರುವಂತೆ ಕಾಣುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಸಾಕಷ್ಟು ಮಂದಿ ಇಸ್ರೇಲ್‌ ಇರಾನ್‌ ಮೇಲೆ ಪರಮಾಣು ದಾಳಿಗೆ ಸಿದ್ದತೆ ನಡೆಸುತ್ತಿದೆ ಎಂದು ಉಲ್ಲೇಖಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. इजरायलले ईरान माथि पर परमाणु हमला गर्ने निर्णय गरेछ…

Read More

Fact Check | ಗಾಜಾ ದಾಳಿಯ ಹಳೆಯ ವೀಡಿಯೊವೊಂದನ್ನು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ

ಪಾಕಿಸ್ತಾನದ ಉಗ್ರರು ಭಾರತದ ಮೇಲೆ ಪಹಲ್ಗಾಮ್‌ ಭಯೋತ್ಪಾದಕ ದಾಳಿ ನಡೆಸಿದ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಇದರ ನಡುವೆ ಇದೀಗ ಭಾರತ ಉಗ್ರ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಅಲ್ಲಿನ 90 ಕ್ಕೂ ಅಧಿಕ ಉಗ್ರರನ್ನು ಮಟ್ಟ ಹಾಕಿದೆ. ಈ ಸಂದರ್ಭದಲ್ಲಿ ಇದೀಗ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಭಾರತವು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಚರಣೆಯ ವಿಡಿಯೋ ಎಂದು ಶೇರ್…

Read More

Fact Check | ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾರೆ ಎಂದು ಎಡಿಟೆಡ್‌ ವಿಡಿಯೋ ಹಂಚಿಕೆ

ಇಸ್ರೇಲ್-ಗಾಜಾ ಸಂಘರ್ಷದ ಮಧ್ಯೆ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾರೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, “ನೀವು ಬಹಳಷ್ಟು ಬಳಲುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಾನು ಬಹಳ ಪ್ರಸಿದ್ಧ ಆಟಗಾರ, ಆದರೆ ನೀವು ನಿಜವಾದ ನಾಯಕರು. ನಿಮ್ಮ ಭರವಸೆಯನ್ನು ಕಳೆದುಕೊಳ್ಳಬೇಡಿ. ಜಗತ್ತು ನಿಮ್ಮೊಂದಿಗಿದೆ. ನಾವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ. ನಾನು ನಿಮ್ಮೊಂದಿಗಿದ್ದೇನೆ” ಎಂದು ಅವರು ಹೇಳುತ್ತಿರುವುದು ಕಂಡು ಬಂದಿದೆ.  Cristiano Ronaldo ( footballer) stands with Palestine…

Read More

Fact Check | ಬೆಂಜಮಿನ್‌ ನೆತನ್ಯಾಹು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಡಿಟೆಡ್‌ ಫೋಟೋ ಹಂಚಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆತನ್ಯಾಹು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದಲ್ಲಿ, ಬೆಂಜಮಿನ್ ನೆತನ್ಯಾಹು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು ಮತ್ತು ಅವರ ಪತ್ನಿ ಸಾರಾ ನೆತನ್ಯಾಹು ಅವರ ಕೈ ಹಿಡಿದು ನಿಂತಿದ್ದಾರೆ. ಹೀಗಾಗಿ ಹಲವರು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. إعلام عبري تعرض نتيناهو لوعكة صحية حاده وتم نقله إلى مستشفى في تل…

Read More

Fact Check | ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು

ಇಸ್ರೇಲ್ ಮತ್ತು ಲೆಬನಾನ್‌ ನಡುವಿನ ಸಂಘರ್ಷದ ಕುರಿತು ವಿವಿಧ ಮಾಧ್ಯಮಗಳಲ್ಲಿ ಹಲವು ರೀತಿಯಾದಂತಹ ಸುದ್ದಿಗಳು ಪ್ರತಿನಿತ್ಯ ಪ್ರಕಟಗೊಳ್ಳುತ್ತಿರುತ್ತವೆ. ಇವುಗಳಲ್ಲಿ ಹಲವು ಸುದ್ದಿಗಳು ಆಘಾತವನ್ನು ಉಂಟುಮಾಡಿದರೆ, ಇನ್ನೂ ಕೆಲವೊಂದಷ್ಟು ಸುದ್ದಿಗಳು ಗೊಂದಲವನ್ನು ಸೃಷ್ಟಿಸುತ್ತಿವೆ. ಈಗ “ಇಸ್ರೇಲ್‌ನ ಹೆಲಿಕಾಫ್ಟರ್‌ವೊಂದು ದಕ್ಷಿಣ ಲೆಬನಾನ್‌ಗೆ ಪ್ರವೇಶಿಸಿದ್ದು, ಅಲ್ ಖಯಂ ಪ್ರದೇಶದಲ್ಲಿ ಸಾವನ್ನಪ್ಪಿದ ಇಸ್ರೇಲಿ ಸೈನಿಕರನ್ನು ಹೊತ್ತುಯುತ್ತಿದ್ದ ವೇಳೆ ಹೆಲಿಕಾಫ್ಟರ್‌ ಅನ್ನು ಲೆಬುನಾನ್ ಸೇನೆ ಹೊಡೆದುರುಳಿಸಿದೆ” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. 🚨🚨 Breaking: An Israeli helicopter has just been shot down…

Read More

Fact Check | ಕ್ರಿಸ್ಟಿಯಾನೋ ರೊನಾಲ್ಡೊ ಪ್ಯಾಲೆಸ್ತೀನ್ ಧ್ವಜವನ್ನು ಮೈದಾನದಲ್ಲಿ ಪ್ರದರ್ಶಿಸಿದ್ದಾರೆ ಎಂಬುದು ಸುಳ್ಳು

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತವೆ. ಈ ಹಿನ್ನೆಲೆಯಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಸಲುವಾಗಿ ಪ್ಯಾಲೆಸ್ತೀನ್ ಧ್ವಜವನ್ನು ಮೈದಾನದಲ್ಲಿ ಬೀಸಿದ್ದಾರೆ. ಈ ಮೂಲಕ ಅವರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಇದು ಬಹುಮುಖ್ಯವಾದ ಬೆಂಬಲವಾಗಿದೆ ಎಂದು, ಅಸ್ಪಷ್ಟವಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Ronaldo Supports Palestine #Palestine #IsraelPalestineWar #israel #FreePalestine #Gaza#GazaUnderAttack #Hamasattack pic.twitter.com/UWXylAzbFr — बाबा लपेटू नाथ…

Read More

Fact Check |ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಇತ್ತೀಚಿನ ದಾಳಿಯ ಫೋಟೋ ಎಂದು 2023ರ ಚಿತ್ರ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಒಂದೇ ಸ್ಥಳದಲ್ಲಿ ಭಾರೀ ಸ್ಫೋಟವನ್ನು ಕಾಣಬಹುದು. ಚಿತ್ರವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಈ ಫೋಟೋ ಇಸ್ರೇಲಿ ನಗರದ ಟೆಲ್ ಅವಿವ್‌ನಲ್ಲಿ ನಡೆದ ದಾಳಿಗೆ ಸಂಬಂಧಿಸಿದೆ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ. ಇದು ಸದ್ಯಕ್ಕೆ ಇಸ್ರೇಲ್‌ ಮತ್ತು ಹಮಾಸ್‌, ಹಿಜ್‌ಬುಲ್ಲಾ, ಇರಾನ್‌ ನಡುವಿನ ಸಂಘರ್ಷದ ವೇಳೆ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಫೋಟೋದಲ್ಲಿ ಕೂಡ ಭೀಕರ ದಾಳಿಯಂತೆ ಕಂಡು ಬಂದಿರುವುದರಿಂದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಇದು ಇತ್ತೀಚೆಗಿನ ಘಟನೆ…

Read More

Fact Check | ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿಯಿಂದ ತಾಯಿ-ಮಗು ಸಾ*ವು ಎಂದು ಯೆಮೆನ್‌ ಪ್ರವಾಹದ ಫೋಟೋ ಹಂಚಿಕೆ

ಮಧ್ಯಪ್ರದೇಶದಲ್ಲಿ ಇಸ್ರೇಲ್ ಮತ್ತು ಅದರ ಸುತ್ತಲಿನ ರಾಷ್ಟ್ರಗಳ ನಡುವಿನ ಸಂಘರ್ಷದ ಹಾದಿ ಈಗ ಹಲವು ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇದನ್ನೇ ಸಾಮಾಜಿಕ ಜಾಲತಾಣದ ಲಾಭವನ್ನಾಗಿ ಮಾಡಿಕೊಂಡಿರುವ ಸಾಕಷ್ಟು ಮಂದಿ, ವಿವಿಧ ರೀತಿಯ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈಗ ಇದೇ ಸಾಲಿಗೆ ಇಸ್ರೇಲ್‌ನ ದಾಳಿಯಿಂದಾಗಿ ಪ್ಯಾಲೇಸ್ತೀನ್‌ ತಾಯಿ ಮತ್ತು ಮಗು ಸಾವನ್ನಪ್ಪಿದ ಫೋಟೋ ಎಂದು ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ. This photo breaks my heart 💔 We don’t need anything to proof…

Read More

Fact Check | ಇಸ್ರೇಲ್ ದಾಳಿಯಿಂದ ಕೈ ಕಳೆದುಕೊಂಡವನು ಪ್ಯಾಲೈಸ್ಟೈನ್ ಬಾಲಕನೇ ಹೊರತು ಹಮಾಸ್‌ ಉಗ್ರನಲ್ಲ

ಯುವಕನೊಬ್ಬನ ಕೈಗಳನ್ನು ಕತ್ತರಿಸಿದಂತಿರುವ ಚಿತ್ರವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಆತನನ್ನು ಹಮಾಸ್ ಉಗ್ರಗಾಮಿ ‘ಮೊಹಮ್ಮದ್ ಮಹರುಫ್’ ಎಂದು ಹಲವರು ಪ್ರತಿಪಾದಿಸುತ್ತಿದ್ದರು. ಕೆಲವರು  ಈ ವ್ಯಕ್ತಿ ಇಸ್ರೇಲಿ ಮಕ್ಕಳನ್ನು ಕೊಂದಿದ್ದಾನೆ ಎಂದು  ಈತನ ಛಾಯಾಚಿತ್ರಕ್ಕೆ ಶೀರ್ಷಿಕೆಯನ್ನು ನೀಡಿ, ಆತ ಇಸ್ರೇಲ್‌ ದಾಳಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ, ಆಗ ಇಸ್ರೇಲ್ ಸೈನಿಕರು ಸಾಹಸ ಪ್ರದರ್ಶಿಸಿ ಈತನನ್ನು ಹಿಡಿದು ಅವನ ಕೈಗಳನ್ನು ಕತ್ತರಿಸಿ ಬೇರೆ ಉಗ್ರರು ಈತನನ್ನು ನೋಡಿ ಭಯ ಪಡಲಿ ಎಂದು ಇವನನ್ನು ಜೀವಂತವಾಗಿ ಬಿಟ್ಟಿದೆ ಎಂದು ವರ್ಣ ರಂಜಿತವಾಗಿ ಪುರಾವೆ ನೀಡದೆ ಸುದ್ದಿಯನ್ನು…

Read More