ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಒಂದೇ ಸ್ಥಳದಲ್ಲಿ ಭಾರೀ ಸ್ಫೋಟವನ್ನು ಕಾಣಬಹುದು. ಚಿತ್ರವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಈ ಫೋಟೋ ಇಸ್ರೇಲಿ ನಗರದ ಟೆಲ್ ಅವಿವ್ನಲ್ಲಿ ನಡೆದ ದಾಳಿಗೆ ಸಂಬಂಧಿಸಿದೆ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ. ಇದು ಸದ್ಯಕ್ಕೆ ಇಸ್ರೇಲ್ ಮತ್ತು ಹಮಾಸ್, ಹಿಜ್ಬುಲ್ಲಾ, ಇರಾನ್ ನಡುವಿನ ಸಂಘರ್ಷದ ವೇಳೆ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ವೈರಲ್ ಕೂಡ ಆಗುತ್ತಿದೆ.

ಫೋಟೋದಲ್ಲಿ ಕೂಡ ಭೀಕರ ದಾಳಿಯಂತೆ ಕಂಡು ಬಂದಿರುವುದರಿಂದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಇದು ಇತ್ತೀಚೆಗಿನ ಘಟನೆ ಎಂದು ಹಂಚಿಕೊಂಡು, ಇಸ್ರೇಲ್ ಸುತ್ತಲಿನ ಇಸ್ಲಾಂ ರಾಷ್ಟ್ರಗಳ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ಚಿತ್ರವನ್ನು ಹಲವು ಆಯಾಮಗಳಿಂದ ಹಂಚಿಕೊಳ್ಳಲಾಗುತ್ತಿದ್ದು, ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಅಂತರ್ಜಾದಲ್ಲಿ ಇಸ್ರೇಲ್ ಪರ ಮತ್ತು ವಿರುದ್ಧದ ಚರ್ಚೆ ಕೂಡ ಹೆಚ್ಚಾಗುವಂತೆ ಮಾಡಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ 3 ನವೆಂಬರ್ 2023ರಂದು ಜೆರುಸಲೆಮ್ ಪೋಸ್ಟ್ನ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಈ ಚಿತ್ರ ಕಂಡುಬಂದಿದೆ. ಫೋಟೋ ಜೊತೆಗಿರುವ ಮಾಹಿತಿಯ ಪ್ರಕಾರ ಅಂದು ಆ ಸಂದರ್ಭದಲ್ಲಿ ಇಸ್ರೇಲಿ ಗ್ರಾಮ ಮತ್ತು ಉತ್ತರ ನಗರವಾದ ಕಿರಿಯಾತ್ ಶ್ಮೋನಾದಲ್ಲಿ ಎರಡು ಮನೆಗಳು ಉತ್ತರ ಮತ್ತು ದಕ್ಷಿಣದಿಂದ ಇಸ್ರೇಲ್ ಮೇಲೆ ಹಾರಿಸಿದ ರಾಕೆಟ್ ದಾಳಿಯಿಂದ ನೇರವಾಗಿ ಹಾನಿಗೊಳಗಾದವು. ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಟೈಮ್ಸ್ ಆಫ್ ಇಸ್ರೇಲ್ ಪತ್ರಕರ್ತ ಇಮ್ಯಾನುಯೆಲ್ ಫ್ಯಾಬಿಯನ್ ಅವರ X ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ನವೆಂಬರ್ 2, 2023 ರಂದು ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಈ ಘಟನೆ ಕಿರ್ಯಾತ್ ಶ್ಮೋನಾದಲ್ಲಿ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ‘ಅಲ್-ಜಜೀರಾ’ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ ಈ ದಾಳಿ ಲೆಬನಾನ್ನಿಂದ ನಡೆದಿದೆ ಎಂಬುದು ಕೂಡ ಸ್ಪಷ್ಟವಾಗಿದೆ. ಹಾಗಾಗಿ ಈ ದಾಳಿ ಒಂದು ವರ್ಷಗಳಷ್ಟು ಹಳೆಯದಾಗಿದೆ.
MDA says two wounded in the rocket impact in Kiryat Shmona, including a 25-year-old in moderate condition due to shrapnel and a 40-year-old in light condition as a result of the blast. Fire and Rescue Services photos of the impact. pic.twitter.com/1U485wd0hb
— Emanuel (Mannie) Fabian (@manniefabian) November 2, 2023
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಇತ್ತೀಚೆಗೆ ಇಸ್ರೆಲ್ನ ಟೆಲ್ ಅವಿವ್ ಮೇಲೆ ನಡೆದ ದಾಳಿ ಎಂಬ ಫೋಟೋ 2023ರದ್ದಾಗಿದೆ. ಇದನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಲವು ವರದಿಗಳಿಂದ ಈ ವಿಚಾರ ಸಾಬೀತಾಗಿದ್ದು, ಈ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

