ಭಾರತೀಯ ವಲಸಿಗನೊಬ್ಬ ಟಿಕೆಟ್ ಇಲ್ಲದೆ ಪ್ರಯಾಣಿಸಲು ಯತ್ನಿಸಿ ಲಂಡನ್ ರೈಲ್ವೆ ಪ್ರವೇಶದ್ವಾರದಲ್ಲಿ ಸಿಕ್ಕಿಬಿದ್ದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್ ಚಿತ್ರವನ್ನೊಳಗೊಂಡ ಸ್ಪ್ಯಾನಿಷ್ ಮಾಧ್ಯಮ ವರದಿಯೊಂದು ಲಭ್ಯವಾಗಿದೆ. ಈವರದಿಯ ಪ್ರಕಾರ ಈ ಘಟನೆಯು ಕೊಲಂಬಿಯಾದ ಬೊಗೊಟಾದಲ್ಲಿ ನಡೆದಿದ್ದು, ಟ್ರಾನ್ಸ್‌ಮಿಲೆನಿಯೊದಲ್ಲಿ ಸ್ಥಳೀಯ ಮಹಿಳೆ ಬಸ್ ತಲುಪುವ ಸಲುವಾಗಿ ನಿಲ್ದಾಣದಲ್ಲಿ ತಡೆಗೋಡೆ ದಾಟಲು ಪ್ರಯತ್ನಿಸಿದ್ದಾಳೆ. 2024ರ ಜನವರಿ 17ರಿಂದ ಈ ಘಟನೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
2024ರ ಜನವರಿ 24ರಂದು ಡೈಲಿ ಮೇಲ್ ವರದಿಯೊಂದು ಲಭ್ಯವಾಗಿದೆ. ಅದರಲ್ಲಿ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಲಂಡನ್ ರೈಲ್ವೆ ಪ್ರವೇಶದ್ವಾರದಲ್ಲಿ ಭಾರತೀಯ ವಲಸಿಗನೊಬ್ಬ ಸಿಕ್ಕಿಬಿದ್ದಿದ್ದಾನೆ ಎಂದು ಕೊಲಂಬಿಯಾದ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check | ಮೋದಿಯವರೊಂದಿಗೆ ಇರುವ ಯೋಗ ಪಟುವಿನ ಫೋಟೋವನ್ನು ʼಕುವೈತ್ ರಾಣಿʼ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.