ಭಾರತದ ಪ್ರಧಾನ ಮಂತ್ರಿಗಳಲ್ಲಿಯೇ ಅತ್ಯಂತ ಪ್ರಖ್ಯಾತರಾದ ಮತ್ತು ಉಕ್ಕಿನ ಮಹಿಳೆ ಎಂದು ಕರೆಯಲ್ಪಡುತ್ತಿದ್ದ ಇಂದಿರಾ ಗಾಂಧಿಯವರು ತಮ್ಮ ಜನಪರ ಆಡಳಿತ ಕಾರಣಕ್ಕಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಅಂತೆಯೇ ಅವರ ಆಡಳಿತದ ಸಂದರ್ಭದಲ್ಲಿ ವಿಧಿಸಿದ ರಾಜಕೀಯ ತುರ್ತು ಪರಿಸ್ಥಿತಿಯ ಕುರಿತು ಸಹ ಆಗಾಗ ಚರ್ಚೆಗಳು, ಟೀಕೆಗಳು ನಡೆಯುತ್ತಿರುತ್ತವೆ. ಆದರೆ ಪ್ರಸ್ತುತ ರಾಜಕೀಯದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಸೇರಿದಂತೆ, ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ವ್ಯವಸ್ತಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ.
ಅದರ ಭಾಗವಾಗಿ ಈಗ, ಇಂದಿರಾ ಗಾಂಧಿಯವರ ಕುರಿತಂತೆ ಸಂದೇಶವೊಂದು ಹರಿದಾಡುತ್ತಿದ್ದು, ” ಮಹಮ್ಮದ್ ಯೂನಸ್, ಇಂದಿರಾ ಗಾಂಧಿ ಅಲಿಯಾಸ್ ಮೆಮುನಾ ಬೇಗಂ ಅವರ ಎರಡನೇ ಅಘೋಷಿತ ಪತಿ. ಅವರೇ ಸಂಜಯ್ ಗಾಂಧಿಯ ನಿಜವಾದ ತಂದೆ…ಅದು ರಹಸ್ಯ ಮದುವೆ! ಇದೇ ಯೂನಸ್ ಮೇನಕಾ ಜೊತೆ ಸಂಜಯ್ ಮದುವೆ ಸಂದರ್ಭದಲ್ಲಿ ಮಾವ ಪಾತ್ರ ಮಾಡಿದ್ದು, ಮದುವೆ ಮೆರವಣಿಗೆ ಅವರ ಮನೆಯಲ್ಲೇ ಹಾದು ಹೋಗುತ್ತೆ ಅಂತ ಹಠ ಹಿಡಿದಿದ್ದ.. ತನ್ನ ತಂದೆ ಯಾರೆಂದು ತಿಳಿದ ಸಂಜಯ್ ಇಂದಿರಾರನ್ನು ದ್ವೇಷಿಸುತ್ತಿದ್ದರು ಮತ್ತು ಇಂದಿರಾ ಅವರ ಕೆನ್ನೆಗೆ ಬಾರಿಸಿ, ಅವರ ಕೆನ್ನೆಗೆ ಕಾಂಗ್ರೆಸ್ನ ಚುನಾವಣಾ ಚಿಹ್ನೆಯನ್ನು ಬಿಡಿಸಿದರು.” ಎಂದು ಆರೋಪಿಸಿದ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಈ ಸಂದೇಶದಲ್ಲಿ ಮಹಮ್ಮದ್ ಯೂನಸ್ ಅವರನ್ನು ಇಂದಿರಾ ಗಾಂಧಿಯವರು ರಹಸ್ಯವಾಗಿ ಮದುವೆ ಆಗಿದ್ದರು. ಮಹಮ್ಮದ್ ಯೂನಸ್ ಅವರು ತಮ್ಮ ಪರ್ಸನ್ಸ್, ಪ್ಯಾಶನ್ಸ್ ಅಂಡ್ ಪಾಲಿಟಿಕ್ಸ್ ಪುಸ್ತಕದಲ್ಲಿ ನಾನು ಸಂಜಯ್ ಗಾಂಧಿಯವರ ತಂದೆ ಮತ್ತು ನಾನು ಅವರಿಗೆ ಸುನ್ನತಿ ಮಾಡಿಸಿಕೊಂಡಿದ್ದೇನೆ ಎಂದು ಬರೆದಿದ್ದಾರೆ.” ಎಂದು ವಿಶುಕುಮಾರ್ ಗೌಡ ಎಂಬ ಬಲಪಂಥೀಯ ಬೆಂಬಲಿಗ ಈ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಇದೇ ಸಂದೇಶವು ಹಿಂದಿಯಲ್ಲಿಯೂ ಹರಿದಾಡುತ್ತಿದ್ದು ಅನೇಕ ಬಿಜೆಪಿ ಕಾರ್ಯಕರ್ತರು ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಂಡಿರುವುದು ಕಾಣಬಹುದು.
इमरजेंसी रपट- 1
इमरजेंसी लागू हुए एक दिन बीत चुका है। अब आप खुदाई रिपोर्टर की एक विशेष रपट पढ़िए। रपट के मुख्य किरदार है मुहम्मद यूनुस।
मामू फ्रंटियर गांधी उर्फ़ बादशाह ख़ान उर्फ़ अब्दुल ग़फ़्फ़ार ख़ान के भांजे यूनुस को बादशाह ख़ान ने गांधी बाबा और चाचा से मिलाया था। अलीगढ़… pic.twitter.com/tV3loY9eHe
— Ocean Jain (@ocjain4) September 24, 2023
ಫ್ಯಾಕ್ಟ್ ಚೆಕ್:
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅವರು ಝೋರಾಸ್ಟ್ರಿಯನ್ ಪಾರ್ಸಿ ಕುಟುಂಬಕ್ಕೆ ಸೇರಿದ ಫಿರೋಜ್ ಗಾಂಧಿ ಅವರನ್ನು ಪ್ರೀತಿಸಿ, ಮಾರ್ಚ್ 1942 ರಲ್ಲಿ ಬ್ರಹ್ಮ ಸಮಾಜದ ಆದಿ ಧರ್ಮ ಎಂಬ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳು, ರಾಜೀವ್ ಗಾಂಧಿ (ಜನನ 1944) ಮತ್ತು ಸಂಜಯ್ ಗಾಂಧಿ (ಜನನ 1946).
ಮಹಮ್ಮದ್ ಯೂನಸ್ ಅವರು ಇಂದಿರಾ ಗಾಂಧಿಯವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಮತ್ತು ಸಂಜಯ್ ಗಾಂಧಿ ಅವರ ತಂದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಇದೊಂದು ಕಟ್ಟುಕಥೆಯಾಗಿದೆ.
ಮಹಮ್ಮದ್ ಯೂನಸ್ ಯಾರು?
ಮಹಮ್ಮದ್ ಯೂನಸ್ ಅವರು ಭಾರತದ ರಾಜತಾಂತ್ರಿಕರಾಗಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಾಗಿದ್ದಾರೆ. ಗಡಿನಾಡ ಗಾಂಧಿ ಎಂದೇ ಪ್ರಖ್ಯಾತರಾದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫಾರ್ ಖಾನ್ ಅವರ ಸಂಬಂಧಿಕರಾಗಿದ್ದರು. ಯೂನಸ್ ಅವರು ಭಾರತೀಯ ವಿದೇಶಾಂಗ ಸೇವೆಯ(IFS) ಸದಸ್ಯರಾಗಿದ್ದರು. ಅವರು ಟರ್ಕಿ, ಇಂಡೋನೇಷ್ಯಾ, ಇರಾಕ್ ಮತ್ತು ಸ್ಪೇನ್ ನಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದವರು. ಅವರು ನಿಯಮಿತ ವ್ಯಾಪಾರ ಮೇಳಗಳ ಮೂಲಕ ಮತ್ತು ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರದರ್ಶನ ಸಂಕೀರ್ಣವನ್ನು ಸ್ಥಾಪಿಸುವ ಮೂಲಕ ಭಾರತ ಮತ್ತು ವಿಶ್ವದ ಇತರ ಭಾಗಗಳ ನಡುವಿನ ವ್ಯಾಪಾರವನ್ನು ಉತ್ತೇಜಿಸಿದರು. ಅವರು ಹಿಂದಿನ ಟ್ರೇಡ್ ಫೇರ್ ಅಥಾರಿಟಿ ಆಫ್ ಇಂಡಿಯಾದ (ಟಿಎಫ್ಎಐ) ಮುಖ್ಯಸ್ಥರಾಗಿದ್ದರು, ಭಾರತ ಸರ್ಕಾರವು ಅವರ ಸೇವೆಗೆ ಪದ್ಮಭೂಷಣದ ನಾಗರಿಕ ಗೌರವವನ್ನು ನೀಡಿದೆ.
ಯೂನಸ್ ಅವರು 1947 ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿ ತಮ್ಮ ಆಡಳಿತಾವಧಿಯಲ್ಲಿ, ಅವರು ಲುಸಾಕಾ, ಅಲ್ಜಿಯರ್ಸ್, ಕೊಲಂಬೊ, ನವದೆಹಲಿ ಮತ್ತು ಹರಾರೆಯಲ್ಲಿ ನಡೆದ ಅಲಿಪ್ತ ಶೃಂಗಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ವಿಶೇಷ ರಾಯಭಾರಿಯಾಗಿ ನೇಮಕಗೊಂಡರು. ಈ ಸಾಮರ್ಥ್ಯದಲ್ಲಿ ಅವರು ದೆಹಲಿಯಲ್ಲಿ ಪ್ರಗತಿ ಮೈದಾನವನ್ನು ಸ್ಥಾಪಿಸಿದರು ಮತ್ತು ಭಾರತೀಯ ಉತ್ಪನ್ನಗಳು ಮತ್ತು ಕಂಪನಿಗಳನ್ನು ಉತ್ತೇಜಿಸಲು ವಿಶ್ವದಾದ್ಯಂತ ನಿಯಮಿತ ವ್ಯಾಪಾರ ಪ್ರದರ್ಶನಗಳನ್ನು ನಡೆಸಿದರು. ಯೂನಸ್ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದರು.
1975-77ರ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಯೂನುಸ್ ಅವರು ಇಂದಿರಾ ಗಾಂಧಿಯವರ ಆಂತರಿಕ ವಲಯದಲ್ಲಿದ್ದರು ಮತ್ತು ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದರು.
ಮಹಮ್ಮದ್ ಯೂನಸ್ ಮಗ ಆದಿಲ್ ಶಹರ್ಯಾರ್ ಕುರಿತು:
ಇನ್ನೂ ಮಹಮ್ಮದ್ ಯೂನಸ್ ಅವರ ಮಗ ಆದಿಲ್ ಶಹರ್ಯಾರ್ ಕುರಿತಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರು, ವೈರಲ್ ಸಂದೇಶದಲ್ಲಿರುವ ಮಾಹಿತಿ “ಮುಹಮ್ಮದ್ ಯೂನಸ್ ಗೆ ಮತ್ತೊಬ್ಬ ಮಗ ಆದಿಲ್ ಶಹರ್ಯಾರ್ ಇದ್ದ.. ಅಂದರೆ ಅಮೇರಿಕದಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪದಲ್ಲಿ 35 ವರ್ಷ ಜೈಲುವಾಸ ಅನುಭವಿಸಿ ಜೈಲಿನಲ್ಲಿದ್ದ ಇಂದಿರಾ ಅವರ ಮೂರನೇ ಮಗ.. ಇಂದಿರಾ ಕೊಂದ ಆರೋಪ ಇದೇ ಆದಿಲ್ ಶಹರ್ಯಾರ್. ಇದರ ನಂತರ, ರಾಜೀವ್ ಗಾಂಧಿಯವರ ಸರ್ಕಾರವು ಅಮೆರಿಕದ ಅಧ್ಯಕ್ಷರಿಂದ ಕ್ಷಮೆಯನ್ನು ಪಡೆಯಲು ಪ್ರಯತ್ನಿಸಿತು ಆದರೆ ಯಶಸ್ವಿಯಾಗಲಿಲ್ಲ.. ರೊನಾಲ್ಡ್ ರೇಗನ್ ಕ್ಷಮೆಯನ್ನು ನೀಡಲಿಲ್ಲ!” ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ಸುಷ್ಮಾ ಸ್ವರಾಜ್ ಅವರು ಸದನದಲ್ಲಿ ಮೊದಲು ಉಲ್ಲೇಖಿಸಿ ಲಲಿತ್ ಮೋದಿ ಅವರ ಪ್ರಕರಣದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಬಾಯಿ ಮುಚ್ಚಿಸಿದರು ಎಂದು ವೈರಲ್ ಸಂದೇಶದಲ್ಲಿ ಹೇಳಲಾಗಿದೆ.
ಇದರಿಂದ ಸೂಚನೆಯನ್ನು ಪಡೆದು ನಾವು ಈ ಘಟನೆ ನಡೆದ ಕುರಿತು ಕೀವರ್ಡ್ ಹುಡುಕಾಟ ನಡೆಸಿದಾಗ, ಇಂಡಿಯಾ ಟುಡೆ ಅವರ “ಆದಿಲ್ ಶಹರ್ಯಾರ್ ಯಾರು ಮತ್ತು ರಾಜೀವ್ ಗಾಂಧಿ ಅವರಿಗೆ ಹೇಗೆ ಗೊತ್ತು?” ಎಂಬ ವರದಿಯೊಂದು ಲಭ್ಯವಾಗಿದೆ. ಈ ವರದಿಯಲ್ಲಿ “ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಆದಿಲ್ ಶಹರ್ಯಾರ್ ಅವರೊಂದಿಗಿನ ಅವರ ಸಂಬಂಧದ ಬಗ್ಗೆ ಸುಳ್ಳು ಸಂಗತಿಗಳನ್ನು ಬಹಿರಂಗಪಡಿಸುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರತಿಪಕ್ಷಗಳ ಮೇಲೆ ಬಾಂಬ್ ಎಸೆದಿದ್ದಾರೆ.ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಆಂಡರ್ಸನ್ ದೇಶದಿಂದ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟವರು ರಾಜೀವ್ ಗಾಂಧಿ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, 35 ವರ್ಷಗಳ ಕಾಲ ಯುಎಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತನ್ನ ಸ್ನೇಹಿತನ ಮಗ ಆದಿಲ್ ಶಹರ್ಯಾರ್ ಬಿಡುಗಡೆಯಾಗುತ್ತಾನೆ ಎಂಬ ಖಾತರಿಯ ಮೇಲೆ ವಾಂಡರ್ಸನ್ ತಪ್ಪಿಸಿಕೊಳ್ಳಲು ಸಹಾಯ ಮಾಡಲು ರಾಜೀವ್ ಗಾಂಧಿ ಒಪ್ಪಿಕೊಂಡಿದ್ದರು ಎಂದು ಹೇಳಿದರು.” ಎಂದು ಉಲ್ಲೇಖಿಸಿದೆ.
ಈ ಲೇಖನದಲ್ಲಿ ಆದಿಲ್ ಶಹರ್ಯಾರ್ ಯಾರು? ಮತ್ತು ಆತ ಯಾವ ಕಾರಣಗಳಿಗೆ 35 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು ಎಂದು ಮಾಹಿತಿ ನೀಡಲಾಗಿದೆ. ಇಂಗ್ಲಿಷ್ ಲೇಖನದ ಕನ್ನಡ ಅನುವಾದ ಈ ಕೆಳಗಿನಂತಿದೆ.

ಈ ಲೇಖನದಲ್ಲಿ ಆದಿಲ್ ಶಹರ್ಯಾರ್ ಮೇಲೆ ಐದು ಪ್ರಮುಖ ಪ್ರಕರಣಗಳು ದಾಖಲಾಗಿದ್ದ ಕುರಿತು ಮಾಹಿತಿ ನೀಡಲಾಗಿದೆ. ಇಲ್ಲಿ ಎಲ್ಲಿಯೂ ಅಮೇರಿಕದಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪದಲ್ಲಿ 35 ವರ್ಷ ಜೈಲುವಾಸ ಅನುಭವಿಸಿದರು ಎಂಬ ಉಲ್ಲೇಖವಿಲ್ಲ.

ಆದ್ದರಿಂದ ಈ ಆರೋಪ ನಿಜವೆಂದು ಸಾಭೀತು ಪಡಿಸಲು ಯಾವುದೇ ಆಧಾರವಿಲ್ಲ. ಡೈಲಿ ಬೀಸ್ಟ್ನಲ್ಲಿ ಅಲನ್ ಡಾಡ್ಸ್ ಫ್ರಾಂಕ್ ಎಂಬ ಅಂಕಣಕಾರ ಭೂಪಾಲ್ನ ದುರಂತದ ಕುರಿತು ಬರೆದ ಲೇಖನದಲ್ಲಿ “ಭಾರತದ ಭಾರತೀಯ ಜನತಾ ಪಕ್ಷದ(BJP) ವಕ್ತಾರರು ಭೋಪಾಲ್ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಿಯಂತ್ರಿತ ಸರ್ಕಾರದ ಯೋಜನೆಯನ್ನು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಐಕಾನ್ ದಿವಂಗತ ರಾಜೀವ್ ಗಾಂಧಿ ಅವರು ಯೂನಿಯನ್ ಕಾರ್ಬೈಡ್ ಸಿಇಒ ಅವರನ್ನು 1985 ರಲ್ಲಿ ಅಧ್ಯಕ್ಷ ರೇಗನ್ ಅವರೊಂದಿಗಿನ ರಹಸ್ಯ ರಾಜಕೀಯ ಒಪ್ಪಂದದಲ್ಲಿ ರಕ್ಷಿಸಿದ್ದರು ಎಂದು ಅವರು ಹೇಳಿದ್ದಾರೆ.
ಆಂಡರ್ಸನ್ ನನ್ನು ಹಸ್ತಾಂತರಿಸಲು ಭಾರತ ಪ್ರಯತ್ನಿಸುವುದಿಲ್ಲ ಎಂದು ಪ್ರಧಾನಿ ರಹಸ್ಯವಾಗಿ ಭರವಸೆ ನೀಡಿದ್ದಾರೆ ಎಂಬುದು ವಾದ. ಇದಕ್ಕೆ ಪ್ರತಿಯಾಗಿ, ರೇಗನ್ ಅವರು ರಾಜೀವ್ ಗಾಂಧಿಯವರ ಬಾಲ್ಯದ ಸ್ನೇಹಿತನಿಗೆ ಅಧ್ಯಕ್ಷೀಯ ಕ್ಷಮಾದಾನವನ್ನು ನೀಡಿದರು ಎಂದು ಆರೋಪಿಸಲಾಗಿದೆ, ಅವರು ಗಾಂಧಿ ಕುಟುಂಬದ ಪ್ರಮುಖ ವಿದೇಶಾಂಗ ನೀತಿ ಸಲಹೆಗಾರರ ಮಗ.” ಎಂದಿದ್ದಾರೆ.

ಆದ್ದರಿಂದ ಮಹಮ್ಮದ್ ಯೂನಸ್ ಅವರು ಇಂದಿರಾ ಗಾಂಧಿಯವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂಬುದು ಕಟ್ಟುಕಥೆಯಾಗಿದೆ. ಮತ್ತು ರಾಜೀವ್ ಗಾಂಧಿಯವರು ತಮ್ಮ ಗೆಳೆಯನನ್ನು ಶಿಕ್ಷೆಯಿಂದ ಬಿಡಿಸಲು ಡಿಸೆಂಬರ್ 3, 1984 ರಂದು ಭೋಪಾಲ್ನಲ್ಲಿ ನಡೆದ ಕೀಟನಾಶಕ ಸ್ಥಾವರದ ಸ್ಫೋಟಕ್ಕೆ ಕಾರಣವಾದ ಕಂಪನಿಯ ಮುಖ್ಯಸ್ಥ ಆಂಡರ್ಸನ್ ಭಾರತದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು ಎಂಬುದು ಸಹ ಸುಳ್ಳು ಆರೋಪವಾಗಿದೆ. ಇನ್ನೂ ಆದಿಲ್ ಶಹರ್ಯಾರ್ ಅಮೇರಿಕದಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪದಲ್ಲಿ 35 ವರ್ಷ ಜೈಲುವಾಸ ಅನುಭವಿಸಿ ಜೈಲಿನಲ್ಲಿದ್ದರು ಎಂಬುದು ಬಲಪಂಥೀಯರ ಬಿಜೆಪಿ ಬೆಂಬಲಿಗರ ಆರೋಪವೇ ಹೊರತು ಅದು ನಿಜ ಸಂಗತಿ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ಇದೇ ರೀತಿಯ ಸಂಬಂಧವಿಲ್ಲದ ಆರೋಪಗಳನ್ನು, ಕಟ್ಟುಕಥೆಗಳನ್ನು ಪ್ರತಿದಿನ ಬಿಜೆಪಿ ಐಟಿ ಸೆಲ್ ಸೇರಿದಂತೆ, ಬಲಪಂಥೀಯ ಕಾರ್ಯಕರ್ತರು ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕುರಿತು ಹರಿಬಿಡಲಾಗುತ್ತಿರುತ್ತದೆ, ಇವುಗಳ ಒಟ್ಟು ಸಾರ ಮೇಲಿನ ನಾಯಕರೆಲ್ಲಾ ಮುಸ್ಲಿಂ ಎಂದು ನಿರೂಪಿಸುವುದು. ಆದ್ದರಿಂದ ಇಂತಹ ಸುಳ್ಳು ಆರೋಪಗಳನ್ನು ನಂಬದಿರಿ, ಇಂತಹ ಪೋಸ್ಟ್ ಕಂಡ ಕೂಡಲೆ ವರದಿ(Report) ಮಾಡಿ.
ಇದನ್ನು ಓದಿ: 5000 ಹಿಂದೂ ಸಾಧು-ಸಂತರನ್ನು, ಇಂದಿರಾಗಾಂಧಿ ಗುಂಡಿಕ್ಕಿ ಹತ್ಯೆಗೈಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

