ಗಾಜಾದ ಮೇಲೆ ಇಸ್ರೇಲ್ನ ಆಕ್ರಮಣ ಮುಂದುವರೆಯುತ್ತಿದ್ದಂತೆ, ಹಲವು ರೀತಿಯ ಸುಳ್ಳು ಸುದ್ದಿಗಳು ಕೂಡ ಈ ಘರ್ಷಣೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಎಕ್ಸ್ (ಈ ಹಿಂದಿನ ಟ್ವಿಟರ್)ನಲ್ಲಿ “ಇಸ್ರೇಲ್ ದಾಳಿಯಿಂದ ಗಾಜಾದಲ್ಲಿನ ಕಟ್ಟಡಗಳ ಅವಶೇಷಗಳ ಅಡಿಯಲಿ ಮಗುವೊಂದು ಸಿಲುಕಿಕೊಂಡಿದ್ದು, ಸಹಾಯಕ್ಕಾಗಿ ಕೈ ಚಾಚಿದ ದೃಶ್ಯ ಕಂಡು ಬಂದಿದೆ” ಎಂದು ಬರೆದುಕೊಂಡು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದೆ.
https://twitter.com/thenameismehdi0/status/1850832611800949032
ಈ ವೈರಲ್ ವಿಡಿಯೋದಲ್ಲಿ ಮಗುವೊಂದು ನೋಡುತ್ತಿರುವ ಹಾಗೂ ಕೈಯನ್ನು ಚಾಚುತ್ತಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನೆಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
A Palestinian child buried under rubble waits for help.
What a heartbreaking scene, why international media is silent on this 💔 pic.twitter.com/6JY4YgwYti
— Anisul Islam (So Myint) (@MaungAnis) October 28, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕಿ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 26 ಅಕ್ಟೋಬರ್ 2024ರಂದು ಟಿಕ್ಟಾಕ್ ಖಾತೆಯೊಂದರಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ಖಾತೆಯಲ್ಲಿ ಇದೇ ಮಗುವಿನ ಹಲವಾರು ಚಿತ್ರಗಳು ಇರುವುದು ಕಂಡುಬಂದಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 28 ಅಕ್ಟೋಬರ್ 2024 ರಂದು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಪೂರ್ಣ ಆವೃತ್ತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಗುವು ಗೋಡೆಯ ರಂಧ್ರದಿಂದ ಹೊರಗೆ ನೋಡುತ್ತಿರುವ ದೃಶ್ಯವಾಗಿದೆ ಎಂದು ಈ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ಮಗು ಪ್ಯಾಲೆಸ್ಟೈನ್ ಮಗುವಲ್ಲ ಸಿರಿಯಾದ್ದು ಎಂದು ತಿಳಿದು ಬಂದಿದೆ. ಇನ್ನು ಟಿಕ್ಟಾಕ್ನಲ್ಲಿ ಕೂಡ ವಿಡಿಯೋಗೆ ಅರಬಿಕ್ ಭಾಷೆಯಲ್ಲಿ ಶೀರ್ಷಿಕೆಯನ್ನು ನೀಡಲಾಗಿದ್ದು, ಇದು ಸಿರಿಯಾದಿಂದ ಮಾಡಲಾಗಿರುವ ವಿಡಿಯೋ ಎಂಬುದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
This doesn't showcase a Palestinian child trapped under rubble.
More videos, uploaded by the same person showcase the girl was not under rubble but looking through a hole in the wall. Additionally, nothing on the account indicates the origin of the mother and child.
Example: https://t.co/UoWrlNBLG6 pic.twitter.com/K8AuzH2MkA
— Tal Hagin (@talhagin) October 28, 2024

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಇಸ್ರೇಲ್ನ ದಾಳಿಯಿಂದ ಗಾಜಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ, ಮಗುವೊಂದು ಸಿಲುಕಿ ನರಳುತ್ತಿದೆ ಎಂಬುದು ಸುಳ್ಳು. ವೈರಲ್ ವಿಡಿಯೋ ಸಿರಿಯಾಗೆ ಸಂಬಂಧಪಟ್ಟಿದ್ದಾಗಿದೆ. ಮಗುವು ಗೋಡೆಯ ರಂಧ್ರದಿಂದ ಹೊರ ನೋಡುತ್ತಾ, ಆಟವಾಡುತ್ತಿರುವ ವಿಡಿಯೋ ಆವೃತ್ತಿ ಕೂಡ ಪತ್ತೆಯಾಗಿದೆ. ಇದೇ ಮಗುವಿಗೆ ಸಂಬಂಧಪಟ್ಟ ಹಲವು ಫೋಟೋ ಮತ್ತು ಕೆಲವೊಂದು ವಿಡಿಯೋಗಳು ಟಿಕ್ಟಾಕ್ನಲ್ಲಿ ಲಭ್ಯವಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ ಮತ್ತು ಇಂತಹ ಸುಳ್ಳು ನಿರೂಪಣೆಯಿಂದ ಕೂಡಿದ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : ಈ ಹೋಮಿಯೋಪತಿ ಔಷಧವು 48 ಗಂಟೆಗಳಲ್ಲಿ ಡೆಂಗ್ಯೂ ಗುಣಪಡಿಸುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

