ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷದ ಕುರಿತು ವಿವಿಧ ಮಾಧ್ಯಮಗಳಲ್ಲಿ ಹಲವು ರೀತಿಯಾದಂತಹ ಸುದ್ದಿಗಳು ಪ್ರತಿನಿತ್ಯ ಪ್ರಕಟಗೊಳ್ಳುತ್ತಿರುತ್ತವೆ. ಇವುಗಳಲ್ಲಿ ಹಲವು ಸುದ್ದಿಗಳು ಆಘಾತವನ್ನು ಉಂಟುಮಾಡಿದರೆ, ಇನ್ನೂ ಕೆಲವೊಂದಷ್ಟು ಸುದ್ದಿಗಳು ಗೊಂದಲವನ್ನು ಸೃಷ್ಟಿಸುತ್ತಿವೆ. ಈಗ “ಇಸ್ರೇಲ್ನ ಹೆಲಿಕಾಫ್ಟರ್ವೊಂದು ದಕ್ಷಿಣ ಲೆಬನಾನ್ಗೆ ಪ್ರವೇಶಿಸಿದ್ದು, ಅಲ್ ಖಯಂ ಪ್ರದೇಶದಲ್ಲಿ ಸಾವನ್ನಪ್ಪಿದ ಇಸ್ರೇಲಿ ಸೈನಿಕರನ್ನು ಹೊತ್ತುಯುತ್ತಿದ್ದ ವೇಳೆ ಹೆಲಿಕಾಫ್ಟರ್ ಅನ್ನು ಲೆಬುನಾನ್ ಸೇನೆ ಹೊಡೆದುರುಳಿಸಿದೆ” ಎಂದು ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
🚨🚨 Breaking:
An Israeli helicopter has just been shot down in the #Al-Khiyam area, southern Lebanon, while transporting several dead and wounded soldiers of the Zionist army. pic.twitter.com/oKpHbNGwH4
— Hazur Mia🚨⚡️ (@HazurMia) November 23, 2024
ವೈರಲ್ ಪೋಸ್ಟ್ನಲ್ಲಿ ದಟ್ಟ ಹೊಗೆಯೊಂದಿಗೆ ಕಂಡುಬರುವ ಹೆಲಿಕಾಫ್ಟರ್ ಪತನಗೊಳ್ಳುವ ಅಂಚಿನಲ್ಲಿರುವುದು ಸ್ಪಷ್ಟವಾಗಿದೆ. ಹೀಗಾಗಿ ವೈರಲ್ ಪೋಸ್ಟ್ ನಿಜವೆಂದು ಹಲವರು ಭಾವಿಸಿದ್ದಾರೆ ಮತ್ತು ಲೆಬನಾನ್ ಈ ದಾಳಿಯನ್ನು ಮಾಡಿರುವ ಸಾಧ್ಯತೆ ಹೆಚ್ಚಿರುವ ಕಾರಣ, ಈ ವೈರಲ್ ವಿಡಿಯೋವನ್ನು ಹಲವರು ಪರಿಶೀಲಿಸದೆ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
An Israeli helicopter has just been shot down in the #Al-Khiyam area, southern Lebanon, while transporting several dead and wounded soldiers of the Zionist army. pic.twitter.com/rkaV0qkzxC
— indopacificnews_X (@indonews_X) November 23, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ ಅನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದವು. ಈ ವೇಳೆ 25 ಮಾರ್ಚ್ 2019 ರಂದು ಪ್ರಕಟವಾದ ಅರಬ್ ನ್ಯೂಸ್ನ ವರದಿಯೊಂದು ಕಂಡುಬಂದಿದೆ. ಈ ವರದಿಯಲ್ಲಿ ಗಾಜಾದ ಮೇಲೆ ಇಸ್ರೇಲ್ ಹೆಲಿಕಾಪ್ಟರ್ ದಾಳಿಯನ್ನು ನಡೆಸಿದ್ದು, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ನ ಕಚೇರಿಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು 20 ಮೇ 2019 ರಂದು ಪ್ರಕಟವಾದ ದ ಟೈಮ್ಸ್ ಆಫ್ ಇಸ್ರೇಲ್ ವರದಿಯಲ್ಲಿ “ಈ ತಿಂಗಳ ಆರಂಭದಲ್ಲಿ ಗಾಜಾದಲ್ಲಿ ಇತ್ತೀಚಿನ ಸುತ್ತಿನ ಹೋರಾಟದ ಸಮಯದಲ್ಲಿ ಹಮಾಸ್ ಸೆಲ್ ಇಸ್ರೇಲಿ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲು ಪ್ರಯತ್ನಿಸಿದೆ.” ಎಂಬ ಅಂಶ ಉಲ್ಲೇಖವಾಗಿರುವುದು ಕಂಡುಬಂದಿದೆ

ಇದರ ಜೊತೆಗೆ 25 ಮಾರ್ಚ್ 2019 ರಂದು “ಪ್ಯಾಲೇಸ್ತೀನಿ ಮಾಹಿತಿ ಕೇಂದ್ರ” ಎಂಬ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾದ ಫೋಟೋವೊಂದು ಕಂಡುಬಂದಿದ್ದು, “ಗಾಜಾ ಬಾಂಬ್ ದಾಳಿಗೆ ನಲುಗಿದೆ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಈ ಮೂಲಕ ಇದು ಇಸ್ರೇಲ್ನ ಹೆಲಿಕಾಫ್ಟರ್ ಉಲ್ಲೇಖಿಸಲಾಗಿದೆ. ಈ ಮೂಲಕ ಇದು ಗಾಜಾದ ಮೇಲೆ ನಡೆಸಿರುವ ದಾಳಿ ಎಂಬುದು ಖಚಿತವಾಗಿದೆ.
Gaza under bombardment pic.twitter.com/3UzEjIm2VJ
— المركز الفلسطيني للإعلام (@PalinfoAr) March 25, 2019
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ, ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಹೆಲಿಕಾಫ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು. ವೈರಲ್ ಪೋಸ್ಟ್ ಇಸ್ರೇಲ್ ಹೆಲಿಕಾಫ್ಟರ್ ಹಮಾಸ್ ಮೇಲೆ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಹೈದರಾಬಾದ್ನ ನವಾಬ್ ವಂಶಸ್ಥ ಭಾರತದ ಮುಸಲ್ಮಾನರ ವಿರುದ್ಧ ಮಾತನಾಡಿದ್ದಾರೆ ಎಂಬುದು ಸುಳ್ಳು

