ಪ್ರಸಿದ್ಧ ಗಾಯಕರಾದ ಕೆ.ಜೆ.ಯೇಸುದಾಸ್ ಮತ್ತು ಅವರ ಪತ್ನಿ ಪ್ರಭಾರವರು ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟರ್ ಕುರಿತು ನಿಜವನ್ನು ತಿಳಿದುಕೊಳ್ಳಲು, ವೈರಲ್ ಪೋಸ್ಟರ್‌ನ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2023ರ ಜನವರಿ 11ರಂದು ದಿ ಟೈಮ್ಸ್ ಆಫ್ ಇಂಡಿಯಾದ ಮಲಯಾಳಂ ಆವೃತ್ತಿಯಲ್ಲಿ ಪ್ರಕಟವಾದ ವರದಿಯಲ್ಲಿ ಅದೇ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ವರದಿಯಲ್ಲಿ ಕೆ.ಜೆ.ಯೇಸುದಾಸ್ ಅವರ ಪತ್ನಿ ಪ್ರಭಾ ತಮ್ಮ ಸೊಸೆಯರಿಬ್ಬರೂ ಹಿಂದೂಗಳಾಗಿದ್ದು, ನಮ್ಮ ಪುತ್ರರು ಮದುವೆಯಾದ ನಂತರವೂ ಹಿಂದೂಗಳಾಗಿಯೇ ಉಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಜೆ.ಯೇಸುದಾಸ್ ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿಯಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ.
2016ರಿಂದ ಕೆಲವು ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ, ದೇವಾಲಯದಲ್ಲಿ ಅಂತಿಮ ಪೂಜೆಯ ನಂತರ ಪ್ರತಿದಿನ ಸಂಜೆ ಕೆ.ಜೆ.ಯೇಸುದಾಸ್ ಹಾಡಿರುವ ಹರಿವರಾಸನಂ ಅನ್ನು ಸಾಂಪ್ರದಾಯಿಕವಾಗಿ ನುಡಿಸಲಾಗುತ್ತದೆ. ಆ ನಿರ್ದಿಷ್ಟ ದಿನದಂದು, ಅಧಿಕಾರಿಗಳು ಲೈವ್ ಹಾಡಲು ಯೇಸುದಾಸ್ ಅವರನ್ನು ಆಹ್ವಾನಿಸಿದ್ದರು. ಆದ್ದರಿಂದಾಗಿ, “ಕೆ.ಜೆ. ಯೇಸುದಾಸ್‌ರು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ವಿನಃ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿಲ್ಲ” ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಅವರು ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಇದೇ ರೀತಿಯ ವದಂತಿಗಳು ಈ ಹಿಂದೆಯೂ ಹರಡಿದ್ದವು, ಆದರೆ ಇದನ್ನು ಅವರ ಪತ್ನಿ ಪ್ರಭಾ ಯೇಸುದಾಸ್ ಈ ಹೇಳಿಕೆಯನ್ನು ನಿರಾಕರಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಖ್ಯಾತ ಗಾಯಕರಾದ ಕೆ.ಜೆ.ಯೇಸುದಾಸ್ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದು ಸುಳ್ಳು ಹೇಳಿಕೆಯೊಂದಿಗೆ ಕೂಡಿದೆ.
ಇದನ್ನು ಓದಿ :
Fact Check : ಆರ್ಕ್ಟಿಕ್ ಮಂಜುಗಡ್ಡೆಯಲ್ಲಿ ಬಲೆಗೆ ಸಿಲುಕಿರುವ ಹಿಮಕರಡಿಯ ವಿಡಿಯೋ AIನಿಂದ ರಚಿತವಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.