ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಹಾ ಕುಂಭಮೇಳದ ಕುರಿತು ಅಂತರಾಷ್ಟ್ರೀಯ ಪೈಲಟ್ ವಿಮಾನದಲ್ಲಿ ಪ್ರಕಟಣೆ ಮಾಡುತ್ತಿರುವುದು ಕಂಡು ಬಂದಿದ್ದು, ಕುಂಭಮೇಳದ ವೈಮಾನಿಕ ದೃಶ್ಯಗಳ ಮೂಲಕ ಪ್ಲೇ ಮಾಡಲಾದ ಕ್ಲಿಪ್ನಲ್ಲಿರುವ ಧ್ವನಿಯು ವಿಮಾನವು ಪ್ರಯಾಗರಾಜ್ನಲ್ಲಿ ಇಳಿಯಲಿದೆ ಮತ್ತು ಆಧ್ಯಾತ್ಮಿಕ ಸಂಗಮ್ ಘಾಟ್ ಮೇಲೆ ಹಾರುತ್ತಿದೆ ಎಂದು ಹೇಳುವುದರ ಜೊತೆಗೆ ಕುಂಭಮೇಳದ ವಿಹಂಗಮ ನೋಟದಲ್ಲಿ ಕಂಡು ಬಂಧ ಭಕ್ತಿ ಸೌಂದರ್ಯ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.
Pilot announcement of an international flight before landing at Mahakumbh Nagari Prayagraj…🐚 pic.twitter.com/VQLHvSocgv
— Prof Manoj Kumar Patairiya प्रो मनोज कुमार पटैरिया (@manojpatairiya) January 25, 2025
ವೈರಲ್ ವಿಡಿಯೋ ಕೂಡ ನೋಡಲು ಪೈಲೆಟ್ ಒಬ್ಬರು ವಿಮಾನದಲ್ಲಿ ಪ್ರಕಟಣೆ ಹೊರಡಿಸುತ್ತಿರುವುದು ಕಂಡು ಬಂದಿದ್ದು, ಇದರಲ್ಲಿ ಅವರು ಕುಂಭಮೇಳದ ಸೌಂದರ್ಯವನ್ನು ವರ್ಣಿಸುವುದು ಕೇಳಬಹುದಾಗಿದೆ. ಜೊತೆಗೆ ವಿಡಿಯೋ ಕೂಡ ವಿಮಾನದಿಂದ ಚಿತ್ರಿಸಿದಂತೆ ಕಾಣುತ್ತಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Mahakumbh described by Pilot.. 🙂
MahaKumbh is where faith becomes tangible, and devotion finds its expression.#MahaKumbhMela2025 #Prayagraj #Aviation #avgeeks #Aviator #aviationdaily #Bharat #Pilot pic.twitter.com/jFnT18GKyH
— Mohit Kumar Dwivedi (@MohitKumarDwiv1) January 25, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ವೈರಲ್ ವಿಡಿಯೋವನ್ನು ಹೊಂದಿರುವ Instagram ಪೋಸ್ಟ್ ಒಂದು ನಮಗೆ ಕಂಡು ಬಂದಿದೆ. ಈ ಪೋಸ್ಟ್ನ ಕೆಳಭಾಗದಲ್ಲಿ ಬರೆಯಲಾದ ಬಳಕೆದಾರಹೆಸರು ‘anveshgraphy’ ಎಂದು ಉಲ್ಲೇಖಿಸಿರುವುದು ನಮಗೆ ಕಂಡು ಬಂದಿದೆ.

ಇದರ ಆಧಾರದ ಮೇಲೆ ನಮ್ಮ ತಂಡ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ, ಅನ್ವೇಶ್ ಪಟೇಲ್ ಅವರಿಗೆ ಸೇರಿದ ಅದೇ ಬಳಕೆದಾರ ಹೆಸರು ಹೊಂದಿರುವ Instagram ಖಾತೆಯನ್ನು ನಾವು ಕಂಡುಕೊಂಡಿದ್ದೇವೆ. ಈ ಖಾತೆಯಲ್ಲಿ, ಜನವರಿ 23 ರಿಂದ ಪೋಸ್ಟ್ನಲ್ಲಿ ವೈರಲ್ ವೀಡಿಯೊದ ಹೆಚ್ಚಿನ ರೆಸಲ್ಯೂಶನ್ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆಯು ವೀಡಿಯೊವನ್ನು ಅನ್ವೇಶ್ ಚಿತ್ರೀಕರಿಸಿದ್ದಾರೆ ಮತ್ತು ಧ್ವನಿಮುದ್ರಿಕೆಯು “ಈ ವಿಡಿಯೋದಲ್ಲಿನ ಧ್ವನಿ ಸಂಪೂರ್ಣವಾಗಿ ಮಾನವ ಧ್ವನಿಯಾಗಿದೆ. ಇದರ ಹಕ್ಕು ನನಗೆ ಸೇರಿದ್ದಾಗಿದ್ದು, ನನ್ನ ಅನುಮತಿ ಇಲ್ಲದೆ ಧ್ವನಿಯನ್ನು ಬಳಸಿಕೊಂಡರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು.” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಇಂಡಿಯಾ ಟುಡೆ ಅನ್ವೇಷ್ ಅವರನ್ನು ಸಂಪರ್ಕಿಸಿದ್ದು ವೀಡಿಯೊವನ್ನು ಅವರೇ ಮಾಡಿದ್ದಾರೆ ಮತ್ತು ಧ್ವನಿಮುದ್ರಿಕೆಯನ್ನು ಯುನೈಟೆಡ್ ಸ್ಟೇಟ್ಸ್ನ ಅವರ ಸ್ನೇಹಿತ ಮಾಡಿದ್ದಾರೆ. ಅವರ ಸ್ನೇಹಿತ ಪೈಲೆಟ್ ಅಲ್ಲ ಮತ್ತು ವೀಡಿಯೊಗಾಗಿ ಅನ್ವೇಶ್ ಬರೆದ ಸ್ಕ್ರಿಪ್ಟ್ಗೆ ಧ್ವನಿ ನೀಡಿದ್ದಾರೆ ಎಂದು ಇಂಡಿಯಾ ಟುಡೆಗೆ ಸ್ವತಃ ಅನ್ವೇಷ್ ಅವರೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಡಿಜಿಟಲ್ ಆಗಿ ಎಡಿಟ್ ಮಾಡಿ ನಿರ್ಮಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ವಿಮಾನದಲ್ಲಿ ಪೈಲೆಟ್ ಒಬ್ಬರು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದ ಕುರಿತು ಪ್ರಕಟಣೆ ಹೊರಡಿಸಿದ್ದಾರೆ ಎಂಬ ವೈರಲ್ ವಿಡಿಯೋ ನಿಜವಲ್ಲ. ಅನ್ವೇಷ್ ಎಂಬ ಡಿಜಿಟಲ್ ಕ್ರಿಯೇಟರ್ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಇದಕ್ಕೆ ಅವರ ಅಮೆರಿಕನ್ ಸ್ನೇಹಿತ ಧ್ವನಿ ನೀಡಿದ್ದು, ಆತ ಪೈಲೆಟ್ ಅಲ್ಲ ಎಂಬುದನ್ನು ಕೂಡ ಅನ್ವೇಷ್ ಖಚಿತ ಪಡಿಸಿದ್ದಾರೆ. ಹೀಗಾಗಿ ವೈರಲ್ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : FACT CHECK | ಪ್ರಯಾಗರಾಜ್ನ ಮಹಾಕುಂಭ ಮೇಳದಲ್ಲಿ ನೆರೆದ ಭಾರೀ ಜನಸಮೂಹ ಎಂದು ಅಯೋಧ್ಯೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

