ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲಿ ಹಲವಾರು ಕರಡಿಗಳು ರಸ್ತೆಯಲ್ಲಿ ಮಲಗಿರುವುದನ್ನು ಕಾಣಬಹುದು. ಅಮೆರಿಕದ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ಪ್ರವೇಶದ್ವಾರಗಳನ್ನು ಸಾವಿರಾರು ಗ್ರಿಜ್ಲಿ ಮತ್ತು ಕಪ್ಪು ಕರಡಿಗಳು ನಿಗೂಢವಾಗಿ ರಸ್ತೆಯಲ್ಲಿ ಕಂಡು ಬಂದಿವೆ ಎಂದು ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಚಿತ್ರದಲ್ಲಿ ಕೂಡ ಕರಡಿಗಳ ಗುಂಪು ರಸ್ತೆಯಲ್ಲಿ ಮಲಗಿರುವುದು ಕಂಡು ಬಂದಿದೆ. ಹೀಗಾಗಿ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ವೈರಲ್ ಚಿತ್ರವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಅಮೆರಿಕದಲ್ಲಿ ಇತ್ತೀಚೆಗೆ ಹಲವಿ ರೀತಿಯಾದ ನಿಗೂಢ ಬೆಳವಣಿಗೆಗಳು ಆರಂಭವಾಗಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು AI ಇಮೇಜ್ ಡಿಟೆಕ್ಷನ್ ಪರಿಕರಗಳನ್ನು ಬಳಸಿಕೊಂಡು ಫೋಟೋವನ್ನು ವಿಶ್ಲೇಷಿಸಿದ್ದೇವೆ. ಈ ಫೋಟೋ AI- ರಚಿತವಾಗಿರುವ ಸಾಧ್ಯತೆ 99% ಎಂದು ಹೈವ್ ಮಾಡರೇಶನ್ ವರದಿ ಮಾಡಿದೆ.

ಇನ್ನು ಈ ಚಿತ್ರವು AI- ರಚಿತವಾಗಿರುವ 99% ಸಂಭವನೀಯತೆಯನ್ನು ಸೈಟ್ಇಂಜೈನ್ ತೋರಿಸಿದೆ.ನಾವು Google Lens ಬಳಸಿ ವೈರಲ್ ಚಿತ್ರವನ್ನು ಹುಡುಕಿದಾಗ, 25 ಫೆಬ್ರವರಿ 2025 ರಂದು “Bears World” ಎಂಬ ಫೇಸ್ಬುಕ್ ಪುಟದಲ್ಲಿ ವೈರಲ್ ಫೋಟೋ ಅಪ್ಲೋಡ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಚಿತ್ರವನ್ನು ಆರಂಭದಲ್ಲಿ AI- ರಚಿತ ಎಂದು ಹೇಳುವ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿತ್ತು, ಆದರೆ ಆ ಶೀರ್ಷಿಕೆಯನ್ನು ನಂತರ ತೆಗೆದುಹಾಕಲಾಗಿದೆ ಎಂಬುದು ತಿಳಿದು ಬಂದಿದೆ. ಆದರೆ ಬಹುತೇಕ AI ಫೋಟೋ ಪತ್ತೆ ಹಚ್ಚುವ ವೆಬ್ಸೈಟ್ಗಳು ವೈರಲ್ ಫೋಟೋವನ್ನು AI ನಿಂದ ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅಮೆರಿಕದ ಕಾಡಿನ ಮಧ್ಯಭಾಗದಲ್ಲಿರುವ ರಸ್ತೆಯಲ್ಲಿ ಕರಡಿಗಳ ಗುಂಪು ಕುಳಿತುಕೊಂಡಿವೆ ಎಂಬುದು ಸುಳ್ಳಾಗಿದೆ. ವೈರಲ್ ಫೋಟೋವನ್ನು AI ನಿಂದ ನಿರ್ಮಿಸಲಾಗಿದೆ. ಹಾಗಾಗಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇನ್ನು ಮುಂದೆ ಪ್ರತೀ ATM ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

