ಬೆಂಗಳೂರಿನ ಹೈಕೋರ್ಟ್ ರಸ್ತೆಯಲ್ಲಿರುವ ಮೂರು ಆಭರಣ ಅಂಗಡಿಗಳಿಂದ ಎರಡು ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂಬ ಹೇಳಿಕೆಯೊಂದಿಗೆ ಚಿನ್ನದ ಆಭರಣಗಳಿಂದ ಮಾಡಿದ ಗೂಡಿನಲ್ಲಿ ಎರಡು ಪಕ್ಷಿಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ವಿವಿಧ ಬರಹಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ
These birds stole more than a kilogram of gold from three jewellery shops to build their nest in Bengaluru High court road. As they could recover this gold only after the birds are hatched, these jewellery shop owners tightened security near this tree. pic.twitter.com/61k7fJf5Lf
— ࿗ Pranav Anand Iyer ࿗ 🕉️ (@pranavanandm) April 6, 2025
ವೈರಲ್ ವಿಡಿಯೋ ಕೂಡ ನಿಜವಾದ ವಿಡಿಯೋವಿನಂತೆ ಭಾಸವಾಗುತ್ತಿರುವುದರಿಂದ, ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಕೆಲವರು ಈ ಪಕ್ಷಿಗಳಿಗೆ ಯಾರೋ ತರಬೇತಿಯನ್ನು ನೀಡಿದ್ದಾರೆ ಎಂಬ ಬರಹಗಳನ್ನು ಕೂಡ ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ @surendra_garhwal ಎಂಬ instagram ಖಾತೆಯಿಂದ ಅಪ್ಲೋಡ್ ಮಾಡಲಾದ ರೀಲ್ ಒಂದು ಕಂಡು ಬಂದಿದೆ. ಈ ವಿಡಿಯೋವನ್ನು 1 ಏಪ್ರಿಲ್ 2025 ರಂದು ಪೋಸ್ಟ್ ಮಾಡಲಾಗಿದೆ. ಈ instagram ಖಾತೆಯಲ್ಲಿ ಬಳಕೆದಾರರು ತಮ್ಮನ್ನು ತಾವು ಡಿಜಿಟಲ್ ವಿಡಿಯೋ ನಿರ್ಮಾಣಗಾರ ಮತ್ತು ಕಲಾ ಉತ್ಸಾಹಿ ಎಂದು ಬರೆದುಕೊಂಡಿದ್ದಾರೆ

ಹೀಗಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ ಗಳನ್ನು ಬಳಸಿಕೊಂಡು AI ಚಿತ್ರ ಮತ್ತು ವಿಡಿಯೋಗಳನ್ನು ಪತ್ತೆ ಹಚ್ಚುವ ಸಾಧನವಾದ ಹೈವ್ ಮಾಡರೇಷನ್ ಟೂಲ್ ಅನ್ನು ಬಳಸಿಕೊಂಡು ವೈರಲ್ ವಿಡಿಯೋವನ್ನು ಪರಿಶೀಲನೆ ನಡೆಸಿದವು. ಈ ವೇಳೆ ನಮಗೆ ಇದು AIನಿಂದ ನಿರ್ಮಿಸಿರುವ ಸಾಧ್ಯತೆ ಇದೆ ಎಂಬುದನ್ನು ಖಚಿತಪಡಿಸಿದೆ. ಈ ಮೂಲಕ ವೈರಲ್ ವಿಡಿಯೋ ಸಂಪೂರ್ಣವಾಗಿ AI ನಿದ ನಿರ್ಮಿಸಲಾಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ

ಹೀಗಾಗಿ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಾವು ಸುರೇಂದ್ರ ಗರ್ವಾಲ್ ಅವರ instagram ಖಾತೆಯನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ಅವರು ಹಲವಾರು ಇತರ ಎಐ ರಚಿತ ವಿಡಿಯೋಗಳನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ ಅವೆಲ್ಲವೂ ಹೆಚ್ಚು ವಾಸ್ತವಿಕ ಮತ್ತು ಅದ್ಭುತವಾಗಿ ರಚಿಸಲ್ಪಟ್ಟಿದೆ ಹೀಗಾಗಿ ಮೂಲ ವಿಡಿಯೋ ಇಲ್ಲಿಯವರೆಗೆ 8.7 ಮಿಲಿಯನ್ ವೀಕ್ಷಣೆಗಳು ಮತ್ತು ಒಂದು ಪಾಯಿಂಟ್ ಎರಡು ನಾಲ್ಕು ಲಕ್ಷಗಳನ್ನು ಗಳಿಸಿಕೊಂಡಿದೆ

ಒಟ್ಟಾರೆಯಾಗಿ ಹೇಳುವುದಾದರೆ ಬೆಂಗಳೂರಿನಲ್ಲಿ ಪಕ್ಷಿಗಳು ಕದ್ದ ಚಿನ್ನಾಭರಣಗಳಿಂದ ಗೂಡನ್ನು ಕಟ್ಟಿಕೊಂಡಿವೆ ಎಂಬುದು ಸಂಪೂರ್ಣವಾಗಿ ಸುಳ್ಳು ಕಥೆಯಾಗಿದೆ. ವೈರಲ್ ವಿಡಿಯೋ AI ನಿಂದ ನಿರ್ಮಿಸಲಾಗಿದೆ ಹೀಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
Fact Check | ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ಎಂದು 2022ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

