ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಏಲಿಯನ್ಸ್ ( ಅನ್ಯಗ್ರಹ ಜೀವಿಗಳು ) ಕಥೆಗಳಿಗೆ ಮತ್ತೊಮ್ಮೆ ಜೀವ ಬಂದಿದೆ. ಕಳೆದ ಹಲವು ದಶಕಗಳಿಂದ ಏಲಿಯನ್ಸ್ಗಳು ಮಾನವನನ್ನು ಭೇಟಿ ಮಾಡುತ್ತಿವೆ. ಅವು ನಮಗಿಂತ ಬುದ್ದಿವಂತ ಜೀವಿಗಳು, ಅವುಗಳ ಸಂಪರ್ಕ ಅಮೆರಿಕ ಸೇರಿದಂತೆ ಜಗತ್ತಿನ ಹಲವು ನಾಯಕರಿಗೆ ಇದೆ. ಅದನ್ನು ರಹಸ್ಯವಾಗಿ ಇಡಲಾಗಿದೆ ಎಂದೆಲ್ಲ ಹೇಳಿಕೊಂಡು ಬರಲಾಗುತ್ತಿದೆ. ಇದರ ನಡುವೆ ಹಲವು ಮಂದಿ ಕೆಲವೆ ದಿನಗಳಲ್ಲಿ ಏಲಿಯನ್ಗಳು ಭೂಮಿಗೆ ಬರಲಿದೆ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವರು ಏಲಿಯನ್ಗಳು ಭಾರತಕ್ಕೆ ಭೇಟಿ ನೀಡಿವೆ. ಭಾರತದ ರಾಜಸ್ತಾನದಲ್ಲಿ UFO ಗಳು ಲ್ಯಾಂಡ್ ಆಗಿವೆ ಎಂದು ಬರೆದುಕೊಳ್ಳುತ್ತಿದ್ದಾರೆ.
https://twitter.com/JoJoBlock_/status/1876560066192814537
ಈ ಪೋಸ್ಟ್ಗಳಲ್ಲಿನ ವಿಡಿಯೋಗಳನ್ನು ನೋಡಿದ ಹಲವು ಮಂದಿ ವೈರಲ್ ಪೊಸ್ಟ್ ಅನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಇದೆಲ್ಲ ಸುಳ್ಳು ಬೇರೆ ದೇಶದ ವಿಡಿಯೋಗಳನ್ನು ಹಂಚಿಕೊಂಡು ಇದು ಭಾರತದ್ದು ಎಂದು ಪ್ರತಿಪಾದಿಸಲಾಗುತ್ತಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ಹಲವಾರು ಅಭಿಪ್ರಾಯಗಳು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೇಳಿ ಬರುತ್ತಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/Varrsha2/status/1875878255489933800
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಆದರೆ ವೈರಲ್ ವಿಡಿಯೋ ಕುರಿತು ಯಾವುದೇ ರೀತಿಯಾದ ಅಧಿಕೃತ ಮಾಹಿತಿಗಳು ನಮಗೆ ಲಭ್ಯವಾಗಿಲ್ಲ. ಜೊತೆಗೆ ಏಲಿಯನ್ಗಳು ಭಾರತ ಪ್ರವೇಶಿಸಿದಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯಾದ ಅಧಿಕೃತ ಮಾಧ್ಯಮ ವರದಿಗಳು ಕೂಡ ಕಂಡು ಬಂದಿಲ್ಲ.

ಹೀಗಾಗಿ ನಾವು ವೈರಲ್ ವಿಡಿಯೋವನ್ನು AI ವಿಡಿಯೋ ಪತ್ತೆ ಹಚ್ಚುವ ವೆಬ್ಸೈಟ್ ಆದ ಟ್ರು ಮಿಡಿಯಾದಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ವಿಡಿಯೋವಿನ ದೃಶ್ಯಾವಳಿಗಳು ಕೃತಕವಾಗಿ ನಿರ್ಮಿಸಿದಂತೆ ಕಂಡು ಬಂದಿದೆ. ಇದು ಮೂಲ ವಿಡಿಯೋದಂತೆ ಕಂಡು ಬಂದಿಲ್ಲ. ಹಾಗೆಯೇ ಧ್ವನಿ ಕೂಡ ನಕಲಿಯಾಗಿ ಸೃಷ್ಟಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು AI ನಿಂದ ನಿರ್ಮಿಸಿರುವುದು ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ AI ರಚಿಸಿದ ಮತ್ತು ಸಂಬಂಧವಿಲ್ಲದ ವೀಡಿಯೊಗಳನ್ನು ಬಳಸಿಕೊಂಡು ಭಾರತಕ್ಕೆ ಏಲಿಯನ್ಗಳು ಪ್ರವೇಶಿಸಿವೆ ಎಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿವೆ. ಏಲಿಯನ್ ಭಾರತಕ್ಕೆ ಪ್ರವೇಶಿಸಿವೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ. ಹಾಗೆಯೇ ವೈರಲ್ ವಿಡಿಯೋ ಕೂಡ ನಿಜವಲ್ಲ. ಹಾಗಾಗಿ ಯಾವುದೇ ಕಾರಣಕ್ಕು ವೈರಲ್ ಪೋಸ್ಟ್ ಅನ್ನು ಶೇರ್ ಮಾಡಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಅಮೇರಿಕದ ಪೊಲೀಸರು ಮೊಹಮ್ಮದ್ ಅಲ್ತಮಿಶ್ ಎಂಬ ತೀವ್ರಗಾಮಿ ಇಸ್ಲಾಮಿಸ್ಟ್ ಅನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

