ಅಮೆರಿಕದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡ್ಗಿಚ್ಚುಗಳಿಂದ ಧ್ವಂಸಗೊಂಡ ಪ್ರದೇಶಗಳಲ್ಲಿ ಬ್ಲೋಟಾರ್ಚ್ ಅನ್ನು ಹೊತ್ತಿಸಲು ಪ್ರಯತ್ನಿಸಿ ಹಿಂದೂ ವ್ಯಕ್ತಿ ಭುವೇಶ್ ಪಟೇಲ್ ಎಂಬಾತ ಸಿಕ್ಕಿ ಬಿದ್ದಿದ್ದಾನೆ ಆತನನ್ನು ಈಗ ಪೊಲೀಸರು ಬಂಧಿಸಿ ವಿಚಾರಿಸುತ್ತಿದ್ದಾರೆ. ಈಗ ಕಾಡ್ಗಿಚ್ಚು ಹೆಚ್ಚಾಗಲು ಮೂಲ ಕಾರಣ ಯಾರಿರಬಹುದು ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ ಎಂದು ಹಿಂದೂ ಸಮುದಾಯದ ಮೇಲೆ ಅನುಮಾನ ಬರುವಂತೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬನನ್ನು ಬಂಧಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಹಲವರು ಹಿಂದೂ ಸಮುದಾಯದ ಜನರನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜನವರಿ 10, 2024 ರಂದು Instagram ನಲ್ಲಿ ಪೋಸ್ಟ್ ಮಾಡಲಾದ ಮೂಲ ಕ್ಲಿಪ್ ಕಂಡುಹಿಡಿದಿದೆ. ಮೂಲ ವೀಡಿಯೊದ ಪ್ರಕಾರ, ಬ್ಲೋಟಾರ್ಚ್ ಅನ್ನು ಹೊತ್ತಿಸಲು ಪ್ರಯತ್ನಿಸುತ್ತಿರುವಾಗ ಸ್ಥಳೀಯ ನಿವಾಸಿಗಳು ಒಬ್ಬ ವ್ಯಕ್ತಿಯನ್ನು ತಡೆದರು ಎಂದು ಉಲ್ಲೇಖವಾಗಿದೆ. ಆದರೆ ಈ ಮೂಲ ಪೋಸ್ಟ್ನಲ್ಲಿ ಬ್ಲೋಟಾರ್ಚ್ ಹಚ್ಚಲು ಯತ್ನಿಸಿದ ವ್ಯಕ್ತಿ ಧರ್ಮ, ಹೆಸರು ಅಥವಾ ಜನಾಂಗದ ಬಗ್ಗೆ ಉಲ್ಲೇಖವಿಲ್ಲ.

ಹೀಗಾಗಿ ಇದರ ಆಧಾರದ ಮೇಲೆ ನಾವು ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಾವು ನ್ಯೂಸ್ವೀಕ್ನ ವರದಿಯನ್ನು ಜನವರಿ 14, 2024 ರಂದು ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ. ಈ ವರದಿಯ ಪ್ರಕಾರ , ವಲಸೆ ಅಧಿಕಾರಿಗಳು ವೀಡಿಯೊದಲ್ಲಿರುವ ವ್ಯಕ್ತಿ ಮೆಕ್ಸಿಕನ್ ಪ್ರಜೆ ಜುವಾನ್ ಮ್ಯಾನುಯೆಲ್ ಸಿಯೆರಾ ಎಂದು ದೃಢಪಡಿಸಿದರು, ಅವರು ಅಕ್ರಮವಾಗಿ ಯುಎಸ್ ಪ್ರವೇಶಿಸಿದ್ದಾನೆ. ಕೆನ್ನೆತ್ ಫೈರ್ನ ಸಮೀಪವಿರುವ ವುಡ್ಲ್ಯಾಂಡ್ ಹಿಲ್ಸ್ನಲ್ಲಿ ಬೆಂಕಿ ಹಚ್ಚಲು ಈ ವ್ಯಕ್ತಿ ಪ್ರಯತ್ನಿಸುತ್ತಿದ್ದನೆಂದು ಶಂಕಿಸಲಾಗಿದೆ ಮತ್ತು ಬ್ಲೋಟೋರ್ಚ್ ಅನ್ನು ಈತನೇ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅಮೆರಿಕದಲ್ಲಿ ವಿವಿಧೆಡೆ ಬೆಂಕಿ ಹಚ್ಚಲು ಯತ್ನಿಸಿದ ಹಿಂದೂ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂದಿದ್ದಾರೆ ಎಂಬುದು ಸುಳ್ಳು ಅನ್ನೋದು ಸ್ಪಷ್ಟವಾಗಿದೆ. ಬಂಧಿತ ವ್ಯಕ್ತಿಯ ಹೆಸರು ಜುವಾನ್ ಮ್ಯಾನುಯೆಲ್ ಸಿಯೆರಾ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈತ ಮೆಕ್ಸಿಕನ್ ಪ್ರಜೆ ಎಂಬುದನ್ನು ಕೂಡ ಖಚಿತ ಪಡಿಸಿದ್ದಾರೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಒಳಚರಂಡಿಯನ್ನು ಸ್ವಚ್ಛಗೊಳಿಸುವ ಭಾರತದ ರೋಬೋಟಿಕ್ ಯಂತ್ರವನ್ನು ಚೀನಾ ದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

