ದೆಹಲಿಯಲ್ಲಿ ಆಪ್ ಸರ್ಕಾರವನ್ನು ಗುರಿಯಾಗಿಸಿ ಹಲವು ಸುಳ್ಳು ಸುದ್ದಿಗಳನ್ನು ಹರಡಿದ ಕುಖ್ಯಾತಿ ಪಡೆದಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತೊಮ್ಮ ಮುಖಭಂಗಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಮಾಳವೀಯ ಹಂಚಿಕೊಂಡಿರುವ ರಸ್ತೆಯ ಫೋಟೋವೊಂದು ಫ್ಯಾಕ್ಟ್ಚೆಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಪಾದಕ ಮುಹಮ್ಮದ್ ಝುಬೇರ್ ಹಂಚಿಕೊಂಡ ಬಳಿಕ ವೈರಲ್ ಆಗಿದೆ. ಮುಹಮ್ಮದ್ ಝುಬೇರ್ ಹಂಚಿಕೊಂಡಿರುವ ಅಮಿತ್ ಮಾಳವೀಯ ಹಂಚಿಕೊಂಡಿರುವ ದೆಹಲಿ ಬಿಜೆಪಿ ಪೋಸ್ಟರ್ನ ಚಿತ್ರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿ “ಚೆನ್ನಾಗಿ ಎಡಿಟ್ ಮಾಡಿದ್ದೀರಿ@amitmalviya” ಎಂದು ಕಾಲೆಳೆದಿದ್ದರು.
थोड़ी सी बारिश के बाद। pic.twitter.com/8MrW39jxtw
— Amit Malviya (@amitmalviya) December 28, 2024
ಅಮಿತ್ ಮಾಳವೀಯ ಹಂಚಿಕೊಂಡಿರುವ ಬಿಜೆಪಿ ಪೋಸ್ಟರ್ನಲ್ಲಿ ರಸ್ತೆಯು ಗುಂಡಿಗಳಿಂದ ತುಂಬಿರುವುದು ಮತ್ತು ಅವುಗಳನ್ನು ತಪ್ಪಿಸಲು ಹರಸಾಹಸ ನಡೆಸುತ್ತಿರುವ ಬೈಕ್ ಸವಾರನಿರುವ ಫೋಟೋವೊಂದಿದೆ. ಈ ಪೋಸ್ಟರ್ನಲ್ಲಿ “ಆಪ್ ಸರ್ಕಾರದ ಸುಳ್ಳು – ಲಂಡನ್ ಪ್ಯಾರಿಸ್ ನಂತಹ ರಸ್ತೆಗಳ ನಿರ್ಮಾಣ ದೆಹಲಿಯ ಸತ್ಯ: ರಸ್ತೆಯಿಡೀ ಗುಂಡಿಗಳು. ನಾವಿನ್ನು ಸಹಿಸುವುದಿಲ್ಲ ಬದಲಾಯಿಸಿಯೇ ತೀರುತ್ತೇವೆ” ಎಂಬ ಸಂದೇಶವಿದೆ. ಈ ಪೋಸ್ಟರ್ನ ಮೇಲೆ “ಸ್ವಲ್ಪ ಮಳೆಯ ನಂತರ ದೆಹಲಿಯ ಪರಿಸ್ಥಿತಿ” ಎಂಬ ಶೀರ್ಷಿಕೆಯನ್ನು ಅಮಿತ್ ಮಾಳವೀಯ ನೀಡಿದ್ದಾರೆ.
ಫ್ಯಾಕ್ಟ್ಚೆಕ್
ಅಮಿತ್ ಮಾಳವೀಯ ಹಂಚಿಕೊಂಡಿರುವ ರಸ್ತೆಯ ಫೋಟೋ ಎಡಿಟೆಡ್ ಆಗಿದೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಖಚಿತಪಡಿಸಿದೆ. ಈ ಬಗ್ಗೆ ಫ್ಯಾಕ್ಟ್ಚೆಕರ್, ಆಲ್ಟ್ ನ್ಯೂಸ್ ಸಹಸಂಪಾದಕ ಮಹಮ್ಮದ್ ಝುಬೇರ್, ಅಮಿತ್ ಮಾಳವೀಯರನ್ನು ಟ್ಯಾಗ್ ಮಾಡಿ “ಚೆನ್ನಾಗಿ ಎಡಿಟ್ ಮಾಡಿದ್ದೀರಿ” ಎಂದು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಒಂದು ಕಡೆ ಅಮಿತ್ ಮಾಳವೀಯ ಹಂಚಿಕೊಂಡಿರುವ ಬಿಜೆಪಿ ಪೋಸ್ಟ್ರ್ ಹಾಗೂ ಮತ್ತೊಂದು ಕಡೆ ಮುಖ್ಯಮಂತ್ರಿ ಅತಿಶಿಯವರು ದೆಹಲಿಯಲ್ಲಿ ರಸ್ತೆಗಳ ಪರಿಸ್ಥಿತಿಯ ಬಗ್ಗೆ ಇತರೆ ಸಚಿವರು ಮತ್ತು ಪಿಡಬ್ಯೂಡಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿರುವ ವರದಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
Wow! Nice editing skills @amitmalviya 👏🏽👏🏽 pic.twitter.com/5FMTUMOXlO
— Mohammed Zubair (@zoo_bear) December 28, 2024
ಅಧಿಕಾರಿಗಳ ಜೊತೆ ರಸ್ತೆಯ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿರುವ ವರದಿಯು ಸೆಪ್ಟೆಂಬರ್ 30ರಂದು ಪ್ರಕಟವಾಗಿದ್ದು ” NSIC ಕಾಂಪ್ಲೆಕ್ಸ್ ಹತ್ತಿರ ರಸ್ತೆಯ ಸ್ಥಿತಿಯನ್ನು ಅತಿಶಿಯವರು ಪರಿಶೀಲನೆ ನಡೆಸಿದ್ದಾರೆ ಹಾಗೂ ಕಲ್ಕಾಜಿಯಲ್ಲಿ ಔಟರ್ ರಿಂಗ್ ರಸ್ತೆಯನ್ನು ಪರಿಶೀಲನೆ ನಡೆಸಿದ್ದಾಗಿಯೂ ಹಾನಿಗೊಳಗಾದ ರಸ್ತೆಗಳನ್ನು ದೀಪಾವಳಿಗೂ ಮುನ್ನ ಗುಂಡಿ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿಯಲ್ಲಿದೆ” ಈ ವರದಿಯಲ್ಲಿ ಗೆಟ್ಟಿಇಮೇಜಸ್ನ ಚಿತ್ರವನ್ನು ಬಳಸಲಾಗಿದ್ದು, ದೆಹಲಿ ಬಿಜೆಪಿ ಪೋಸ್ಟರ್ನಲ್ಲಿ ಇದೇ ಫೋಟೋವನ್ನು ಎಡಿಟ್ ಮಾಡಿ ಬಳಸಿರುವುದನ್ನು ಕಾಣಬಹುದು.

ಗೆಟ್ಟಿ ಇಮೇಜಸ್ ಚಿತ್ರದಲ್ಲಿ ರಸ್ತೆಯು ಅಲ್ಪಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಬೈಕ್ ಸವಾರನು ಚಲಿಸುತ್ತಿರುವುದನ್ನು ಕಾಣಬಹುದು. ಆದರೆ ಬಿಜೆಪಿ ಹಂಚಿಕೊಂಡಿರುವ ಚಿತ್ರದಲ್ಲಿ ಇದೇ ಫೋಟೋವನ್ನು ಎಡಿಟ್ ಮಾಡಿ ರಸ್ತೆಯನ್ನು ಗುಂಡಿಮಯ ಗೊಳಿಸಿರುವುದನ್ನು ಕಾಣಬಹುದು.
This was tweeted by @BJP4Delhi too. But deleted now.
Archive link : https://t.co/s1cVxOsGL6 pic.twitter.com/o2403YkFr0— Mohammed Zubair (@zoo_bear) December 28, 2024
ಸತ್ಯವನ್ನು ಹಂಚಿಕೊಂಡು ಬಹಿರಂಗಗೊಳಿಸಿದ ಬಳಿಕ ಈ ಪೋಸ್ಟನ್ನು ದೆಹಲಿ ಬಿಜೆಪಿ ಡಿಲೀಟ್ ಮಾಡಿದೆ ಎಂದು ಮುಹಮ್ಮದ್ ಝುಬೇರ್ ಮತ್ತೊಂದು ಟ್ವೀಟ್ನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋ ಎಡಿಟೆಡ್ ಆಗಿದ್ದು, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತೊಮ್ಮೆ ಸುಳ್ಳು ಹರಡಿರುವುದು ಬಹಿರಂಗವಾಗಿದೆ.
