ಪುರುಷರ ಗುಂಪೊಂದು ಕಟ್ಟಡದ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವುದನ್ನು ತೋರಿಸುವ ಮತ್ತು ಸೈರಲ್ ಶಬ್ದಗಳು ಹಿನ್ನಲೆಯಲ್ಲಿ ಕೇಳಿಸುವ 20 ಸೆಕೆಂಡುಗಳ ವಿಡಿಯೋವನ್ನು ಕ್ರಿಸ್ಮಸ್ ದಿನದಂದು ಬೆಥ್ಲೆಹೆಮ್ನ ಚರ್ಚ್ ಮೇಲೆ ಮುಸ್ಲಿಂ ಗುಂಪು ದಾಳಿ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ವಿಡಿಯೋವನ್ನು ಹಂಚಿಕೊಳ್ಳುವವರು ಆರೋಪಿಸಿದ್ದಾರೆ. ಪಶ್ಚಿಮ ದಂಡೆಯಲ್ಲಿರುವ ಬೆಥ್ ಲೆಹೆಮ್ ಯೇಸು ಕ್ರಿಸ್ತನ ಜನ್ಮಸ್ಥಳವೆಂದು ನಂಬಲಾಗಿದೆ.
“ಬೆಥ್ಲೆಹೆಮ್ ಚರ್ಚ್ ಮೇಲೆ ದಾಳಿ: ಕ್ರಿಸ್ಮಸ್ ಸಮಯದಲ್ಲಿ ಮುಸ್ಲಿಮರು ಪವಿತ್ರ ಸ್ಥಳವನ್ನು ಕಲ್ಲುಗಳು ಮತ್ತು ಗುಂಡಿನ ದಾಳಿಯಿಂದ ಗುರಿಯಾಗಿಸಿದ್ದಾರೆ” ಎಂದು ಅನೇಕ ಎಕ್ಸ್ ಮತ್ತು ಫೇಸ್ಬುಕ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ವಿಡಿಯೋ ಹಂಚಿಕೊಂಡಿರುವ ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ಈ ದಾಳಿ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ನಾವು “ಬೆಥ್ ಲೆಹೆಮ್”, “ಕ್ರಿಸ್ ಮಸ್” ಮತ್ತು “ದಾಳಿ” ಕೀವರ್ಡ್ಗಳನ್ನು ಬಳಸಿ ನಾವು ಹುಡುಕಾಟ ನಡೆಸಿದಾಗ, ಅಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಆದಾಗ್ಯೂ, ಗಾಝಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಬೆಥ್ ಲೆಹೆಮ್ ನಲ್ಲಿ ಕ್ರಿಸ್ ಮಸ್ ಆಚರಿಸಲಾಯಿತು ಎಂದು ವರದಿಗಳು ತಿಳಿಸಿವೆ.
ನಂತರ ನಾವು ಗೂಗಲ್ ಲೆನ್ಸ್ನಲ್ಲಿ ವೈರಲ್ ವಿಡಿಯೋ ಕೀಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಅಕ್ಟೋಬರ್ 31, 2022 ರ @AviKaner ರ ಎಕ್ಸ್ ಪೋಸ್ಟ್ ನಲ್ಲಿ ಅದೇ ವಿಡಿಯೋ ಲಭ್ಯವಾಗಿದೆ. ಆದರೆ “ಬೆಥ್ಲೆಹೆಮ್ನ ಚರ್ಚಿನಲ್ಲಿ ಕ್ರಿಸ್ಮಸ್ಗಾಗಿ ಪೂರ್ವಾಭ್ಯಾಸ ಮಾಡುತ್ತಿದ್ದಾಗ ಫೆಲೆಸ್ತೀನ್ ಜನಸಮೂಹವು ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸಿದೆ” ಎಂದು ಹೇಳಿದೆ.

ವೈರಲ್ ವಿಡಿಯೋವಿನ ಸ್ಕ್ರೀನ್ಗ್ರಾಫ್ ಅನ್ನು ಹಂಚಿಕೊಂಡು, ಅಕ್ಟೋಬರ್ 2022 ರ ಆಲ್ ಅರಬ್ ನ್ಯೂಸ್ನ ವರದಿಯು ಬೆಥ್ಲೆಹೆಮ್ ದಕ್ಷಿಣದ ಉಪನಗರವಾದ ಬೀಟ್ ಸಹೌರ್ನಲ್ಲಿರುವ ಚರ್ಚ್ ಮೇಲೆ ಮುಸ್ಲಿಂ ಪುರುಷರು ದಾಳಿ ಮಾಡಿದ್ದಾರೆ ಎಂದು ಹೇಳಿದೆ.
“ಕೆಲವು ಯುವಕರ ನಡುವಿನ ಜಗಳದ ನಂತರ ಬೀಟ್ ಸಹೌರ್ನಲ್ಲಿರುವ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಆಫ್ ದಿ ಫಾದರ್ಸ್ ಮೇಲೆ ದುಷ್ಕರ್ಮಿಗಳ ಗುಂಪು ಕಳೆದ ರಾತ್ರಿ ನಡೆಸಿದ ದಾಳಿಯಲ್ಲಿ ಏನಾಯಿತು ಎಂಬುದನ್ನು ನೋಡುವುದು ತುಂಬಾ ದುರದೃಷ್ಟಕರ ಮತ್ತು ಕೋಪಕಾರಿಯಾಗಿದೆ” ಎಂದು ಹೋಲಿ ಲ್ಯಾಂಡ್ನ ಕ್ಯಾಥೊಲಿಕ್ ಬಿಷಪ್ಗಳ ವಕ್ತಾರ ವಾಡಿ ಅಬುನಾಸ್ಸರ್ ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 29, 2022 ರ ಘಟನೆಯ ಬಗ್ಗೆ ಜೆರುಸಲೇಮ್ ಪೋಸ್ಟ್ ವರದಿಯಲ್ಲಿ, “ಚರ್ಚ್ ನಾಯಕರು ಶನಿವಾರ ಬೆಥ್ಲೆಹೆಮ್ ಬಳಿಯ ಬೀಟ್ ಸಾಹುರ್ನಲ್ಲಿರುವ ಆರ್ಥೊಡಾಕ್ಸ್ ಚರ್ಚ್ ಮೇಲೆ ನಡೆದ ದಾಳಿಯನ್ನು ಖಂಡಿಸಿದರು ಮತ್ತು ದಾಳಿಕೋರರನ್ನು ವಿಚಾರಣೆಗೆ ಒಳಪಡಿಸುವಂತೆ ಫೆಲೆಸ್ತೀನ್ ಪ್ರಾಧಿಕಾರಕ್ಕೆ ಕರೆ ನೀಡಿದರು. ಶುಕ್ರವಾರ ರಾತ್ರಿ ನಡೆದ ದಾಳಿಯ ಸಮಯದಲ್ಲಿ, ಡಜನ್ಗಟ್ಟಲೆ ಮುಸ್ಲಿಂ ಪುರುಷರು ಚರ್ಚ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಕೆಲವು ಯುವಕರ ನಡುವಿನ ಜಗಳದ ನಂತರ ಈ ದಾಳಿ ನಡೆದಿದೆ ಎಂದು ಚರ್ಚ್ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಅನೇಕ ವೆಬ್ಸೈಟ್ಗಳು, ಇಲ್ಲಿ ಮತ್ತು ಇಲ್ಲಿ ಅಕ್ಟೋಬರ್ 2022 ರಲ್ಲಿ ನಡೆದ ದಾಳಿಯ ಬಗ್ಗೆ ವರದಿ ಮಾಡಿದೆ.
ಆದ್ದರಿಂದ, ಕ್ರಿಸ್ಮಸ್ ದಿನದಂದು ಬೆಥ್ಲೆಹೆಮ್ ಚರ್ಚ್ ಮೇಲೆ ದಾಳಿ ನಡೆದಿದೆ ಎಂದು ಹೇಳಲು ಅಕ್ಟೋಬರ್ 2022 ರ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

