ಗೃಹ ಮಂತ್ರಿ ಅಮಿತ್ ಶಾ ಅವರು ಡಾ. ಬಿ. ಆರ್ ಅಂಬೇಡ್ಕರ್ ಅವರ ಕುರಿತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂಡಿಯಾ ಒಕ್ಕುಟ ಸೇರಿದಂತೆ ದೇಶದ ಹಲವು ಸಂಘಟನೆಗಳು ಗೃಹಮಂತ್ರಿಗಳು ದೇಶದ ಜನರನ್ನು ಕ್ಷಮೆ ಕೋರಿ, ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಕೂಟ ಬಣದ ಹಲವಾರು ಸಂಸದರು ಗುರುವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಸಂಸತ್ತಿನ ಮಕರ ದ್ವಾರದ ಮುಂದೆ ಪ್ರತಿಭಟನಾನಿರತ ವಿಪಕ್ಷಗಳು ಮತ್ತು ಬಿಜೆಪಿ ಸಂಸದರು ಮುಖಾಮುಖಿಯಾದಾಗ ತಳ್ಳಾಟ ನಡೆದಿದೆ.
ಇಂದು ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ವಿಡಿಯೋ ವೈರಲ್ ಆಗುತ್ತಿದ್ದು ರಾಹುಲ್ ಗಾಂಧಿಯವರು ನನ್ನನ್ನು ತಳ್ಳಿದ ಪರಿಣಾಮ ಬಿದ್ದು ತಲೆಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಬೆಂಬಲಿಗರು ಈ ವಿಡಿಯೋ ಹಂಚಿಕೊಂಡು ರಾಹುಲ್ ಗಾಂಧಿ ವೃದ್ಧ ಸಂಸದರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ಪಿಟಿಐ ಅವರ ವಿಡಿಯೋ ಸಹ ವೈರಲ್ ಆಗಿದ್ದು ಇದರಲ್ಲಿ, ಘಟನೆಯ ನಂತರ ರಾಹುಲ್ ಸಾರಂಗಿ ಅವರ ಸ್ಥಿತಿಯ ಬಗ್ಗೆ ವಿಚಾರಿಸಲು ಬಂದಾಗ ಬಿಜೆಪಿ ಸಂಸದರು ಕೋಪದಿಂದ ಪ್ರತಿಕ್ರಿಯಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ” ಶರ್ಮ್ ನಹೀ ಆತಿ ಹೈ ರಾಹುಲ್? ಗುಂಡಗರ್ಡಿ ಕಾರ್ತೆ ಹೋ… ಗಿರಾ ದಿಯಾ ಧಕ್ಕಾ ದೇಕರ್ (ರಾಹುಲ್, ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ಗೂಂಡಾಗಿರಿ ಮಾಡುತ್ತೀರಿ… ಮುದುಕನನ್ನು ಕೆಳಕ್ಕೆ ತಳ್ಳಿದೆ” ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ರಾಹುಲ್ ಗಾಂಧಿಗೆ ಹೇಳಿದರು.

ಫ್ಯಾಕ್ಟ್ ಚೆಕ್:
ಈ ಆರೋಪಕ್ಕೆ ಪ್ರತಿಕ್ರಯಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಾನು ಯಾರನ್ನೂ ತಳ್ಳಿಲ್ಲ ಮತ್ತು ಹೊರನಡೆಯುವ ಮೊದಲು ಇದಕ್ಕೆ ವಿರುದ್ಧವಾಗಿ ಸಂಭವಿಸಿದೆ ಎಂದು ಹೇಳಿದ್ದಾರೆ. “ಇದನ್ನು ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿರಬಹುದು. ಬಿಜೆಪಿ ಸಂಸದರು ನಮ್ಮನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆಯುತ್ತಿದ್ದರು. ಅವರು ನಮ್ಮನ್ನು ತಡೆದರು ಮತ್ತು ಬೆದರಿಕೆ ಹಾಕಿದರು. ಪ್ರತಿಭಟಿಸುವುದು ನಮ್ಮ ಹಕ್ಕು” ಎಂದು ರಾಹುಲ್ ಹೇಳಿದರು.

ಸದನದೊಳಗೆ ಹೋಗಲು ಬಿಡದೆ, ತಮ್ಮನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರೆ, ಅವರೇ ಬಿಜೆಪಿ ಸಂಸದರನ್ನು ತಳ್ಳಿದರೆಂದು ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಆರೋಪಿಸಿದ್ದಾರೆ. ಆ ಬಳಿಕ, ರಾಹುಲ್ ಅವರು ನಮ್ಮ ಮುಂದಿದ್ದರು. ತಳ್ಳಾಟ ನಮ್ಮ ಹಿಂದಿನಿಂದಲೇ ಆರಂಭವಾಯಿತು ಎಂದು ಸಾರಂಗಿ ಹೇಳಿಕೊಂಡಿದ್ದರು. ಈ ನಡುವೆ, ರಾಹುಲ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು , ರಾಹುಲ್ ಗಾಂಧಿ ತಾವೇ ಬಿಜೆಪಿ ಸಂಸದರನ್ನು ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂಬಂತೆ ಎಡಿಟ್ ಮಾಡಿದ್ದಾರೆ.
ಕತ್ತರಿಸಿದ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಹುಲ್ ಗಾಂಧಿಯವರ ವಿರುದ್ಧ ಅಪಪ್ರಚಾರ ಹಾಗೂ ವೈಯಕ್ತಿಕ ತೇಜೋವಧೆ ನಡೆಸಿದ್ದಾರೆ. ಕಾಂಗ್ರೆಸ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಮಾತಾಡಿರುವ ಸಂಪೂರ್ಣ ವಿಡಿಯೋವನ್ನು ಹಂಚಿಕೊಂಡಿದೆ. ನಾನು ಸಂಸತ್ತಿನೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿಯ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ನಮಗೆ ಬೆದರಿಕೆ ಹಾಕಿದ್ದಾರೆ, ಒಳಗಡೆ ಹೋಗುವುದರಿಂದ ತಡೆದಿದ್ದಾರೆ. ಸಂಸತ್ ಭವನ ಒಳಗಡೆ ಹೋಗಲು ನಮಗೆ ಸಂಪೂರ್ಣ ಹಕ್ಕಿದೆ” ಎಂದು ಅವರು ಹೇಳಿದ್ದಾರೆ.
मैं संसद के अंदर जाने की कोशिश कर रहा था।
लेकिन BJP के सांसद मुझे रोकने की कोशिश कर रहे थे, धक्का दे रहे थे और धमका रहे थे।
ये संसद है और अंदर जाना हमारा अधिकार है।
: नेता विपक्ष श्री @RahulGandhi pic.twitter.com/wfwAGAeruf
— Congress (@INCIndia) December 19, 2024
ಸಂಸತ್ತಿನಲ್ಲಿ ಮಕರ ದ್ವಾರದ ಮುಂದೆ ಪ್ರತಿಭಟನಾ ನಿರತ ಇಂಡಿಯಾ ಒಕ್ಕುಟದ ಬಣ ಮತ್ತು ಬಿಜೆಪಿ ಸಂಸದರು ಮುಖಾಮುಖಿಯಾದಾಗ ಈ ಘಟನೆ ನಡೆದಿದೆ. ಈ ಮಧ್ಯೆ, ಮಲ್ಲಿಕಾರ್ಜುನ್ ಖರ್ಗೆ ಅವರು ಲೋಕಸಭಾ ಸ್ಪೀಕರ್ಗೆ ಪತ್ರ ಬರೆದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.
“ಸಂಸತ್ ಭವನದ ಮಕರದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ. ನಿಯಂತ್ರಣ ತಪ್ಪಿ ನಾನು ಬಿದ್ದೆ. ಇದರಿಂದ ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಾಯ ಉಂಟಾಗಿದೆ. ಇದು ನನ್ನ ಮೇಲೆ ನಡೆದ ಹಲ್ಲೆ ಅಲ್ಲ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲೆ ನಡೆದ ಹಲ್ಲೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
Here is the letter from Congress President Shri @kharge to the Hon'ble @loksabhaspeaker, urging him to order an inquiry into the incident, which is an assault not just on him personally, but also on the Leader of the Opposition, Rajya Sabha and the Congress President. pic.twitter.com/oFiAjp5ShE
— Congress (@INCIndia) December 19, 2024
ಎಡಿಟೆಡ್ ವಿಡಿಯೋವನ್ನು ಹಂಚಿಕೊಂಡ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಫ್ಯಾಕ್ಟ್ಚೆಕರ್ ಮೊಹಮದ್ ಝುಬೇರ್, “ತೇಜಸ್ವಿ ಸೂರ್ಯ, ನಿಮಗೆ ಹಿಂದಿ ಅರ್ಥವಾಗುತ್ತದೆ ಎಂಬಂತೆ ಕಾಣುತ್ತಿದೆ. ಆದರೆ, ರಾಹುಲ್ ಹೇಳಿದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಲಾಗಿದೆ. ಆದರೆ, ಇಂತಹ ತಳ್ಳಾಟದಿಂದ ನಮಗೇನು ಆಗದು ಎಂದಿದ್ದಾರೆ. ಅವರ ಪೂರ್ಣ ಹೇಳಿಕೆಯನ್ನು ನೀವು ಪರಿಶೀಲಿಸಬಹುದು” ಎಂದು ಟ್ವೀಟ್ ಮಾಡಿದ್ದಾರೆ.
Hello @Tejasvi_Surya, Not sure if you understand Hindi. But here is what Rahul Gandhi said.
Reporter: Kharge ji sath bhi dhakka mukki hui hai ( Was Kharge ji also pushed?)
Rahul Gandhi: Haan haan, Kiya hai kiya hai.. magar theek hai, Dhakka mukki se hume kuch hota nahi hai.… pic.twitter.com/cwfh66Dq9j
— Mohammed Zubair (@zoo_bear) December 19, 2024
ಆದ್ದರಿಂದ ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಯುವ ಅಗತ್ಯವಿದ್ದು, ರಾಹುಲ್ ಗಾಂಧಿ ತಳ್ಳಿದ್ದಾರೆ ಎಂದು ಸಾಬೀತು ಪಡಿಸಲು ಯಾವುದೇ ಆಧಾರಗಳಿಲ್ಲ. ಹಾಗೂ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಬಿಜೆಪಿ ಸಂಸದರ ಮೇಲೆ ಮಾಡಿರುವ ಆರೋಪಗಳು ಸಹ ಸಾಬೀತಾಗಬೇಕಿದೆ. ಹಾಗಾಗಿ, ಈ ಘಟನೆಯ ಕುರಿತ ಮುಂದಿನ ಬೆಳವಣಿಗೆಗಳನ್ನು ಆಧಾರಿಸಿ ಈ ಲೇಖನವನ್ನು ತಿದ್ದಲಾಗುವುದು.
ಇದನ್ನು ಓದಿ: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

