ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೊದಲ್ಲಿ, ಮಸೀದಿಯಂತೆ ಕಾಣುವ ಕಟ್ಟಡವೊಂದು ಬೆಂಕಿಯಲ್ಲಿ ಸುಡುತ್ತಿರುವ ದೃಶ್ಯ ಕಂಡುಬಂದಿದೆ. ಹಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಸ್ಪೇನ್ನ ಜನರು ಮಸೀದಿಗೆ ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಫೇಸ್ಬುಕ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು, “ಮುಸ್ಲಿಮರಿಂದ ನಿರಂತರವಾಗಿ ಕಿರುಕುಳಕ್ಕೊಳಗಾದ ಸ್ಪೇನ್ನ ಜನರು, ಒಂದು ಪ್ರಮುಖ ಮಸೀದಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಸ್ಪೇನ್ನ ಜನತೆ ಎಚ್ಚೆತ್ತಿದ್ದಾರೆ” ಎಂದು ಟಿಪ್ಪಣಿ ಬರೆದಿದ್ದಾರೆ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಇಂಡೋನೇಷಿಯಾದ ಸ್ಥಳೀಯ ಸುದ್ದಿ ಸಂಸ್ಥೆಯಾದ Radio Elshinta ತನ್ನ X ಖಾತೆಯಲ್ಲಿ ಅಕ್ಟೋಬರ್ 19, 2022 ರಂದು ಪ್ರಕಟಿಸಿದ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಈ ವೀಡಿಯೊದ ದೃಶ್ಯಗಳು ವೈರಲ್ ವೀಡಿಯೊದೊಂದಿಗೆ ಸಾಮ್ಯತೆ ಹೊಂದಿವೆ. ವೀಡಿಯೊದ ಶೀರ್ಷಿಕೆಯು ಇಂಡೋನೇಷಿಯನ್ ಭಾಷೆಯಲ್ಲಿದ್ದು, ಕನ್ನಡಕ್ಕೆ ಅನುವಾದಿಸಿದಾಗ, “ಉತ್ತರ ಜಕಾರ್ತಾದ ಇಸ್ಲಾಮಿಕ್ ಕೇಂದ್ರ ಮಸೀದಿಯ ಗೋಪುರ ಬೆಂಕಿಗೆ ಸಿಲುಕಿತು” ಎಂದು ತಿಳಿಯುತ್ತದೆ.
15.44: Terjadi kebakaran kubah Masjid Islamic Center, Koja, Jakarta Utara. |P. Solihin#PantauElshinta pic.twitter.com/YKNgUWLPcZ
— Radio Elshinta (@RadioElshinta) October 19, 2022
‘Jakarta mosque minar fire’ ಎಂಬ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ, ಸಿಎನ್ಎನ್ ಇಂಡೋನೇಷಿಯಾದ ವೆಬ್ಸೈಟ್ನಲ್ಲಿ 2022ರ ಅಕ್ಟೋಬರ್ 19ರಂದು ಪ್ರಕಟವಾದ ವೀಡಿಯೊ ವರದಿಯೊಂದನ್ನು ಕಂಡುಕೊಂಡೆವು. ಈ ವರದಿಯಲ್ಲಿರುವ ಹಲವು ದೃಶ್ಯಗಳು ವೈರಲ್ ವೀಡಿಯೊದೊಂದಿಗೆ ಹೊಂದಾಣಿಕೆಯಾಗಿವೆ. ಈ ಘಟನೆಯು ಇಂಡೋನೇಷಿಯಾದ ಉತ್ತರ ಜಕಾರ್ತಾದಲ್ಲಿ ಅಕ್ಟೋಬರ್ 19ರಂದು ನಡೆದಿದೆ ಎಂದು ವರದಿಯು ಖಚಿತಪಡಿಸಿದೆ. ಜಾಮಿ ಮಸೀದಿಯ ಗುಮ್ಮಟವು ನವೀಕರಣ ಕಾರ್ಯದ ಸಂದರ್ಭದಲ್ಲಿ ಬೆಂಕಿಗೆ ಸಿಲುಕಿ ಕುಸಿದುಬಿದ್ದಿದೆ. ಈ ಮಸೀದಿಯು ಜಕಾರ್ತಾ ಇಸ್ಲಾಮಿಕ್ ಸೆಂಟರ್ನ ಭಾಗವಾಗಿದ್ದು, ಇದು ಇಸ್ಲಾಮಿಕ್ ಅಧ್ಯಯನ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಚಿಂತನೆಯ ಕೇಂದ್ರವಾಗಿರುವ ಕಟ್ಟಡ ಇದಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ : Fact Check | ರಾಹುಲ್ ಗಾಂಧಿ ಅವರನ್ನು ಕನ್ಹಯ್ಯಾ ಕುಮಾರ್ ನಿಂದಿಸಿದ್ದಾರೆ ಎಂಬುದು ಸುಳ್ಳು

