ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಎರಡೂ ದೇಶಗಳು ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗುತ್ತಿರುವಾಗ, ನಾಶವಾದ ಉಡಾವಣಾ ಘಟಕಗಳನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜಲಂಧರ್ನ ಅದಂಪುರದಲ್ಲಿರುವ ಪ್ರಮುಖ ಮಿಲಿಟರಿ ನೆಲೆಯನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಹೇಳಲಾಗುತ್ತಿದೆ.

“ನಿನ್ನೆ ರಾತ್ರಿ ಆದಂಪುರದಲ್ಲಿರುವ ಪ್ರಮುಖ ಮಿಲಿಟರಿ ನೆಲೆಯ ಮೇಲೆ ದಾಳಿ ನಡೆದಿದೆ ಎಂದು ಭಾರತೀಯ ಅಧಿಕಾರಿಗಳು ದೃಢಪಡಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಇಂಡೋಪಾಕ್ ಇಂಟೆಲ್ ಎಂಬ ಎಕ್ಸ್ ಹ್ಯಾಂಡಲ್ ಸೇರಿದಂತೆ ಹಲವು ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ಗೊಂದಲಕ್ಕೆ ಕೂಡ ಕಾರಣವಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಏಪ್ರಿಲ್ 18, 2024 ರಂದು ದಿ ಮಾಸ್ಕೋ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಉಕ್ರೇನ್ ಸ್ವಾಧೀನಪಡಿಸಿಕೊಂಡ ಕ್ರೈಮಿಯಾದಲ್ಲಿ ರಷ್ಯಾದ ವಾಯುನೆಲೆಯನ್ನು ಹೊಡೆದು ಹಾಕಲಾಗಿದೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ವರದಿಯ ಪ್ರಕಾರ, ಏಪ್ರಿಲ್ 17, 2024 ರಂದು, ಉಕ್ರೇನಿಯನ್ ಪಡೆಗಳು ಉತ್ತರ ಕ್ರೈಮಿಯಾದಲ್ಲಿರುವ ರಷ್ಯಾ ನಿರ್ವಹಿಸುವ ಝಾಂಕೋಯ್ ವಾಯುನೆಲೆಯ ಮೇಲೆ ಗಮನಾರ್ಹ ದಾಳಿ ನಡೆಸಿದವು. ಈ ದಾಳಿಯು ರಾಡಾರ್ ವ್ಯವಸ್ಥೆಗಳು, ವಾಯು ರಕ್ಷಣಾ ಘಟಕಗಳು ಮತ್ತು ಇತರ ಮಿಲಿಟರಿ ಸ್ವತ್ತುಗಳನ್ನು ನಾಶಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ ಇರುವ ಚಿತ್ರವನ್ನು ಆಕ್ರಮಿತ ಕ್ರೈಮಿಯಾದಲ್ಲಿರುವ ಝಾಂಕೋಯ್ ನೆಲೆಯಲ್ಲಿ ನಾಶವಾದ ರಷ್ಯಾದ S-400 ಲಾಂಚರ್ಗಳನ್ನು ತೋರಿಸುತ್ತಿದೆ ಎಂದು ವಿವರಿಸಲಾಗಿದೆ.
On April 17, #Russia lost an S-400 SAM battery in northern #Crimea to a #Ukrainian strike. Reports claim the attack was a result of a strike from the MGM-140 ATACMS, fired from the High-Mobility Artillery Rocket System (HIMARS).https://t.co/9HZiu7HjmI pic.twitter.com/x5wHXghwrx
— EurAsian Times (@THEEURASIATIMES) April 18, 2024
ಏಪ್ರಿಲ್ 18, 2024 ರಂದು ರಾಯಿಟರ್ಸ್ ವರದಿ ಮಾಡಿದ ಪ್ರಕಾರ , ಉಕ್ರೇನ್ನ ಮಿಲಿಟರಿ ಗುಪ್ತಚರ ಸಂಸ್ಥೆ ರಷ್ಯಾ ಆಕ್ರಮಿತ ಕ್ರೈಮಿಯಾದಲ್ಲಿನ ಮಿಲಿಟರಿ ವಾಯುನೆಲೆಯ ಮೇಲೆ ಉಕ್ರೇನಿಯನ್ ದಾಳಿಯು ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ಹೇಳಿದೆ, ಇದರ ಪರಿಣಾಮವಾಗಿ ನಾಲ್ಕು S-400 ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ಲಾಂಚರ್ಗಳು, ಮೂರು ರಾಡಾರ್ ಕೇಂದ್ರಗಳು, ವಾಯು ರಕ್ಷಣಾ ನಿಯಂತ್ರಣ ಕೇಂದ್ರ ಮತ್ತು ಝಾಂಕೋಯ್ ವಾಯುನೆಲೆಯಲ್ಲಿನ ಇತರ ಮಿಲಿಟರಿ ಉಪಕರಣಗಳು ನಾಶವಾಗಿವೆ ಅಥವಾ ತೀವ್ರವಾಗಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನಿ ಮಾಧ್ಯಮಗಳು ಹಂಚಿಕೊಳ್ಳುತ್ತಿರುವ ರೀತಿ ಪಾಕಿಸ್ತಾನದ ಸೇನೆ ಭಾರತದ ಜಲಂಧರ್ನ ಆದಂಪುರದಲ್ಲಿರುವ ಮಿಲಿಟರಿ ನೆಲೆಯ ಮೇಲೆ ದಾಳಿ ಮಾಡಿದೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ರಷ್ಯಾ ಮತ್ತು ಉಕ್ರೇನ್ ಘರ್ಷಣೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋಗಳನ್ನು ಯಾವದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಧಾರಾವಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ವಿಡಿಯೋವನ್ನು ಭಾರತ-ಪಾಕಿಸ್ತಾನದ ಸಂಘರ್ಷದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

