
ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಅಲ್ಪಸಂಖ್ಯಾರತನ್ನು ಓಲೈಸಲು ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು
ಗೀತಾ ಶಿವರಾಜ್‌ಕುಮಾರ್‌ರವರು ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ ಅವರು ಮತ್ತು ಅವರ ಪತಿ ಶಿವರಾಜ್‌ಕುಮಾರ್‌ರವರು ಅಲ್ಪಸಂಖ್ಯಾರತನ್ನು ಓಲೈಸಲು ಹಣೆಯಲ್ಲಿನ ಕುಂಕುಮ ಅಳಿಸಿದ್ದಾರೆ ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಿದಾಗ ಅದೇ ರೀತಿಯ ಹಲವು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಕಂಡುಬಂದಿವೆ. ಗೀತಾ ಶಿವರಾಜ್‌ಕುಮಾರ್ ಮತ್ತು ಶಿವರಾಜ್ ಕುಮಾರ್‌ರವರು ಧರಿಸಿರುವ ಬಟ್ಟೆಗಳ ಆಧಾರದಲ್ಲಿ ಆ…