Fact Check | ರೈತನ ಜಮೀನಿಗೆ UFO ಅಪ್ಪಳಿಸಿದೆ ಎಂದು AI ನಿರ್ಮಿಸಿದ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ರೈತನ ಜಮೀನಿನಲ್ಲಿ UFO (Unidentified flying object) ಅಥವಾ ಗುರುತಿಸಲಾಗದ ಹಾರುವ ವಸ್ತು ಪತ್ತೆಯಾಗಿದೆ. ಇದು ಆಕಾಶದಲ್ಲಿ ಹಾರಾಟ ನಡೆಸುವ ವೇಳೆ ಪತನವಾಗಿದೆ. ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾರುವ ತಟ್ಟೆ ಪತ್ತೆಯಾಗಿದೆ ಎಂದು ಹಲವರು ಫೋಟೋವನ್ನು ಶೇರ್‌ ಮಾಡುತ್ತಿದ್ದು, ಇದು ವೈಜ್ಞಾನಿಕ ವಿಷಯಗಳ ಕುರಿತು ಅಧ್ಯಯನ ನಡೆಸುವವರಿಗೆ ಅಚ್ಚರಿಯನ್ನು ಉಂಟುಮಾಡಿದೆ.

ಈ ಫೋಟೋ ಕೂಡ ನೋಡಲು ನಿಜವಾದ ಫೋಟೋದಂತೆ ಭಾಸವಾಗುತ್ತಿರುವುದರಿಂದ. ಹಲವರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವೊಂದು ವೈಜ್ಞಾನಿಕ ಸುದ್ದಿಗಳ ಕುರಿತು ವರದಿ ಮಾಡುವ ಪತ್ರಿಕೆಗಳು ಕೂಡ ಇದನ್ನು ಸುಳ್ಳು ನಿರೂಪಣೆಯೊಂದಿಗೆ ಪ್ರಕಟಗೊಳಿಸಿವೆ. ಇದನ್ನು ನೋಡಿದ ಹಲವು ಮಂದಿ ವೈರಲ್‌ ಪೋಸ್ಟ್‌ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌  ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಇದಕ್ಕೆ ಸಂಬಂಧ ಪಟ್ಟ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ವೈರಲ್‌ ಪೋಸ್ಟ್‌ ನಿಜವಾಗಿದ್ದರೆ, ಈ ಕುರಿತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮಗಳು ವರದಿಯನ್ನು ಮಾಡುತ್ತಿದ್ದವು. ಹೀಗಾಗಿ ಈ ಪೋಸ್ಟ್‌ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದಲ್ಲದೆ, ವೈರಲ್ ವೀಡಿಯೊವನ್ನು ಪರಿಶೀಲಿಸುವಾಗ , ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜನರ ಮುಖ ಮತ್ತು ಕೈಗಳಲ್ಲಿ ನಾವು ಕೆಲವು ವಿಭಿನ್ನತೆಯನ್ನು ಕಂಡುಕೊಂಡಿದ್ದೇವೆ. ಇಂತಹ ವಿಭಿನ್ನತೆಗಳು ಸಾಮಾನ್ಯವಾಗಿ AI- ರಚಿತವಾದ ವಿಷಯದಲ್ಲಿ ಕಂಡುಬರುತ್ತವೆ. ಅಲ್ಲದೆ, ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ UFO ಪ್ರತಿ ದೃಶ್ಯದಲ್ಲೂ ಬದಲಾಗುತ್ತದೆ ಮತ್ತು ವೀಡಿಯೊದಾದ್ಯಂತ UFO ಒಂದೇ ರೀತಿಯಾಗಿಲ್ಲ. ಹೀಗಾಗಿ ವೈರಲ್‌ ವಿಡಿಯೋವನ್ನು AI ನಿಂದ ರಚಿಸಿರುವ ಅನುಮಾನಗಳು ಮೂಡಿವೆ. 

ಇದರಿಂದ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ @sybervisions_  ಎಂಬ ವಾಟರ್‌ ಮಾರ್ಕ್‌ ಕಂಡು ಬಂದಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದಾಗ ಇದು VFX ಕಲಾವಿದರಿಂದ TikTok , YouTube ಮತ್ತು Instagram ನಲ್ಲಿ ಅಪ್‌ಲೋಡ್ ಮಾಡಿದ ವೈರಲ್‌ ವೀಡಿಯೊ ನಮಗೆ ಕಂಡು ಬಂದಿದೆ. ಇದರಲ್ಲಿ ರೈತರ ಜಮೀನಿನಲ್ಲಿ ಪತನವಾದ UFO ಎಂದು ಶೀರ್ಷಿಕೆ ನೀಡಿರುವುದು ಕಂಡು ಬಂದಿದೆ.

ಇನ್ನು ಈ ಫೋಟೋವನ್ನು AI ನಿಂದ ರಚಿಸಲಾಗಿದೆ ಎಂಬುದನ್ನು ದೃಢ ಪಡಿಸಿಕೊಳ್ಳಲು ನಾವು ಹೈವ್‌ ಮಾರ್ಡೇಷನ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ವೈರಲ್ ವೀಡಿಯೊ AI- ರಚಿತವಾಗಿರುವ 99.3% ಸಂಭವನೀಯತೆ ಇದೆ ಎಂಬ ಫಲಿತಾಂಶ ಲಭ್ಯವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ರೈತನ ಜಮೀನಿನಲ್ಲಿ UFO ಪತನವಾಗಿದೆ ಎಂಬ ಫೋಟೋ AI ನಿಂದ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ವೈರಲ್‌ ಫೋಟೋವನ್ನು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : FACT CHECK : ಮನೆಯಲ್ಲಿ ಮಾಡಿದ ಡಿಟಾಕ್ಸ್‌ ಚಹಾದಿಂದ ಧೂಮಪಾನಿಗಳ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿಫೋಟೋವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *