Fact Check | ಅಮೆರಿಕದಲ್ಲಿ ಹಿಂದೂ ವ್ಯಕ್ತಿಯೊಬ್ಬ ಬೆಂಕಿ ಹಚ್ಚಲು ಯತ್ನಿಸಿ ಪೋಲಿಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂಬುದು ಸುಳ್ಳು

ಅಮೆರಿಕದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕಾಡ್ಗಿಚ್ಚಿನಿಂದ ನಾಶವಾದ ಪ್ರದೇಶಗಳಲ್ಲಿ ಭುವೇಶ್ ಪಟೇಲ್ ಎಂಬ ಹಿಂದೂ ವ್ಯಕ್ತಿಯೊಬ್ಬ ಬೆಂಕಿ ಹಚ್ಚಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ಹಲವಾರು ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

“ಪಜೀತ್, ಭುವೇಶ್ ಪಟೇಲ್ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಲೂಟಿ ಮಾಡಲು ಟಾರ್ಚ್ ಬ್ಲೋವರ್‌ಗಳಿಂದ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾಗ ಪೋಲಿಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ📍 ವುಡ್‌ಲ್ಯಾಂಡ್ ಹಿಲ್ಸ್, CA” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್‌ ವಿಡಿಯೋದ ಸ್ಕ್ರೀನ್‌ಶಾಟ್‌ ಪೋಟೋಗಳನ್ನು ಗೂಗಲ್‌ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2024ರ ಜನವರಿ 10ರಂದು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ಲಭ್ಯವಾಗಿದೆ. ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಅಲ್ಲಿನ ನಿವಾಸಿಗಳು ತಡೆದಿದ್ದರು. ಆದರೆ, ಮೂಲ ವಿಡಿಯೋದಲ್ಲಿ ಆತನ ಧರ್ಮ, ಹೆಸರು ಅಥವಾ ಜನಾಂಗೀಯತೆಯ ಬಗ್ಗೆ ಯಾವುದೇ ಮಾಹಿತಿ ಉಲ್ಲೇಖವಾಗಿಲ್ಲ.

2024ರ ಜನವರಿ 14ರಂದು ಪ್ರಕಟವಾದ ನ್ಯೂಸ್‌ವೀಕ್‌ನ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ವಿಡಿಯೋದಲ್ಲಿರುವ ವ್ಯಕ್ತಿ ಜುವಾನ್ ಮ್ಯಾನುಯೆಲ್ ಸಿಯೆರಾ. ಈತನು ಮೆಕ್ಸಿಕನ್ ಪ್ರಜೆಯಾಗಿದ್ದು, ಅವರು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದರು ಎಂದು ವಲಸೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೆನ್ನೆತ್ ಫೈರ್ ಬಳಿಯ ವುಡ್‌ಲ್ಯಾಂಡ್ ಹಿಲ್ಸ್‌ನಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ ಎಂದು ಆತನನ್ನು ದೂರಲಾಗಿತ್ತು. ಆತನ ಬಳಿ ಬ್ಲೋಟಾರ್ಚ್ ಇರುವುದು ಕಂಡುಬಂದಿದೆ.

ಡೈಲಿ ಮೇಲ್‌ನ ವರದಿಯು ಶಂಕಿತನನ್ನು ಜುವಾನ್ ಮ್ಯಾನುಯೆಲ್ ಸಿಯೆರಾ-ಲೀವಾ ಎಂದು ಗುರುತಿಸಿದೆ. ಬೆವರ್ಲಿ ಹಿಲ್ಸ್‌ನ ಪಶ್ಚಿಮದಲ್ಲಿರುವ ಕ್ಯಾಲಬಾಸಾಸ್‌ನಲ್ಲಿ ನಿವಾಸಿಗಳು ಆತನನ್ನು ತಡೆಯುವ ಮೊದಲು ಆತ ಹಳದಿ ಬ್ಲೋಟಾರ್ಚ್‌ನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕದಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಹಿಂದೂ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ವೈರಲ್‌ ವಿಡಿಯೋ ಸುಳ್ಳು. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check | ಮಹಾ ಕುಂಭಮೇಳದಲ್ಲಿ ಮಹಿಳೆಯೊಬ್ಬಳು ನಕ್ಲೇಸ್‌ ಕಳೆದುಕೊಂಡಿದ್ದಾಳೆ ಎಂದು 2024ರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *