ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಟಾಟಾ ಗ್ರೂಪ್ ₹3,249 ಗೆ 108 ಕಿ.ಮೀ ವರೆಗೆ ಕ್ರಮಿಸಬಲ್ಲ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಬೈಸಿಕಲ್ ಫೋಟೋವನ್ನು ಕೂಡ ಹಂಚಿಕೊಳ್ಳಲಾಗಿದೆ. ಇನ್ನು ಇಲ್ಲಿ ಟಾಟಾ ಗ್ರೂಪ್ ಅನ್ನು ಉಲ್ಲೇಖಿಸಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವುದರಿಂದ ಈ ಸುದ್ದಿ ಸಾಕಷ್ಟು ವೈರಲ ಕೂಡ ಆಗುತ್ತಿದೆ.
Breaking News : 📣📣📣
Revolutionary product from TATATata Electric Cycle
Price : ₹3,249
Range : 108 KM/Charge
Modes : Eco/Sports/Normal
Battery : 36V, 10Ah Li-Ion
Display: LCD (speed,🔋,distance traveled & mode)
App : Tracking, Locating#TataECycle#GoGreen pic.twitter.com/8ROgbmTz1d— 🥳 Jammy 🥳 (@JammyMarso) February 20, 2025
ಇನ್ನು ಇದೇ ಸುದ್ದಿಯನ್ನು ಅಚ್ಚರಿ ಎಂಬಂತೆ ಪರಿಶೀಲನೆಯನ್ನೂ ನಡೆಸದೆ ಕೆಲವೊಂದು ವೆಬ್‌ಸೈಟ್‌ಗಳೂ ಹಂಚಿಕೊಂಡಿವೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಟಾಟಾ ಸಮೂಹದ ಬಗ್ಗೆ ಮೆಚ್ಚುಗೆಯ ಸಾಲುಗಳನ್ನು ಕೂಡ ಬರೆಯುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಮೂಲ ಬೈಸಿಕಲ್ ಫೋಟೋ ಕಂಡು ಬಂದಿದೆ. ಸ್ಟ್ರೈಡರ್ ಬೈಸಿಕಲ್ ಅನ್ನು ಜೀಟಾ ಪ್ಲಸ್ 22-ಇಂಚಿನದು ಎಂದು ಉಲ್ಲೇಖಿಸಲಾಗಿದೆ. ಸ್ಟ್ರೈಡರ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ 25 ಫೆಬ್ರವರಿ 2025 ರ ಹೊತ್ತಿಗೆ, ಬೈಸಿಕಲ್‌ನ ಬೆಲೆ ₹27,995 ಎಂದು ದೃಢಪಡಿಸಲಾಗಿದೆ ಮತ್ತು ವರದಿಗಳು ಇದನ್ನು 2023 ರಲ್ಲಿ ₹26,995 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಮೂಲಕ ನಮಗೆ ಬೈಸಿಕಲ್‌ನ ಬೆಲೆ ₹27,995 ಎಂಬುದು ಖಚಿತವಾಗಿದೆ. ಆದರೂ ನಾವು ಟಾಟಾ ಸಮೂಹ ಯಾವುದಾದರು ಎಲೆಕ್ಟ್ರಿಕ್ ಬೈಸಿಕಲ್ ಅನ್ನು 3,249 ರೂ. ಗೆ ಬಿಡುಗಡೆ ಮಾಡರುವ ಕರಿತು ಅಧಿಕೃತ ವರದಿಗಳು ಪ್ರಕಟವಾಗಿವೆಯೇ ಎಂದು ಪರಿಶೀಲನೆಯನ್ನು ನಡೆಸಿದೆವು. ಆದರೆ ಈ ಕುರಿತು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಹಾಗೂ ಅಧಿಕೃತ ಸುದ್ದಿ ಸಂಸ್ಥೆಗಳು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ. ಒಂದು ವೇಳೆ ಸುದ್ದಿ ನಿಜವಾಗಿದ್ದಾರೆ ಮಾಧ್ಯಮ ವರದಿಗಳು ಕಂಡು ಬರಬೇಕಿತ್ತು. ಹೀಗಾಗಿ ವೈರಲ್ ಪೋಸ್ಟ್ ಜನ ಸಾಮಾನ್ಯರ ದಾರಿ ತಪ್ಪಿಸುತ್ತಿದೆ ಎಂಬುದು ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಟಾಟಾ ಸಮೂಹವು 3,249 ರೂ.ಗೆ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆಗೊಳಿಸಿದೆ ಎಂಬುದು ಸುಳ್ಳಾಗಿದೆ. ಬೈಸಿಕಲ್‌ನ ಮೂಲ ಬೆಲೆ 27,995 ರೂ. ಆಗಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ :Fact Check | ಮಹಾ ಕುಂಭಮೇಳದಲ್ಲಿ ಅಘೋರಿಯೊಬ್ಬರು ಗಾಳಿಯಲ್ಲಿ ಹಾರುತ್ತಿದ್ದರು ಎಂದು AI ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ
